ಪಾಲಿಕೆ ಚುನಾವಣೆ: ಪ್ರತಿಷ್ಠೆಯ ಕಣವಾಗಲಿರುವ 3 ನೇ ವಾರ್ಡು

ಎನ್.ವೀರಭದ್ರಗೌಡ
ಬಳ್ಳಾರಿ ಏ 1 : ಈ ತಿಂಗಳ 27 ರಂದು ನಡೆಯಲಿರುವ ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡುಗಳ ಚುನಾವಣೆಯಲ್ಲಿ ಈ ಬಾರಿ ಪಾಲಿಕೆಯಲ್ಲಿಯೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಮತ್ತು ಜನರಲ್ ಆಗಿರುವ 3 ನೇ ವಾರ್ಡು ಬಹುತೇಖ ಈಬಾರಿ ಹಲವು ರೀತಿಯಲ್ಲಿ ಪ್ರತಿಷ್ಠೆಯ ಕಣವಾಗಲಿದೆಂದು ಕೇಳಿ ಬರುತ್ತಿದೆ.

ಕಾಂಗ್ರೆಸ್‍ನಲ್ಲಿ ಟಿಕೆಟ್‍ಗಾಗಿ ಪೈಪೋಟಿ

ಕಾಂಗ್ರೆಸ್‍


ಕಳೆದ ಬಾರಿ ಈ ವಾರ್ಡಿನಲ್ಲಿ ಕೇವಲ 5 ಸಾವಿರ ಮತದಾರರಿದ್ದರು. ಆದರೆ ಈ ಬಾರಿ ವಾರ್ಡು ವಿಂಗಡಣೆಯಿಂದ 11 ಸಾವಿರ ಮೀರಿದೆ. ಇದರಿಂದಾಗಿ ನಗರದಲ್ಲಿ ಇದುವೇ ಬೃಹತ್ ವ್ಯಾಪ್ತಿಯನ್ನು ಹೊಂದಿರುವ ವಾರ್ಡಾಗಿ ಪರಿಣಮಿಸಿದೆ.
ಹೋದಸಲ ಇಲ್ಲಿಂದ ಕಾಂಗ್ರೆಸ್ ಅಭ್ಯರ್ಥಿ ಬೆಣಕಲ್ ಬಸವರಾಜಗೌಡ ಆಯ್ಕೆಯಾಗಿ ಉಪ ಮೇಯರ್ ಸಹ ಆಗಿದ್ದರು.ಅವರು ಮತ್ತೊಮ್ಮೆ ಇದೇ ವಾರ್ಡಿನಿಂದ ಸ್ಪರ್ಧೆ ಮಾಡಲು ರೆಡಿಯಾಗಿದ್ದಾರೆ.
ಇನ್ನು ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಸೇವೆಯ ಕಾರ್ಯಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿರುವ ಮುಂಡ್ಲೂರು ಪ್ರಭಂಜನ್ ಕುಮಾರ್ ಅವರು ಸಹ ಟಿಕೆಟ್ ಬಯಸಿದ್ದಾರೆ. ಹಾಗೆಯೇ ಅಲುವೇಳು ಸುರೇಶ್ ಮತ್ತು ತಮ್ಮ ವಾರ್ಡು ಇದರಲ್ಲಿ ವಿಲೀನ ಆಗಿರುವುದರಿಂದ ಮಂಗಳ ಮುಖಿ ಮಾಜಿ ಕಾಪೊರೇಟರ್ ಫರ್ವಿನ್ ಬಾನು ಸಹ ತಮಗೆ ಈ ವಾಡಿನಿಂದಲೇ ಸ್ಪರ್ಧೆ ಮಾಡಲು ಟಿಕೆಟ್ ನೀಡುವಂತೆ ಕೇಳುತ್ತಿದ್ದಾರೆ.ನಾಲ್ಕು ಜನರಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ದೊರೆಯುತ್ತದೆ ಎಂಬುದು ಕುತೂಹಲದಿಂದ ಕೂಡಿದೆ.
ಕಳೆದ ಬಾರಿ ಮಾಜಿ ಶಾಸಕ ಅನಿಲ್ ಲಾಡ್ ಫರ್ವೀನ್ ಬಾನು ಅವರಿಗೆ ಟಿಕೆಟ್ ಕೊಡಿಸಿದ್ದಲ್ಲದೆ, ಅವರನ್ನು ಗೆಲ್ಲಿಸಿ ತರುವ ಪ್ರಯತ್ನವನ್ನೂ ಸಹ ಮಾಡಿದ್ದರು. ಆದರೆ ಅವರು ಸಧ್ಯ ನಗರದ ಕಡೆ ಮುಖ ಮಾಡಿದಂತೆ ಕಾಣುತ್ತಿಲ್ಲ. ಹಾಗಾಗಿ ಫರ್ವಿನ್ ಬಾನುಗೆ ಗಾಢ್ ಫಾದರ್ ಇಲ್ಲವಾಗಿದೆ.
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಅನೇಕ ರಾಜ್ಯ ಮುಖಂಡರ ಸಂಪರ್ಕ ಹೊಂದಿರುವ, ಸ್ಥಳೀಯ ಮುಖಂಡರೊಂದಿಗೂ ಸಂಪರ್ಕ ಇಟ್ಟುಕೊಂಡಿರುವ ಬೆಣಕಲ್ ಬಸವರಾಜಗೌಡ ಮತ್ತೊಮ್ಮೆ ಟಿಕೆಟ್ ತಂದುಕೊಳ್ಳುವ ಸಾಮರ್ಥ್ಯಹೊಂದಿದ್ದಾರೆ. ಆದರೆ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಸಂಪರ್ಕ ಹೊಂದಿರುವ ಮತ್ತು ಮುಂಡ್ಲೂರು ಮನೆತನದ ಯುವ ಮುಖಂಡ ಪ್ರಭಂಜನ್ ಕುಮಾರ್ ವಾರ್ಡಿನ ಜನರೊಂದಿಗೆ ಹಲವು ರೀತಿಯ ಸಾಮಾಜಿಕ ಸೇವಾಕಾರ್ಯಗಳನ್ನು ಕೈಗೊಳ್ಳುವ ಮೂಲಕ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಜನಾಭಿಪ್ರಾಯದ ಮೇಲೆ ಟಿಕೆಟ್ ದೊರೆಯುತ್ತದೆಂಬ ನಿರೀಕ್ಷೆಯಲ್ಲಿದ್ದಾರೆ.
ಅಲುವೇಲು ಸುರೇಶ್ ಸಹ ಕಳೆದ ಕೆಲ ತಿಂಗಳಿಂದ ವಾರ್ಡಿನಲ್ಲಿ ಸ್ಪರ್ಧೆ ಮಾಡಬೇಕೆಂದು ಆರೋಗ್ಯ ಪರೀಕ್ಷೆ ಶಿಬಿರ ಸೇರಿದಂತೆ ಹಲವು ರೀತಿಯ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಕೈಗೊಂಡಿದ್ದು, ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ರಫಿ ಸೇರಿದಂತೆ ನಗರದ ಮಾಜಿ ಶಾಸಕ ಬೆಂಬಲದೊಂದಿಗೆ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದಾರೆ.
ಎಲ್ಲವುದಕ್ಕೂ ಚುನಾವಣೆ ಎಂದರೆ, ಜಾತಿ, ಜನ ಸಂಪರ್ಕ, ಮುಖಂಡರ ಬೆಂಬಲದ ಜೊತೆ ಹಣವೂ ಮುಖ್ಯವಾಗಿರುವುದರಿಂದ ಪಕ್ಷ ಯಾರನ್ನು ಪರಿಗಣಿಸಿ ಟಿಕೆಟ್ ನೀಡುತ್ತದೆ ಎಂಬುದನ್ನು ತಿಳಿಯಬೇಕಿದೆ.


ಯುವನಾಯಕನಿಗಾಗಿ ಕಾದಿರುವ ಬಿಜೆಪಿ

ಸೋಮಶೇಖರ ರೆಡ್ಡಿ ಅವರ ಪುತ್ರ ಶ್ರವಣಕುಮಾರ ರೆಡ್ಡಿ

ಬಿಜೆಪಿಯಿಂದ ಸ್ಪರ್ಧೆ ಮಾಡಲು ಗೌಳಿ ಸಮುದಾಯ ಸೇರಿಂದತೆ ಇತರೇ ಸಮುದಾಯದ ಕಾರ್ಯಕರ್ತರು ರೆಡಿಯಾಗಿದ್ದಾರೆ. ಇಂತಹವರನ್ನೇ ಎಂದು ಯಾರನ್ನೂ ಇನ್ನು ಗುರುತಿಸಿಲ್ಲ. ಮಾಜಿ ಕೌನ್ಸಿಲರ್ ಚಂದ್ರ, ಸಿದ್ದನಗೌಡ ಮದೊಲಾದವರು ಇದ್ದರೂ ಯುವ ಸಮುದಾಯದ ಅಭ್ಯರ್ಥಿಯಾಗಬೇಕು ಎಂಬುದು ವಾರ್ಡಿನ ಜನರ ಅಭಿಪ್ಸೆಯಾಗಿದೆಯಂತೆ. ಅದಕ್ಕಾಗಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರ ಪುತ್ರ ಶ್ರವಣಕುಮಾರ ರೆಡ್ಡಿ ಅವರನ್ನು ಈ ವಾರ್ಡಿನಿಂದ ಕಣಕ್ಕಿಳಿಸಬೇಕೆಂದು ವಾರ್ಡಿನ ಮುಖಂಡರು ಶಾಸಕರಲ್ಲಿ ಮನವಿ ಮಾಡಿದ್ದಾರಂತೆ. ಅದಕ್ಕೆ ಶಾಸಕರು ನೋಡೋಣಾ ಎಂದಿದ್ದಾರಂತೆ.
ಶ್ರವಣಕುಮಾರ್ ರೆಡ್ಡಿ ಅವರನ್ನು ಕೇಳಿದರೆ ಅಪ್ಪ ಹೇಗೆ ಹಾಗೆ ಎಲ್ಲೇ ನಿಲ್ಲಿಸಿದರೂ ನಾನು ರೆಡಿ. ಈ ಬಾರಿ ಯಾವುದಾರೂ ಒಂದು ವಾರ್ಡಿನಲ್ಲಿ ಸ್ಪರ್ಧೆ ಇರುತ್ತೆ ಎಂದಿದ್ದಾರೆ.
ಇದೇ ವಾರ್ಡಿನಿಂದ ಅವರು ಕಣಕ್ಕಿಳಿದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಗರದಲ್ಲಿ ಈ ವಾರ್ಡು ಪ್ರತಿಷ್ಠೆಯ ಕಣವಾಗುವುದಂತೂ ಶತಸಿದ್ದ.


ಕಳೆದ ಬಾರಿ ಗೆದ್ದಿದ್ದ ತಾವು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದು. ಕ್ಷೇತ್ರ ಸಮಾನ್ಯವಾಗಿರುವುದರಿಂದ ಮತ್ತೊಮ್ಮೆ ಸ್ಪರ್ಧೆ ಮಾಡಲು ಅವಕಾಶ ಇದೆ ಅದಕ್ಕಾಗಿ ಟಿಕೆಟ್ ಕೇಳುತ್ತಿರುವೆ. ನಾನೇನು ಕಾಪೊರೇಟರ್ ಆಗಿ ಒಂದು ಸ್ವಂತ ಮನೆಯನ್ನೂ ಕಟ್ಟಿಸಿಕೊಂಡಿಲ್ಲ. ಬಂದಿದ್ದೆಲ್ಲ ಬಡ ಜನರ ಸೇವೆಗೆ ನೀಡಿದ್ದೇನೆ. ಇಂದಿಗೂ ನಾನು ಸಂಜೆ ಹೊಟೇಲ್ ಮಾಡಿ ಜೀವನ ನಡೆಸುತ್ತಿರುವೆ. ಪಕ್ಷ ನನ್ನ ಸೇವೆಯನ್ನು ಪರಿಗಣಿಸುತ್ತದೆಂದು ನಂಬಿರುವೆ
ಫರ್ವಿನ್‍ಬಾನು, ಮಾಜಿ ಕಾರ್ಪೊರೇಟರ್ 4 ನೇ ವಾರ್ಡು.

ಫರ್ವಿನ್‍ಬಾನು, ಮಾಜಿ ಕಾರ್ಪೊರೇಟರ್ 4 ನೇ ವಾರ್ಡು.


ಕಾರ್ಪೊರೇಟರ್ ಆಗಿ, ಉಪ ಮೇಯರ್ ಆಗಿ ವಾರ್ಡಿನ ಅಭಿವೃದ್ದಿಗೆ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಪಕ್ಷದಲ್ಲೂ ಸಹ ನಾನು ನಿಷ್ಟಾವಂತನಾಗಿ ಇದ್ದೇನೆ. ವಾರ್ಡು ಈಗ ವಿಸ್ತಾರಗೊಂಡಿದೆ. ಇದೇ ವಾರ್ಡಿನಿಂದ ಮತ್ತೊಮ್ಮೆ ಸ್ಪರ್ಧೆ ಮಾಡಲು ಅವಕಾಶ ಇದೆ ಅದಕ್ಕಾಗಿ ಟಿಕೆಟ್ ಕೇಳಿದ್ದೇನೆ. ಕೊಡುವ ಬಗ್ಗೆ ಪಕ್ಷದ ತೀರ್ಮಾನಕ್ಕೆ ಬದ್ಧ. ಯಾರಿಗೇ ಟಿಕೆಟ್ ನೀಡಿದರೂ ಅವರ ಗೆಲುವುಗೆ ಶ್ರಮಿಸುವೆ
ಬೆಣಕಲ್ ಬಸವರಾಜಗೌಡ, ಮಾಜಿ ಉಪ ಮೇಯರ್

ಬೆಣಕಲ್ ಬಸವರಾಜಗೌಡ, ಮಾಜಿ ಉಪ ಮೇಯರ್

ನಮ್ಮ ಕುಟುಂಬ ಕಾಂಗ್ರೆಸ್‍ಗೆ ಸ್ವಾತಂತ್ರ್ಯ ಪೂರ್ವದಿಂದಲೂ ನಿಷ್ಟಾವಂತರಾಗಿ ಸೇವೆಸಲ್ಲಿಸುತ್ತಾ ಬಂದಿದೆ. ಕುಟುಂಬದಲ್ಲಿ ಅನೇಕ ಹಿರಿಯರು ಶಾಸಕರು, ಸಚಿವರು ಆಗಿದ್ದಾರೆ. ಈಗ ನವ ಪೀಳಿಗೆಯಾಗಿ ನಾವು ಯುವಕರು ರಾಜಕೀಯಕ್ಕೆ ಬಂದಿದ್ದೇವೆ. ಜನರ ಸೇವೆನ್ನು ಹಲವು ಸಮಾಜಿಕ ಕಾರ್ಯಚಟುವಟಿಕೆಗಳ ಮೂಲಕ ಮಾಡಿದೆ. ಕಾಪೊರೇಟರ್ ಆಗಿ ಜನರಿಗೆ ಮತ್ತಷ್ಟು ಸೇವೆ ಮಾಡಲು ಬಯಸಿದೆ.
ಎಂ.ಪ್ರಭಂಜನ್ ಕುಮಾರ್ ಕಾಂಗ್ರೆಸ್ ಯುವ ಮುಖಂಡರು

ಎಂ.ಪ್ರಭಂಜನ್ ಕುಮಾರ್ ಕಾಂಗ್ರೆಸ್ ಯುವ ಮುಖಂಡರು

ಬಡ ಕಟುಂಬದವನಾಗಿರುವ ನಾನು ಕಾಂಗ್ರೆಸ್ ಪಕ್ಷದಲ್ಲಿ ಸೇವೆಗೆ ಸದಾ ಸಿದ್ದನಾಗಿರುವ ನಾನು ಜನ ಸೇವೆ ಮಾಡುಲು ಬಯಸಿ. ಮೂರನೇ ವಾರ್ಡಿನ ಟಿಕೆಟ್ ಕೇಳಿರುವೆ. ಪಕ್ಷ ಯಾವು ರೀತಿ ತೀರ್ಮಾನ ತೆಗೆದುಕೊಳ್ಳುತ್ತದೆ ಕಾದು ನೋಡಬೇಕಿದೆ.
ಅಲುವೇಲು ಸುರೇಶ್ ಕಾಂಗ್ರೆಸ್ ಮುಖಂಡ.

ಅಲುವೇಲು ಸುರೇಶ್ ಕಾಂಗ್ರೆಸ್ ಮುಖಂಡ.