ಪಾಲಿಕೆ ಚುನಾವಣೆ ಪ್ರಚಾರದಲ್ಲಿ ಸಚಿವ ಶ್ರೀರಾಮುಲು ಮೊಗದಲ್ಲಿ ಮಂದಹಾಸ

ಬಳ್ಳಾರಿ ಏ 24 : ತಮ್ಮ ರಾಜಕೀಯ ಜೀವನವನ್ನು ಸ್ಥಳೀಯ ಸಂಸ್ಥೆ ನಗರಸಭೆಯಿಂದಲೇ ಆರಂಭಿಸಿ. ಶಾಸಕರು, ಸಚಿವರು, ಸಂಸದರಾಗಿ ರಾಜಕೀಯ ಜೀವನ ಕಂಡು ಕೊಂಡಿರುವ ಬಿ.ಶ್ರೀರಾಮುಲು ಅವರು ಪ್ರಸ್ತುತ ನಡೆಯುತ್ತಿರುವ ಪಾಲಿಕೆಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ತಮ್ಮ ಮುಖದಲ್ಲಿ ಮಂದಹಾಸ ಹೊಂದಿ ಮುನ್ನಡೆಯುತ್ತಿರುವುದು. ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಗರಲ್ಲಿ ಇನ್ನಿಲ್ಲದ ಶಕ್ತಿಯನ್ನು ತುಂಬಿದೆ. ಅಷ್ಟೇ ಅಲ್ಲದೆ ಮತದಾರರನ್ನು ಈ ನಗು ಮುಖ ಆಕರ್ಷಿಸಿದೆ ಎನ್ನಲಾಗುತ್ತಿದೆ.
ಪಾಲಿಕೆಯ ಚುನಾವಣೆ ಘೋಷಣೆ ದಿನದಿಂದಲೇ, ಮಸ್ಕಿ ಉಪ ಚುನಾವಣೆಯ ಪ್ರಚಾರದಲ್ಲಿದ್ದ ಅವರ ಮನಸ್ಸೆಲ್ಲ ಬಳ್ಳಾರಿಯನ್ನು ನೆನೆಯುತ್ತಿತ್ತು. ತಕ್ಷಣ ಅವರು ಕಾರ್ಯಪ್ರವೃತ್ತರಾಗಿ ದಿನಂ ಪ್ರತಿ ಬೆಳಿಗ್ಗೆಯಿಂದ ಸಂಜೆವರೆಗೆ ನಗರದಲ್ಲಿ 35 ರಿಂದ ನಲವತ್ತು ಕಿಲೋ ಮೀಟರ್ ಸಂಚರಿಸಿ ಮತಯಾಚನೆ ಮಾಡಿದರೂ ತಮ್ಮ ಮುಖದಲ್ಲಿನ ಮಂದಹಾಸವನ್ನು ಕಡಿಮೆ ಮಾಡಿಕೊಳ್ಳದೆ. ಮತದಾರರತ್ತ ಕೈ ಮುಗಿದು ಮತಯಾಚನೆ ಮಾಡಿದ್ದು ಎಲ್ಲರ ಗಮನಸೆಳೆದಿದೆ.
ಕರೋನಾ ದಿಂದ ಎರೆಡು ದಿನಗಳ ಬಹಿರಂಗ ಪ್ರಚಾರ ಕಡಿಮೆಯಾಗಿದ್ದರಿಂದ ಮತ್ತಷ್ಟು ವಾರ್ಡುಗಳಲ್ಲಿ ನಿನ್ನೆ ಮತ್ತು ಮೊನ್ನೆ ರಾತ್ರೀ ವರೆಗೂ ಪ್ರಚಾರ ಮಾಡಿ ತಾವು ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಪ್ರತಿ ಅಂಶಗಳನ್ನು ಚಾಚು ತಪ್ಪದೆ ಜಾರಿಗೆ ತರಲು ಭದ್ದರಾಗಿರುವುದಾಗಿ ಹೇಳಿದ್ದಾರೆ.
50 ವರ್ಷ ದಾಟಿರುವ ಶ್ರೀರಾಮುಲು ಪಾದರಂಸೆದಂತೆ ಪ್ರಚಾರದಲ್ಲಿ ತೊಡಗಿಸಿ ಕೊಂಡಿರುವುದು ಪ್ರತಿ ಪಕ್ಷದವರು ಸಹ ಮೂಗಿನ ಮೇಳೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದೆ. ಕಳೆದ ಬಾರಿ ಹಲವು ಕಾರಣಗಳಿಂದ ಪಾಲಿಕೆ ಕೈ ತಪ್ಪಿತು ಈ ಬಾರಿ ಯಾವುದೇ ಕಾರಣಕ್ಕೂ ಅದು ತಮ್ಮ ಪಕ್ಷದ ಆಡಳಿತದಿಂದ ಕೂಡಿರಬೇಕು ಎಂಬ ಮಹದಾಸೆ ಅವರದ್ದಾಗಿದೆ.