ಪಾಲಿಕೆ ಚುನಾವಣೆ ಕಿರಣ್ ಕುಮಾರ್ ಸ್ಪರ್ಧೆಗೆ ಅವಕಾಶ ನೀಡಲು ನ್ಯಾಯಾಲಯ ಸೂಚನೆ


ಬಳ್ಳಾರಿ ಏ 20 : ಈ ತಿಂಗಳ 27 ರಂದು ನಡೆಯುವ ಇಲ್ಲಿನ ಮಹಾನಗರ ಪಾಲಕೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರುವ ಒಂದನೇ ವಾರ್ಡಿನಿಂದ ಹೆಚ್.ಎಂ.ಕಿರಣ್ ಕುಮಾರ್ ಅವರಿಗೆ ಸ್ಪರ್ಧೆ ಮಾಡಲು ಚಿನ್ಹೆ ನೀಡಿ ಅವಕಾಶ ಮಾಡಿಕೊಡ ಬೇಕೆಂದು ಧಾರವಾಡ ಹೈಕೊರ್ಟು ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಚುನಾವಣಾಧಿಕಾರಿಗೆ ಇಂದು ಸೂಚನೆ ನೀಡಿದೆಯಂತೆ.

ಸಂಜೆವಾಣಿಗೆ ಈ‌ ಕುರಿತು ಸ್ವತಃ ಕಿರಣ್ ಕುಮಾರ್ ಮಾಹಿತಿ‌ ನೀಡಿದ್ದಾರೆ.
ಈ ತಿಂಗಳ 15 ರಂದು ಅವರು‌1 ವಾರ್ಡಿಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದರು. ಮರುದಿನ ನಾಮಪತ್ರ ಪರಿಶೀಲನೆ ಮಾಡಿ ಸ್ವೀಕರಿಸಿದ ಬಗ್ಗೆ ನೋಟೀಸ್ ಬೋರ್ಡ್ ನಲ್ಲಿ ಹಾಕಿದ್ದರು.
ಆದರೆ ಆನಂತರ ಕಿರಣ್ ಕುಮಾರ್ ನಾಮಪತ್ರದೊಂದಿಗೆ ಸಲ್ಲಿಸಿದ್ದ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಸ್ಥಳೀಯವಾಗಿ‌ ಪಡೆದಿದ್ದು ಅಲ್ಲ. ಅವರು ಬಳ್ಳಾರಿ ನಿವಾಸಿಗಳೆಂದು ಅಫಿಡೆವಿಟ್ ನೀಡಿ, ಜಾತಿ‌ಒ್ರಮಾಣ ಪತ್ರವನ್ನು ಬೆಂಗಳೂರು ನಿವಾಸದ ವಿಳಾಸದಲ್ಲಿ ನೀಡಿದ್ದರಿಂದ ನಾಮಪತ್ರ ತಿರಸ್ಕೃತಗೊಳಿಸಿತ್ತು.
ಒಮ್ಮೆ ಅಂಗೀಕಾರ, ಮರು ದಿನ‌ ತಿರಸ್ಕಾರ ಮಾಡಿದ್ದನ್ನು
ಪ್ರಶ್ನಿಸಿ ಕಿರಣ್ ಕುಮಾರ್ ನ್ಯಾಯಾಲಯದ ಮೊರೆ ಹೋಗಿದ್ದರು.
ಇಂದು‌ ನ್ಯಾಯಾಲಯ ವಿಚಾರಣೆ ನಡೆಸಿ ಕಿರಣ್ ಕುಮಾರ್ ಅವರಿಗೆ ಸ್ಪರ್ಧೆ ಗೆ ಚಿನ್ಹೆ ನೀಡಿ ಅವಕಾಶ ಕಲ್ಪಿಸಬೇಕು ಎಂದು ಆದೇಶ ನೀಡಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರನ್ನು ವಿಚಾರಿಸಿದರೆ ನ್ಯಾಯಾಲಯ ಆದೇಶ ತೆಗೆದುಕೊಂಡು‌ಬರಲಿ ನೋಡುವ ಎಂದರು.