ಪಾಲಿಕೆ ಚುನಾವಣೆಗೆ 160 ಅರ್ಜಿ ಎಂಟು ತಂಡಗಳಿಂದ ಅಭ್ಯರ್ಥಿಗಳ ಆಯ್ಕೆ : ಖಾದರ್

ಬಳ್ಳಾರಿ, ಏ.08: ಇಲ್ಲಿನ‌ ಮಹಾನಗರ ಪಾಲಿಕೆಯ 39 ವಾರ್ಡುಗಳಲ್ಲಿ ಸ್ಪರ್ಧೇ ಮಾಡಲು ಪಕ್ಷದಿಂದ
160 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು. ಅವನ್ನು ಎಂಟು ತಂಡಗಳನ್ನಾಗಿ ಮಾಡಿ ಅಭ್ಯರ್ಥಿಗಳ ಅಯ್ಕೆ ಮಾಡುತ್ತೇವೆ ಎಂದು‌ ಚುನಾವಣಾ ಉಸ್ತುವಾರಿ ಯು.ಟಿ.ಖಾದರ್ ಹೇಳಿದ್ದಾರೆ.
ಅವರಿಂದು‌ ನಗರದ ನಕ್ಷತ್ರ ಹೋಟೆಲ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಚುನಾವಣೆಗೆ ಕಾಂಗ್ರೆಸ್ ಸಂಪೂರ್ಣವಾಗಿ ಸಜ್ಜಾಗಿದೆ. ವಿವಿಧ ಟೀಂಗಳನ್ನ ಮಾಡಿ ಸ್ಥಳೀಯ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆಂದರು.
ವಿಧಾನಪರಿಷತ್ ಸದಸ್ಯರುಗಳಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಮಾಜಿ ಸದಸ್ಯ ನಿರಂಜನ ನಾಯ್ಡು, ಗ್ರಾಮೀಣ ಶಾಸಕ‌ ಬಿ.ನಾಗೇಂದ್ರ, ರಾಜ್ಯ ಸಭಾ ಸದಸ್ಯ ನಾಸಿರ್ ಹುಸೇನ್, ಮಾಜಿ ಶಾಸಕರಾದ ಅನಿಲ್ ಲಾಡ್, ಸೂರ್ಯ ನಾರಾಯಣರೆಡ್ಡಿ ಮತ್ತು ಜೆ.ಎಸ್ ಆಂಜನೇಯಲು ಅವರಿಗೆ ತಲಾ ಐದು ವಾರ್ಡುಗಳ ಜವಾವ್ದಾರಿ ನೀಡಲಿದೆ ಎಂದರು.
ಎ.14 ರಂದು ಅಭ್ಯರ್ಥಿಗಳ ಪಟ್ಡಿ ಬಿಡುಗಡೆ ಮಾಡಲುದೆಂದು ತಿಳಿಸಿದರು.
ನಮ್ಮ ಸರ್ಕಾರ ಇದ್ದಾಗ ಪಾಲಿಕೆಗಳಿಗೆ ಬಜೆಟ್ ನಲ್ಲಿ ಸಾಕಷ್ಟು ಹಣ ಮೀಸಲಿಟ್ಟಿತ್ತು. ಆದರೆ ಜನರ ಹಿತಾಸಕ್ತಿ ಇಲ್ಲದ ಬಿಜೆಪಿ ಪಾಲಿಕೆಗಳಿಗೆ ಅನುದಾನ ಕಡಿತಗೊಳಿದೆ. ಅದಕ್ಕಾಗಿ ಆ ಪಕ್ಷದ ಅಭ್ಯರ್ಥಿಗಳಿಗೆ ಮತ ಕೊಡಬಾರದು ಎಂದರು.
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಸರ್ಕಾರದ ವಿರುದ್ದ ಖಾದರ್ ಅವರು ವಾಗ್ದಾಳಿ ನಡೆಸಿ‌. ಕೆಎಸ್ಆರ್ ಟಿ ಸಿ ಅವರು ಸ್ಟ್ರೈಕ್ ಮಾಡ್ತಿರೋದು ಬೇಸರದ ವಿಷಯವಾಗಿದೆ.
ಅವರ ಸಮಸ್ಯೆಯನ್ನ ತಾಯಿ ಹೃದಯದಿಂದ ನೋಡಬೇಕು ಅವರನ್ನ ವೈರಿಗಳಂತೆ ನೋಡಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ನಾವು ಬಡವರ ಪರ ಅಂತಾರೆ ಆದರೆ 12 ಸಾವಿರ ಸಂಬಳದಲ್ಲಿ ಹೇಗೆ ಅವರು ಜೀವನ ನಡೆಸಬೇಕು. ಆರನೇ ವೇತನ ಆಯೋಗ ಮಾಡಲಿಕ್ಕೆ ಕಷ್ಟ ಏನು ಎಂದರು.
ಸರ್ಕಾರ ಬಡ ನೌಕರರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಇದನ್ನು ಕಾಂಗ್ರೆಸ್ ಖಂಡಿಸುತ್ತದೆಂದರು.
ಶಾಸಕ ನಾಗೇಂದ್ರ ಮಾತನಾಡಿ, ಊಹಾ ಪೋಹಗಳಿಗೆ ಕಿವಿಕೊಡಬೇಡಿ ಎಂದರು. ನಾವು ಮೂವತ್ತು ಸ್ಥಾನಗಳಲ್ಲಿ‌ ಆಯ್ಕೆಯಾಗುತ್ತೇವೆ ಎಂದರು.
ಮಾಜಿ ಶಾಸಕ‌ ಅನಿಲ್ ಲಾಡ್ ಮಾತನಾಡಿ, ನಾವು‌ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ ಅದನ್ನು‌ನೋಡಿ ಮತ ನೀಡಲಿದ್ದಾರೆ ಎಂದರು. ಹಾಗಾದರೆ ನಿಮಗೆ 2018 ರಲ್ಲಿ ಏಕೆ ಮತ ಹಾಕಲಿಲ್ಲ ಎಂಬ‌ ಪ್ರಶ್ನೆಗೆ ಅವರು ನಿರುತ್ತರರಾಗಿದ್ದರು.
ಸುದ್ದಿಗೋಷ್ಟಿಗೆ ಮಾಜಿ ಸಚಿವ ದಿವಾಕರ ಬಾಬು, ಸೂರ್ಯನಾರಾಯಣ ರೆಡ್ಡಿ ಗೈರು‌ ಹಾಜರಾಗಿದ್ದರು