ಪಾಲಿಕೆ ಕೌನ್ಸಿಲ್ ಸಭೆ: ಚರ್ಚೆಗೆ ಗ್ರಾಸವಾದ ಕಾರ್ಯದರ್ಶಿ ನಡೆ

ಸಂಜೆವಾಣಿ ನ್ಯೂಸ್
ಮೈಸೂರು: ಆ.23:- ಕಳೆದ ಕೌನ್ಸಿಲ್‍ನಲ್ಲಿ ಮೂರು ಕಾರ್ಯಸೂಚಿಗಳನ್ನು ಚರ್ಚಿಸದೇ ಒಪ್ಪಿಗೆ ಸೂಚಿಸಿದ ಮೇಯರ್ ಕ್ರಮ ತಪ್ಪಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿರುವ ಕೌನ್ಸಿಲ್ ಕಾರ್ಯದರ್ಶಿ ನಡೆ ಪಾಲಿಕೆ ಕೌನ್ಸಿಲ್‍ನಲ್ಲಿ ಚರ್ಚೆಗೆ ಗ್ರಾಸವಾಯಿತು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ ಉಪ ಮೇಯರ್ ಡಾ.ಜಿ.ರೂಪಾ ಅವರ ನೇತೃತ್ವದಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಕೌನ್ಸಿಲ್ ಕಾರ್ಯದರ್ಶಿ ನಡೆಯ ಬಗ್ಗೆ ಚರ್ಚೆ ನಡೆಯಿತು. ಹಿಂದಿನ ಸಭೆಯಲ್ಲಿ ಗದ್ದಲದ ನಡುವೆ ಮೂರು ವಿಷಯಗಳನ್ನು ಚರ್ಚಿಸದೇ ಒಪ್ಪಲಾಗಿದೆ ಎಂದು ಮೇಯರ್ ಪ್ರಕಟಿಸಿದ್ದರು. ಅಂದು ಒಪ್ಪಿಗೆ ನೀಡಲಾದ 3 ವಿಷಯಗಳು ಮತ್ತೆ ಸಭೆಯ ಅನುಮೋದನೆಗೆ ಪ್ರಸ್ತಾಪಿಸಿದಾಗ ಗದ್ದಲ ಏರ್ಪಟ್ಟಿತು.
ನಗರ ಪಾಲಿಕೆ ಕಟ್ಟಡಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರ ಸೇರಿದಂತೆ ಮೂರು ನಿರ್ಣಯಗಳ ಸಂಪೂರ್ಣ ವಿವರವನ್ನು ಬಹಿರಂಗಪಡಿಸುವಂತೆ ಜೆಡಿಎಸ್ ಸದಸ್ಯರಾದ ಕೆ.ವಿ.ಶ್ರೀಧರ್, ಎಸ್‍ಬಿಎಂ ಮಂಜು, ಪ್ರೇಮಾ ಶಂಕರೇಗೌಡ ಒತ್ತಾಯಿಸಿದರು. ಈ ವೇಳೆ ಪರ ವಿರೋಧ ಚರ್ಚೆ ತಾರಕಕ್ಕೇರಿತು.
ಮೇಯರ್ ಅವರು ಸಭೆಯಲ್ಲಿ ಮಂಡಿಸದೇ ಅನುಮೋದನೆ ಕೊಟ್ಟಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾನೆ ಎಂದು ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ ಸಭೆಗೆ ಮಾಹಿತಿ ನೀಡಿದರು. ಕೌನ್ಸಿಲ್ ಕಾರ್ಯದರ್ಶಿ ಪತ್ರ ಬರೆದಿರುವುದು ಅವೈe?ಞÁನಿಕ ಎಂದು ಬಿಜೆಪಿ ಸದಸ್ಯ ಬಿ.ವಿ.ಮಂಜುನಾಥ್ ಮತ್ತು ಸುಬ್ಬಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಮೂರು ವಿಷಯಗಳ ಕುರಿತು ಮತ್ತೊಮ್ಮೆ ಚರ್ಚೆಗೆ ಅವಕಾಶ ನೀಡಿದ ಉಪ ಮೇಯರ್ ಡಾ.ಜಿ.ರೂಪಾ ಸಭೆಯನ್ನು ತಹಬದಿಗೆ ತಂದರು.
ಶಿಸ್ತುಕ್ರಮಕ್ಕೆ ಆಗ್ರಹ: ವಿಪಕ್ಷ ನಾಯಕ ಅಯೂಬ್ ಖಾನ್ ಮಾತನಾಡಿ, ಬಹಳ ವರ್ಷಗಳ ನಂತರ ಕಾನೂನಿನ ಅಂಶದ ಬಗ್ಗೆ ಸಭೆಯಲ್ಲಿ ಚರ್ಚೆಯಾಗುತ್ತಿದೆ. ಕೌನ್ಸಿಲ್ ಕಾರ್ಯದರ್ಶಿ ಕಾನೂನಾತ್ಮಕ ಸ್ಪಷ್ಟನೆ ನೀಡಿದ್ದಾರೆ. ಅಂದರೆ ಸದಸ್ಯರನ್ನು ಕತ್ತಲಲ್ಲಿ ಇಟ್ಟು ಈ ಹಿಂದೆ ಹಲವು ನಿರ್ಣಯಗಳು ಆಗಿವೆ. ಆದ್ದರಿಂದ ಹಿಂದಿನ ಕೌನ್ಸಿಲ್ ಕಾರ್ಯದರ್ಶಿ ಹಾಗೂ ಆಯುಕ್ತರ ವಿರುದ್ಧ ಕ್ರಮವಾಗಬೇಕು. ಇದು ಘೋರ ಅಪರಾಧ. ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಬರೆಯಬೇಕು ಎಂದು ಒತ್ತಾಯಿಸಿದರು.
ಆಡಳಿತ ಪಕ್ಷದ ನಾಯಕ ಮಾ.ವಿ.ರಾಮಪ್ರಸಾದ್ ಮಾತನಾಡಿ, ಕೌನ್ಸಿಲ್ ಕಾರ್ಯದರ್ಶಿ ನಡೆಯನ್ನು ಪ್ರಶ್ನಿಸಿದರು. ಉದ್ಯಾನಕ್ಕೆ ವಿಷ್ಣುವರ್ಧನ್ ಹೆಸರು ನಾಮಕರಣ, ಪ್ರತಿಮೆ ನಿರ್ಮಾಣಕ್ಕೆ ಒಪ್ಪಲಾಗಿದೆ ಎನ್ನುತ್ತಾರೆ. ಮೂರು ಸಬ್ಜೆಕ್ಟ್ ಒಪ್ಪಿಗೆ ವಿಷಯವಾಗಿ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಹೇಳುತ್ತಾರೆ. ಸರ್ಕಾರ ಕ್ರಮ ತೆಗೆದುಕೊಳ್ಳಲಿ. ನ್ಯಾಯ ಸಮ್ಮತ ಪ್ರಕ್ರಿಯೆ ನಡೆಯಲಿ ಎಂದರು.
ಜೆಡಿಎಸ್ ಪಕ್ಷದ ನಾಯಕಿ ಅಶ್ವಿನಿ ಅನಂತು ಮಾತನಾಡಿ, ಮೇಯರ್ ತಮಗೆ ಬೇಕಾದ್ದನ್ನು ತಂದು ಒಪ್ಪಲಾಗಿದೆ ಎಂದು ಹೇಳಿ ಹೋಗುತ್ತಾರೆ. ಹಾಗಾದರೆ ಸದಸ್ಯರು ಏಕೆ ಬೇಕು ಎಂದು ಪ್ರಶ್ನಿಸಿದರು. ಕೆ.ವಿ.ಶ್ರೀಧÀರ್ ದೀಪಾಲಂಕಾರ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಬಿ.ವಿ.ಮಂಜುನಾಥ್ ಅವರು ನಗರ ಪಾಲಿಕೆ ಕಟ್ಟಡ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಾಣಗೊಂಡಿದ್ದು, ನೂರು ವರ್ಷ ಆಗಿದೆ. ನೆನಪಿನಾರ್ಥವಾಗಿ ದೀಪಾಲಂಕಾರ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಶ್ವತ ದೀಪಾಲಂಕಾರಕ್ಕೆ ಒಪ್ಪಿಗೆ ಕೊಡುವಂತೆ ಆಗ್ರಹಿಸಿದರು.
ಸುದೀರ್ಘ ಚರ್ಚೆಯ ಬಳಿಕ ಪ್ರಭಾರಿ ಮೇಯರ್ ರೂಪಾ ಅವರು ನಡಾವಳಿ ಖಾಯಂ ಮಾಡಲಾಗಿದೆ ಎಂದರು. ಆಗ ಯಾರೂ ಕೂಡ ಮಾತನಾಡಲಿಲ್ಲ. ಒಟ್ಟಾರೆ ಯಾವುದೇ ಸ್ಪಷ್ಟತೆ ಸಿಗಲಿಲ್ಲ.
ಜತೆಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಉದ್ಯಾನಕ್ಕೆ ಹಿರಿಯ ನಟ ವಿಷ್ಣುವರ್ಧನ್ ಹೆಸರು ನಾಮಕರಣ, ಪ್ರತಿಮೆ ನಿರ್ಮಾಣದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವ ವಿಷಯವೂ ಅಂತಿಮ ನಿರ್ಧಾರ ಪ್ರಕಟವಾಗಲಿಲ್ಲ.
ಬಿಜೆಪಿ ಸದಸ್ಯ ಬಿ.ವಿ.ಮಂಜುನಾಥ್, ಉದ್ಯಾನದ ಆಸ್ತಿ ಸಂಬಂಧÀ ಹೈಕೋರ್ಟ್‍ನಲ್ಲಿ ಪ್ರಕರಣವಿದೆ. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ತೀರ್ಮಾನ ಕೈಗೊಳ್ಳುವುದು ತಪ್ಪಾಗುತ್ತದೆ. ಪ್ರತಿಮೆ ಪ್ರತಿಷ್ಠಾಪನೆಗೆ ಅವಕಾಶ ನೀಡಲು ಪಾಲಿಕೆಗೆ ಅವಕಾಶ ಇಲ್ಲ. ಈ ವಿಚಾರವಾಗಿ ಮರು ಪರಿಶೀಲಿಸುವಂತೆ ಒತ್ತಾಯಿಸಿದರು. ಕೆಲವು ಸದಸ್ಯರು ಒಪ್ಪಿತ ಪ್ರಸ್ತಾಪ ಸರ್ಕಾರಕ್ಕೆ ಕಳುಹಿಸುವಂತೆ ಒತ್ತಾಯಿಸಿದರು.
ಕಾಂಗ್ರೆಸ್ ಸದಸ್ಯ ಆಯೂಬ್ ಖಾನ್ ಮಾತನಾಡಿ, ವಿಷ್ಣುವರ್ಧನ್ ಹೆಸರು ನಾಮಕರಣಕ್ಕೆ ಸಂಸದ ಪ್ರತಾಪಸಿಂಹ ಪತ್ರ ಬರೆದಿದ್ದಾರೆ. ಬಿಜೆಪಿ ಪಕ್ಷದ ಮೇಯರ್ ಒಪ್ಪಿಗೆ ಕೊಟ್ಟಿದ್ದಾರೆ. ಈಗ ಬಿಜೆಪಿ ಸದಸ್ಯ ಬಿ.ವಿ.ಮಂಜುನಾಥ್ ವಿರೋಧÀ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಾಲೆಳೆದರು. ಸದಸ್ಯ ಕೆ.ವಿ.ಶ್ರೀಧರ್, ತಪ್ಪಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಛೀಮಾರಿ ಹಾಕಿಸಿಕೊಳ್ಳುವುದು ಬೇಡ. ಮರು ಪರಿಶೀಲಿಸುವಂತೆ ಆಗ್ರಹಿಸಿದರು.
ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ, ಚರ್ಚಿಸಿ ತೀರ್ಮಾನ ಮಾಡಿರುವುದನ್ನು ಸರ್ಕಾರಕ್ಕೆ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದರು. ಮತ್ತೆ ಬಿ.ವಿ.ಮಂಜುನಾಥ್ ಆಕ್ಷೇಪ ಎತ್ತಿದಾಗ ಉಪ ಮೇಯರ್ ರೂಪಾ ಅವರು, ಈ ವಿಷಯ ಬಿಟ್ಟು ಉಳಿದಿದ್ದನ್ನು ಖಾಯಂ ಮಾಡಲಾಗಿದೆ ಎಂದು ಪ್ರಕಟಿಸಿದರು. ಇದಕ್ಕೆ ಬಿಜೆಪಿ ಸದಸ್ಯ ಸತೀಶ್ ಆಕ್ಷೇಪ ವ್ಯಕ್ತಪಡಿಸಿದರು.ಸಭೆಗೂ ಮುನ್ನ ಸರ್ಕಾರದಿಂದ ನಾಮ ನಿರ್ದೇಶಿತ ಆರ್.ಶ್ರೀನಿವಾಸಮೂರ್ತಿ, ಆರ್.ಎಚ್.ಕುಮಾರ್, ಎಂ.ಯು.ಬಾಲರಾಜು, ಕಲ್ಪನಾ, ನಿರಾಲ್ ಶಾಹ ಪ್ರಮಾಣ ವಚನ ಸ್ವೀಕರಿಸಿದರು.
ರಸ್ತೆ ಹೆಸರಿಗೆ ಜಟಾಪಟಿ
ನಗರದ ಎನ್‍ಐಇ ಕಾಲೇಜು ಹಾಸ್ಟೆಲ್‍ಪಕ್ಕದ ಅಶೋಕಪುರಂ ರಸ್ತೆಯಿಂದ ಇಸ್ಕಾನ್ ದೇವಸ್ಥಾನದ ಎದುರಿನ ರಸ್ತೆಯಿಂದ ರಾಮಕೃಷ್ಣನಗರ ವೃತ್ತದವರೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ತಂದೆ ರಾಮ್‍ಜೀ ಸಕ್ಪಾಲ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಕೌನ್ಸಿಲ್‍ನಲ್ಲಿ ವಿಷಯ ಮಂಡಿಸಲಾಯಿತು. ಈ ವೇಳೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಈಗಾಗಲೇ ಉz?ದÉ?ಶಿತ ರಸ್ತೆಗೆ ಉದಯರವಿ ಎಂಬ ಹೆಸರನ್ನು ನಾಮಕರಣ ಮಾಡಲಾಗಿದೆ. ಈಗ ಹೆಸರನ್ನು ಬದಲಾಯಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಉz?ದÉ?ಶಿತ ರಸ್ತೆಗೆ ರಾಮ್‍ಜೀ ಸಕ್ಪಾಲ್ ಹೆಸರಿಡುವಂತೆ ಪ್ರತಿಭೆಟನೆ ನಡೆಸಿದರು. ಈ ಸಂದರ್ಭ ಮೇಯರ್ ಸಭೆ ಮುಂದೂಡಿದರು. ಬಳಿಕ ಆರಂಭÀವಾದ ಸಭೆಯಲ್ಲಿ ರಸ್ತೆ ನಾಮಕರಣವಾಗಿ ಜಟಾಪಟಿ ನಡೆಯಿತು. ಬಳಿಕ ಸಭೆ ಮುಂದೂಡಿದರು.
ಸಭೆಯಲ್ಲಿ ಪಾಲಿಕೆ ಹೆಚ್ಚುವರಿ ಆಯುಕ್ತೆ ರೂಪ ಇದ್ದರು.