ಪಾಲಿಕೆ ಎಡವಟ್ಟು ರೋಗಿಗಳ ಸ್ಥಿತಿ ಗಂಭೀರ


ಬೆಂಗಳೂರು, ಏ.೨೧- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಕೋವಿಡ್ ರೋಗಿಗಳು ಹೊಸ ಸಮಸ್ಯೆಗಳನ್ನು ಎದುರಿಸಿದ್ದು, ಇದೀಗ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟವರಿಗೆ ನೀಡಲಾಗುವ ಬಿ.ಯು ನಂಬರ್ ಸೂಕ್ತ ಸಮಯಕ್ಕೆ ಬಾರದ ಕಾರಣ ಗಂಭೀರ ಸ್ಥಿತಿಗೆ ತಲುಪಲುತ್ತಿದ್ದಾರೆ.
ನಾಲ್ಕು ದಿನ ಕಳೆದರೂ ಬಾರದ ಕಾರಣ ಗಂಭೀರ ಸ್ಥಿತಿಯಲ್ಲಿದ್ದವರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹಲವು ರೋಗಿಗಳು ಅಳಲು ತೋಡಿಕೊಂಡರು.
ಸೋಂಕಿನ ಲಕ್ಷಣ ಇದ್ದ ಕಾರಣ ನಮ್ಮ ವಾರ್ಡ್‌ನ ವ್ಯಕ್ತಿಯೊಬ್ಬರು ಏ.೧೬ ರಂದು ಕೋವಿಡ್ ಪರೀಕ್ಷೆ ಮಾಡಿಸಿದ್ದರು. ನಾಲ್ಕು ದಿನಗಳು ಕಳೆದರೂ ಬಿ.ಯು ನಂಬರ್ ಬಂದಿಲ್ಲ. ಪ್ರಯೋಗಾಲಯಗಳಲ್ಲಿ ಮಾಡುವ ತಪ್ಪಿನಿಂದ ಈ ನಂಬರ್‌ಗಳು ಬರುತ್ತಿಲ್ಲ.
ನಂಬರ್ ಇಲ್ಲದ ಕಾರಣ ಆಸ್ಪತ್ರೆಗೆ ದಾಖಲಿಸಲು ಬಿಬಿಎಂಪಿ ಮುಂದಾಗುವುದಿಲ್ಲ. ಪ್ರಯೋಗಾಲಯ ದವರು ಮಾಡುವ ತಪ್ಪಿಗೆ ಜನ ಬಲಿಯಾಗುತ್ತಿದ್ದಾರೆ ಎಂದು ಹಲವಾರು ಆರೋಪಿಸಿದರು.
ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆಯ ಅಗತ್ಯವಿದೆ. ಬಿ.ಯು ನಂಬರ್ ಇಲ್ಲದ ಕಾರಣ ಮನೆಯಲ್ಲೇ ಇದ್ದಾರೆ. ಇನ್ನೂ ವಿಳಂಬವಾದರೆ ಅವರು ಬದುಕುಳಿಯುವುದೇ ಕಷ್ಟ. ಇದು ಬಹುತೇಕ ಕಡೆಗಳಲ್ಲಿ ಆಗುತ್ತಿದ್ದು, ಪಾಲಿಕೆ ತಾಂತ್ರಿಕ ದೋಷ ಸರಿಪಡಿಸಲಿ ಎಂದರು.
ಆಕ್ಸಿಜನ್ ಹೆಚ್ಚಿದ ಬೇಡಿಕೆ..!
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮೆಡಿಕಲ್ ಆಕ್ಸಿಜನ್ ಸಿಲಿಂಡರ್‌ಗಳ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಪೀಣ್ಯಾದ ಯುನಿವರ್ಸಲ್ ಗ್ಯಾಸ್ ಸೆಂಟರ್ ಮುಂದೆ ಬುಧವಾರ ಕೂಡ ವಾಹನಗಳು ಸಾಲು ಸಾಲಾಗಿ ನಿಂತಿದ್ದ ದೃಶ್ಯ ಮುಂದುವರಿದಿದೆ.
ಯುನಿವರ್ಸಲ್ ಗ್ಯಾಸ್ ಫ್ಯಾಕ್ಟರಿಯಿಂದ ಒಟ್ಟು ೨,೪೦೦ ಆಕ್ಸಿಜನ್ ಸಿಲಿಂಡರ್ ವಿತರಣೆ ಮಾಡಲಾಗಿದೆ. ೪೭ ಲೀಟರ್ ಆಕ್ಸಿಜನ್ ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಒಂದು ಗಂಟೆಗೆ ೪೭ ಲೀಟರ್?ನ ೬೦ ಸಿಲಿಂಡರ್‌ಗಳನ್ನ ತುಂಬಾಬಹುದು. ಆದರೆ ಪ್ರತಿ ಗಂಟೆಗೆ ೧೫೦ಕ್ಕೂ ಹೆಚ್ಚು ಸಿಲಿಂಡರ್‌ಗೆ ಬೇಡಿಕೆ ಬರುತ್ತಿದೆ ಎಂದು ಸ್ಥಳೀಯ ಸಿಬ್ಬಂದಿ ತಿಳಿಸಿದರು.