ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಕೊಳಚೆ ಪ್ರದೇಶಗಳ ಅಭಿವೃದ್ದಿ ಕುರಿತು ಚರ್ಚೆ

ಕಲಬುರಗಿ,ಅ.29- ಪ್ರತಿ ಕೊಳಚೆ ಪ್ರದೇಶಗಳಲ್ಲಿ ಸಮುಹ ಶೌಚಾಲಯ ಗಳನ್ನು ನಿರ್ಮಾಣ ಮಾಡಬೇಕು. ಈಗಾಗಲೆ ಇರುವ ಶೌಚಾಲಯಗಳ ನಿರ್ವಹಣೆ ಮತ್ತು ಸುಧಾರಣೆ ಮಾಡುವ ಕುರಿತು ಸೇರಿದಂತೆ ಕೊಳಚೆ ಪ್ರದೇಶದ ಅಭಿವೃದ್ದಿಯ ಕುರಿತು ಚರ್ಚೆ ನಡೆಯಿತು.
ಮಹಾನಗರ ಪಾಲಿಕೆಯ ಆಯುಕ್ತರು ನೇತೃತ್ವದಲ್ಲಿ ಜರುಗಿದ ಮಹಾನಗರದ ಸ್ಲಂ ಬಡಾವಣೆಗಳ ಕುಂದುಕೋರತೆಗಳ ಸಭೆಯಲ್ಲಿ ಸ್ಲಂ ಜನಾಂದೋಲನ ಸಂಘಟನೆಯ ಪದಾಧಿಕಾರಿಗಳು ಆಯುಕ್ತರ ಗಮನಕ್ಕೆ ಅಲ್ಲಿನ ಸಮಸ್ಯೆಗಳನ್ನು ವಿವರಿಸಿದರು.
ಮಹಾನಗರದಲ್ಲಿ ಕೆಲಬಡಾವಣೆಗಳು ಸ್ಲಂ ಎಂದು ಘೋಷಣೆ ಯಾಗಿ ಸುಮಾರು 5 ವರ್ಷಗಳು ಕಳೆದರು ಇಲ್ಲಿಯವರೆಗೂ ಸ್ಲಂ ಘೋಷಣೆ ಉದ್ದೇಶ ಮತ್ತು ಪ್ರಕ್ರಿಯೆಗಳು ನಡೆದಿಲ್ಲ. ಹಾಗೂ 38ಸ್ಲಂಗಳು 3ಪಿ ಅಡಿಯಲ್ಲಿ ಘೋಷಣೆ ಯಾಗಿ ಸುಮಾರು 40 ವರ್ಷಗಳು ಗತಿಸದರೂ, ಸಹ ಇಲ್ಲಿಯವರೆಗೆ 3ಎಫ್ ನಲ್ಲಿ ಘೋಷಣೆ ಯಾಗಿಲ್ಲ. ಸೆಕ್ಷನ್ 4 ಅನ್ವಯ ನೋಂದಣಿ ಪ್ರಮಾಣ ಪತ್ರ ವನ್ನು ಜಿಲ್ಲಾ ನೋಂದಣಿ ಕಛೆಯರಿಯಲ್ಲಿ ಅಥವಾ ಮಂಡಳಿಯ ಕಂದಾಯ ಇಲಾಖೆಯಲ್ಲಿ ದೃಢಿ ಕರಿಸಬೇಕೆಂದು ಸ್ಲಂ ಜನಾಂದೋಲನ ಸಂಘಟನೆಯ ಪದಾಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು.
ಅಲ್ಲದೇ ಪೈಲಟ ಯೋಜನೆಯ ಮನೆಗಳಲ್ಲಿ 1024 ರಲ್ಲಿ 704 ಮನೆಗಳನ್ನು ಹಂಚಿಕೆ ಮಾಡಲಾಗಿದೆ ಇನ್ನುಳಿದ 320 ಮನೆಗಳನ್ನು ಸಂಪೂರ್ಣವಾಗಿ ಸ್ಲಂನಲ್ಲಿ ವಾಸಿಸುವ ಅರ್ಹ ಬಾಡಿಗೆದಾರರಿಗೆ ನೀಡಬೇಕೆಂದು ಸಭೆಯಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಸಂಘಟನೆಯ ಸಂಚಾಲಕಿ ರೇಣುಕಾ ಸರಡಗಿ, ಸಂಘಟನಾ ಸಂಚಾಲಕರಾದ ವಿಕಾಸ ಸವಾರಿಕರ, ಬಸವರಾಜ ಪೂಜಾರಿ, ಖಜಾಂಚಿ ಗೌರಮ್ಮ ಮಾಕಾ, ಸುನಿತಾ ಕೂಲ್ಲೂರ, ಕೋಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಅರುಣಕುಮಾರ, ಮಹಾಶೆಟ್ಟಿ ಹಾಗೂ ಅಧಿಕಾರಿಗಳು ಇದ್ದರು.