ಪಾಲಿಕೆಯ ನೌಕರರ ಸಂಘದಿಂದ ಮಾಸ್ಕ್ ಹಂಚಿಕೆ

ದಾವಣಗೆರೆ.ಜೂ.೫; ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ಅಂಗವಿಕಲರಿಗೆ ಪಾಲಿಕೆ ಆವರಣದಲ್ಲಿ ಕೋವಿಡ್ 19 ಲಸಿಕೆ ಹಾಕಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ನೌಕರರ ಸಂಘದಿಂದ ಲಸಿಕೆ ಹಾಕಿಸಿಕೊಳ್ಳಲು ಬಂದ ಎಲ್ಲಾ ಅಂಗವಿಕಲರಿಗೆ ಮತ್ತು ಅವರ ಜೊತೆ ಬಂದವರಿಗೆ ನೀರು ಬಿಸ್ಕೆಟ್ ಮಾಸ್ಕ್ ನೀಡಲಾಯಿತು. ಪಾಲಿಕೆ ಆಯುಕ್ತರಾದ ವಿಶ್ವನಾಥ್. ಪಿ.ಮುದಜ್ಜಿ,ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಎಸ್.ಗೋವಿಂದರಾಜು. ಕಂದಾಯ ಇಲಾಖೆ ವ್ಯವಸ್ಥಾಪಕರಾದ.ವೆಂಕಟೇಶ್. ಪಿ.ಮತ್ತು ನೌಕರರ ಸಂಘದ ಪಧಾದಿಕಾರಿಗಳು ಉಪಸ್ಥಿತರಿದ್ದರು.