ಪಾಲಿಕೆಯ ಗದ್ದುಗೆ ಏರಿದ ಬಿಜೆಪಿ

ಮೇಯರ್ ಆಗಿ ಶಿವಕುಮಾರ್, ಉಪಮೇಯರ್ ಆಗಿ ರೂಪ ಯೋಗೇಶ್ ಆಯ್ಕೆ
ಮೈಸೂರು,ಸೆ.6:- ಮೈಸೂರು ಮಹಾನಗರ ಪಾಲಿಕೆಗೆ ಇಂದು ನಡೆದ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೆÇೀಟಿ ನಡೆದಿತ್ತು. ಕಾಂಗ್ರೆಸ್ ಗೆ ಟಕ್ಕರ್ ಕೊಡಲು ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ಮುಂದಾದ ಹಿನ್ನೆಲೆಯಲ್ಲಿ ಬಿಜೆಪಿಯ ಶಿವಕುಮಾರ್ ನೂತನ ಮೇಯರ್ ಆಗಿ ಆಯ್ಕೆಯಾದರು.
ಜೆಡಿಎಸ್ ನ ಸದಸ್ಯೆ ರೇಷ್ಮಾಬಾನು ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಉಪಮೇಯರ್ ಪಟ್ಟ ಬಿಜೆಪಿ ಸದಸ್ಯೆ ವಾರ್ಡ್ ನಂಬರ್ 53ರ ರೂಪ ಯೋಗೇಶ್ ಅವರಿಗೆ ಲಭಿಸಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಗೆ ಮೇಯರ್-ಉಪಮೇಯರ್ ಪಟ್ಟ ಒಲಿದಿದೆ. ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿದ್ದರೂ ಕೂಡ ಜೆಡಿಎಸ್ ನ ರೇಷ್ಮಾ ಬಾನು ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಮುಖಭಂಗ ಅನುಭವಿಸುವಂತಾಯಿತು. ಜೆಡಿಎಸ್ ನಾಯಕರಿಗೆ ಭಾರೀ ನಿರಾಸೆಯುಂಟಾಗಿದೆ.
ಉಪಮೇಯರ್ ಸ್ಥಾನಕ್ಕೆ ಜೆಡಿಎಸ್ ನ ರೇಷ್ಮಾಬಾನು ನಾಮಪತ್ರ ಸಲ್ಲಿಸಿದ್ದರು. ಆದರೆ ಉಪಮೇಯರ್ ಸ್ಥಾನ ಬಿಸಿಎ ಗೆ ಮೀಸಲಿಡಲಾಗಿತ್ತು. ಆದರೆ ರೇಷ್ಮಾ ಬಾನು ನಾಮಪತ್ರ ಸಲ್ಲಿಸುವ ವೇಳೆ ಬಿಸಿಎ ಸರ್ಟಿಫಿಕೇಟ್ ಸಲ್ಲಿಸಬೇಕಿತ್ತು. ಆದರೆ ಬಿಸಿಎ ಸರ್ಟಿಫಿಕೇಟ್ ಸಲ್ಲಿಸದ ಕಾರಣ ರೇಷ್ಮಾಬಾನು ನಾಮಪತ್ರ ತಿರಸ್ಕೃತಗೊಂಡು ಉಪಮೇಯರ್ ಸ್ಥಾನ ಕೈತಪ್ಪಿತು.
ಕಾಂಗ್ರೆಸ್ ನಿಂದ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಗೋಪಿ ನಾಮಪತ್ರವನ್ನು ಹಿಂಪಡೆದರು. ಜೆಡಿಎಸ್ ನ ಕೆ.ವಿ.ಶ್ರೀಧರ್ ಅವರೂ ಕೂಡ ನಾಮಪತ್ರ ಹಿಂಪಡೆದರು. ನಿರ್ಮಲಾ ಹರೀಶ್ ಅವರನ್ನು ಹೈಜಾಕ್ ಮಾಡಿದ್ದು, ನಿರ್ಮಲಾ ಹರೀಶ್ ಕಾಂಗ್ರೆಸ್ ಪರ ಮತಚಲಾಯಿಸಿದರು. ಇದರಿಂದ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿಗೆ ಮುಂದಾಯಿತು.
ಕಾಂಗ್ರೆಸ್ ನ ಸೈಯದ್ ಹಸ್ರತ್ ಉಲ್ಲಾ ಮತ್ತು ಬಿಜೆಪಿಯ ಶಿವಕುಮಾರ್ ನಡುವೆ ತೀವ್ರ ಪೈಪೆÇೀಟಿ ನಡೆದಿತ್ತು. ಕೊನೆಗೂ ಮೈಸೂರು ನೂತನ ಮೇಯರ್ ಆಗಿ ಶಿವಕುಮಾರ್ ಆಯ್ಕೆಯಾದರು. ಮೈಸೂರು ಮಹಾನಗರ ಪಾಲಿಕೆಯ 47ನೇ ವಾರ್ಡ್ ಸದಸ್ಯರಾದ ಶಿವಕುಮಾರ್ ಅವರಿಗೆ ಮೇಯರ್ ಪಟ್ಟ ಒಲಿದು ಬಂದಿದೆ. ಬಿಜೆಪಿ ಸದಸ್ಯ ಶಿವಕುಮಾರ್ ಪರ 48ಮತಗಳು ಬಂದಿವೆ. ಪ್ರಾದೇಶಿಕ ಆಯುಕ್ತರಾದ ಜಿ.ಪ್ರಕಾಶ್ ನೇತೃತ್ವದಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಎರಡನೇ ಬಾರಿಗೆ ಪಾಲಿಕೆಯ ಇತಿಹಾಸದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ನ ಸೈಯದ್ ಹಸ್ರತ್ ಉಲ್ಲಾ 28ಮತಗಳನ್ನು ಪಡೆದು ಪರಾಭವಗೊಂಡರು.
ಪಾಲಿಕೆಯ ಮೇಯರ್-ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಗೆ ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಮೇಯರ್ ಸುನಂದಾ ಪಾಲನೇತ್ರ ಸೇರಿದಂತೆ ಬಿಜೆಪಿ ಸದಸ್ಯರು ಮತ ಚಲಾಯಿಸಿದರು. ಜಿ.ಟಿ.ದೇವೇಗೌಡ,ಮರಿತಿಬ್ಬೇಗೌಡ ಅವರೂ ಕೂಡ ಬಿಜೆಪಿ ಅಭ್ಯರ್ಥಿ ಪರ ಮತಚಲಾಯಿಸಿದರು ಎನ್ನಲಾಗಿದೆ.
ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ಡಾ.ಡಿ.ತಿಮ್ಮಯ್ಯ, ದಿನೇಶ್ ಗೂಳಿಗೌಡ್,ಶಾಸಕ ತನ್ವೀರ್ ಸೇಠ್, ಉಪಮೇಯರ್ ಅನ್ವರ್ ಬೇಗ್ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದರು. ಮತದಾನ ಮಾಡುವ ಸ್ಥಳದಲ್ಲಿ ಸಂಚಾರಿ ದೂರವಾಣಿಗಳಿಗೆ ನಿಷೇಧ ವಿಧಿಸಲಾಗಿತ್ತು. ಮೂರು ಪಕ್ಷಗಳಿಗೂ ಮೇಯರ್ ಆಯ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಕೊನೆಗೂ ಬಿಜೆಪಿಗೆ ಮೇಯರ್ ಪಟ್ಟ ಒಲಿದು ಬಂದಿದೆ.