ಪಾಲಿಕೆಯ ಉದ್ಯಾನವನದ ಮುಖ್ಯದ್ವಾರ ಅಭಿವೃದ್ಧಿಪಡಿಸಬೇಕೆಂದು ಮನವಿ

ಕಲಬುರಗಿ,ಮಾ.27: 2020-21ನೇ ಸಾಲಿನಲ್ಲಿ ಮಹಾನಗರ ಪಾಲಿಕೆ ಅನುದಾನ ಅಡಿಯಲ್ಲಿ 22 ಲಕ್ಷ ಹಣವು ಕಲಬುರಗಿ ನಗರದ ಮಹಾನಗರ ಪಾಲಿಕೆಯ ಉದ್ಯಾನವನದಲ್ಲರುವ ಮುಖ್ಯದ್ವಾರವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಬಿಡುಗಡೆಯಾಗಿದ್ದು, ಮುಖ್ಯದ್ವಾರ ಮಾಡಲು 12 ಲಕ್ಷ ಹಾಗೂ ವಿವಿಧ ಪತ್ಥಳಗಳಿಗೆ 10 ಲಕ್ಷ ಹಣವು ಬಿಡುಗಡೆಯಾಗಿರುತ್ತದೆ. ಸದರಿ ಕಾಮಗಾರಿಯು ಪೂರ್ಣಗೊಂಡಿಲ ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯ ರಾಜ್ಯ ಘಟಕದ ರಾಜ್ಯಾಧ್ಯಕ್ಷ ಸಚೀನ್ ಫರಹತಾಬಾದ ನೇತೃತ್ವದಲ್ಲಿ ಪಾಲಿಕೆ ಮೇಯರ್ ವಿಶಾಲ ದರ್ಗಿ ಅವರಿಗೆ ಮನವಿ ಸಲ್ಲಿಸಿದರು.
ತಾವು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಆದೇಶ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಶಿನಾಥ ಮಾಳಗಿ, ಸುರೇಶ ಹನಗುಡಿ, ಅಕ್ಷಯ, ನವೀನ, ಸುನೀಲ್ ಜಾಧವ, ಮಲ್ಲಕಾರ್ಜುನ ಪೂಜಾರಿ, ಸಾಯಿಕುಮಾರ, ಪ್ರವೀಣ ಸಜ್ಜನ್, ಲಕ್ಷ್ಮೀಕಾಂತ, ಉದಯಕುಮಾರ, ರಾಹುಲ್ ಆಶ್ರಯ ಕಾಲೋನಿ ಇದ್ದರು.