
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.05: ನಗರದ ಹಲವಡೆ ಇದ್ದ ಜಾಹಿರಾತು ಫಲಕಗಳನ್ನು ನಿಯಮಗಳ ಉಲ್ಲಂಘನೆಯಾಗಿದೆಂದು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದು. ಇಂದು ಸಹ ಮುಂದುವರೆದಿದೆ.
ನಗರದ ಪ್ರಮುಖ ವೃತ್ತಗಳಾದ ಗಡಗಿ ಚೆನ್ನಪ್ಪ ಸರ್ಕಲ್ , ಹೆಚ್.ಗವಿಯಪ್ಪ, ಸರ್ಕಲ್, ಸುಧಾ ಸರ್ಕಲ್, ಇಂದಿರಾ ಸರ್ಕಲ್ ಸೇರಿದಂತೆ ಹಲವಡೆ ಹಾಗು ರಸ್ತೆ ವಿಭಜಕಗಳಲ್ಲಿ ಪ್ರಮುಖವಾಗಿ ಜಿ.ಎಸ್.ಮೀಡಿಯಾ ಮತ್ತಿತರರು ಜಾಹಿರಾತು ಫಲಕ ಮತ್ತು ಗ್ಯಾಂಟ್ರೀಸ್ ಗಳನ್ನು ಅಳವಡಿಸಿದ್ದರು.
ಟೆಂಡರ್ ಪ್ರಕ್ರಿಯೆ ಮೂಲಕ ಈ ಕಾರ್ಯ ನಡೆದಿತ್ತು. ಅನೇಕರು ಟೆಂಡರ್ ಅನುಮತಿ ಪಡೆದು ಇವುಗಳನ್ನು ಅಳವಡಿಸಿದ್ದರು.
ಆದರೆ ಕೆಲವರು ಸರಿಯಾದ ಸಮಯಕ್ಕೆ ಹಣ ಪಾವತಿ ಮಾಡದೇ ಇದ್ದುದು, ನಿಗಧಿಗಿಂತ ಹೆಚ್ಚು ವಿಸ್ತಾರದಲ್ಲಿ ಫಲಕ ಅಳವಡಿಸಿದ್ದು. ರಸ್ತೆ ವಿಭಜಕದಲ್ಲಿ ಹಸಿರಿನ ವ್ಯವಸ್ಥೆ ಸರಿಯಾಗಿ ನಿರ್ವಹಣೆ ಮಾಡದಿರುವುದು ಸೇರಿದಂತೆ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರಿಂದ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿದಂತೆ ಪಾಲಿಕೆ ನೋಟೀಸ್ ನೀಡಿ ತೆರವುಗೊಳಿಸುವ ಕಾರ್ಯ ಮಾಡಿದೆಂದು ಪಾಲಿಕೆ ಆಯುಕ್ತ ಎಂ.ಎನ್. ರುದ್ರೇಶ್ ಹೇಳಿದ್ದಾರೆ.
ಈಗ ಹೊಸ ಮಾದರಿ ಬಂದಿದೆ. ರಸ್ತೆ ವಿಭಜಕದಲ್ಲಿ ನಗರ ಸೌಂದರೀಕರಣ ಹೆಚ್ಚಿಸುವ ರೀತಿಯಲ್ಲಿ ಹಸರೀಕರಣ ಮಾಡುವ ಷರತ್ತಿನೊಂದಿಗೆ ಹೊಸದಾಗಿ ಟೆಂಡರ್ ಕರೆಯಲಿದೆಂದು ಹೇಳಿದ್ದಾರೆ.