ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಕಾಂಗ್ರೆಸ್ ಮುಖಂಡರ ವಿಶ್ವಾಸ

ಬಳ್ಳಾರಿ, ಏ.20: ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆಂಬ ವಿಶ್ವಾಸವನ್ನು ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಪಕ್ಷದ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಶಾಸಕ ಅನಿಲ್ ಲಾಡ್, ನಿರಂಜನ ನಾಯ್ಡು, ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಪಾಲಿಕೆ ಚುನಾವಣೆಯ ಸಂಯೋಜಕ ಜೆ.ಎಸ್.ಆಂಜನೇಯಲು ಮೊದಲಾದವರು, ಈ ಬಾರಿ ಆಯ್ಕೆ ಮಾಡಿರುವ 39 ಅಭ್ಯರ್ಥಿಗಳಲ್ಲಿ 15 ಜನ ಪದವೀಧರರು, 3ಜನ ಪಿಯುಸಿ, 12ಜನ ಎಸ್.ಎಸ್.ಎಲ್.ಸಿ ಉಳಿದವರು ಸಹ ಅದರ ಕೆಳಗೆ ಓದಿದವರಾಗಿದ್ದಾರೆ. ಯಾರೂ ಸಹ ಅನಕ್ಷರಸ್ಥರಲ್ಲ. ಈ ಹಿಂದಿನ ಬಾರಿಯಂತೆ ಕಾರ್ಪೊರೇಟರ್ ಗಳಿಗೆ ಮಾಸಿಕ ಮಾಮೂಲು ಪಿಕ್ಸ್ ಮಾಡುತ್ತಾರೆಂಬ ಆರೋಪ ಬರದಂತೆ ನಗರದ ಅಭಿವೃದ್ಧಿಗೆ ಶ್ರಮಿಸಲಿದೆ ಎಂಬ ಭರವಸೆ ನೀಡುತ್ತೇವೆ ಎಂದರು.
ಈಗಾಗಲೇ ಡಿ.ಎಂ.ಎಫ್ ಫಂಡ್ ನಿಂದ ನಗರದ 120 ರಸ್ತೆಗಳ ಡಾಂಬರೀಕರಣ ಮಾಡಲಾಗುತ್ತದೆ. ನಗರದ ಜನತೆಗೆ ಅವಶ್ಯಕವಾದ ಕುಡಿವ ನೀರಿನ ಸಂಗ್ರಹವಿದೆ. ಆದರೆ ಸಮರ್ಪಕ ವಿತರಣೆ ಇಲ್ಲ. 24×7 ಯೋಜನೆ ಯಡಿ ಮಾಡುವ ಪ್ರಯತ್ನ ಇದೆ, ಸ್ವಚ್ಛತೆಗೆ ಆದ್ಯತೆ ನೀಡಲಿದೆ. ಬಳ್ಳಾರಿ ಬೆಟ್ಟದ ಮೇಲೆ ತಿಮ್ಮನ ದೇವಸ್ಥಾನ ನಿರ್ಮಿಸಿ ಪ್ರವಾಸಿ ತಾಣವಾಗಿ ಮಾಡಲು ಕೇಬಲ್ ಕಾರ್ ಯೋಜನೆ ಅನುಷ್ಠಾನಕ್ಕೆ ತರಲಿದೆ, ವಿದ್ಯುತ್ ಚಿತಾಗಾರ ನಿರ್ಮಿಸಲಿದೆ ಎಂದು ಹೇಳಿದರು.
@12bc = ಆರೋಪ ನಿರಾಕರಣೆ
ಟಿಕೆಟ್ ನೀಡಿಕೆಯಲ್ಲಿ ಭ್ರಷ್ಠಾಚಾರ ನಡೆದಿದೆ ದೇಗಲು ಪಾಡು ನಾರಾಯಣ ಆರೋಪ ತಳ್ಳಿ ಹಾಕಿದ ಮುಖಂಡರು 5ನೇ ವಾರ್ಡಿನ ಅಭ್ಯರ್ಥಿ ಬಡವ ಆದರೆ ಆತನನ್ನು ಗೆಲ್ಲಿಸಲು ನಾವು ಹಣ ನೀಡುತ್ತೇವೆ ಎಂದು ಆ ವಾರ್ಡಿನ ಜನ ಮುಂದೆ ಬಂದಿದ್ದರಿಂದ ನೀಡಿದೆ. ಮೊದಲು ಪ್ರಕಟ ಆಗಿ ನಂತರ ಬದಲಾಗಿದ್ದರ ಬಗ್ಗೆ ಕೆಪಿಸಿಸಿಯವರನ್ನು ಕೇಳಿ ಎಂದು ಅಲ್ಲಂ ವೀರಭದ್ರಪ್ಪ ಸ್ಪಷ್ಟನೆ ನೀಡದರು.
@12bc = ಕ್ಲಿಷ್ಟ ಪರಿಸ್ಥಿತಿ
ಮಾಜಿ ಸಂಸದ ಉಗ್ರಪ್ಪ ಮಾತನಾಡಿ, ಕರೋನಾ ಸಂಕಷ್ಟದ ಕ್ಲಿಷ್ಟ ಪರಿಸ್ಥಿತಿಯಲ್ಲಿ ಚುನಾವಣೆ ಬಂದಿದೆ. ಅಬ್ಬರಕ್ಕಿಂತ ಬದ್ಯತೆ ಮತ್ತು ವಿಚಾರ ಧಾರೆಗೆ ಮೇಲೆ ಚುನಾವಣೆ ನಡೆಯಬೇಕಿದೆ. 5 ಜನರಿಗಿಂತ ಹೆಚ್ಚು ಸೇರಿ ಪ್ರಚಾರ ಮಾಡಬಾರದು, ಮೆರವಣಿಗೆ ಮಾಡಬಾರದು, ಸಾರ್ವಜನಿಕ ಸಭೆ ನಡೆಸಬಾರದೆಂದು ಆಯೋಗ ಹೇಳಿದೆ, ಇದರಿಂದ ಜೀವನ ಮುಖ್ಯ. ಪಕ್ಷದ ಎಲ್ಲಾ ಕಾರ್ಯಕರ್ತರು ಮಾಸ್ಕ್ ಧರಿಸಿ ಮನೆ ಮನೆ ಪ್ರಚಾರಕ್ಕೆ ಒತ್ತು ನೀಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಿದೆಂದ ಅವರು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಮಾಜಿ ಶಾಸಕ ಸೂರ್ಯನಾರಾಯಣರೆಡ್ಡಿ, ಮಾಜಿ ಸಚಿವ ದಿವಾಕರ್ ಬಾಬು, ಹನುಮ ಕಿಶೋರ್ ಮೊದಲಾದವರು ಗೈರು ಹಾಜರಿ ಎದ್ದು ಕಾಣುತ್ತಿತ್ತು.