ಪಾಲಿಕೆಯಲ್ಲಿ ಬೇರೂರಿರುವ ನೌಕರರನ್ನು ವರ್ಗ ಮಾಡಿ

ಬಳ್ಳಾರಿ, ನ.6: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಕಳೆದ 10-15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ವರ್ಗಾವಣೆ ಮಾಡುವಂತೆ ಕರ್ನಾಟಕ ರಾಜ್ಯ ಭೋವಿ (ವಡ್ಡರ) ಮಹಾಸಭಾ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.
ಮಹಾಸಭಾದ ಜಿಲ್ಲಾ ಅಧ್ಯಕ್ಷ, ವಿ.ಬಿ.ಮಲ್ಲಯ್ಯ, ರಾಜ್ಯ ಖಜಾಂಚಿ ವಿ.ಕುಡಿತಿನಿ ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ನೆಟ್ಟಿಕಂಟಯ್ಯ, ವಿ.ಜಗನ್ನಾಥ, ಕಾರ್ಯಾಧ್ಯಕ್ಷ ಮಾರೆಣ್ಣ, ಈ.ಜಿ.ರೆಡ್ಡಿ, ಮೊದಲಾದವರು ಮನವಿ ಸಲ್ಲಿಸಿ, ಪಾಲಿಕೆಯಲ್ಲಿ ಗುಮಾಸ್ತರು, ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರು, ಕೇಸ್ ವರ್ಕರ್ ಗಳು, ತಾಂತ್ರಿಕ ವಿಭಾಗದ ಕಿರಿಯ ಇಂಜಿನೀಯರ್, ಸಹಾಯಕ ಇಂಜಿನೀಯರ್, ಉಪ ಆಯುಕ್ತರು, ಮುಖ್ಯ ಇಂಜಿನೀಯರ್ ವಿಭಾಗದಲ್ಲಿ ಹಲವರು ಕಳೆದ 10-15 ವರ್ಷಗಳಿಂದ ಬೇರೂರಿದ್ದಾರೆ. ಇವರು ಸಾರ್ವಜನಿಕರಿಗೆ ನಿಗಧಿತ ವೇಳೆಯಲ್ಲಿ ಕಡಿತ ವಿಲೇವಾರಿ ಮಾಡುವುದಿಲ್ಲ. ಅವರಿಗೆ ಅನುಕೂಲವಾದವರಿಗೆ ಮಾತ್ರ ತಕ್ಷಣ ಕೆಲಸ ಮಾಡುತ್ತಾರೆ. ಬಡ ಜನರು ಸಣ್ಣ ಪುಟ್ಟ ಕೆಲಸಗಳಿಗೆ 6-7 ತಿಂಗಳು ಅಲೆದಾಡಬೇಕಿದೆ. ಅದಕ್ಕಾಗಿ ಇಲ್ಲಿಯೇ ಬೇರೂರಿರುವವರನ್ನು ವರ್ಗ ಮಾಡಿ ವಿಳಂಬವಾಗಿರುವು ಕಡಿತ ವಿಲೇವಾರಿ ತ್ವರಿತ ಗತಿಯಲ್ಲಿ ಕೈಗೊಳ್ಳುವಂತೆ ಮಾಡಬೇಕೆಂದಿದ್ದಾರೆ.