ಪಾಲಿಕೆಯಲ್ಲಿ ಕಾಂಗ್ರೆಸ್ ಪದಚ್ಯುತಿಗೆ
ಬಿಜೆಪಿ ಕುತಂತ್ರ ರಾಜಕೀಯ: ನಾಗೇಂದ್ರ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಮೇ 14 : ಪಾಲಿಕೆಯಲ್ಲಿ ಕಾಂಗ್ರೆಸ್ ನ್ನು ಪದಚ್ಯುತಿ ಮಾಡಿ ತಾವು ಅಧಿಕಾರಕ್ಕೆ ಬರಲು ಬಿಜೆಪಿಯವರು ಪ್ಲಾನ್ ಮಾಡಿದ್ದಾರೆಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಆರೋಪ ಮಾಡಿದ್ದಾರೆ.
ನಗರದಲ್ಲಿ ನಿನ್ನೆ ಸಂಜೆ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ.
ಮೊದಲಬಾರಿಗೆ ಬಿಜೆಪಿ ವಿರುದ್ದ ಹರಿಹಾಯ್ದ ಶಾಸಕ ನಾಗೇಂದ್ರ ಅವರು. ಬಿಜೆಪಿಯವರು ರಾಜಕೀಯ ತಂತ್ರಗಾರಿಕೆ ಮಾಡುತ್ತಿಲ್ಲ.  ಕುತಂತ್ರ  ರಾಜಕೀಯ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಪೊರೇಟರ್ ಅಸೀಫ್ ಅವರು ನಮ್ಮ ಮಾವ ಎರಿಸ್ವಾಮಿ ವಿರುದ್ಧ ದೂರು‌ ನೀಡೋದ್ರ ಹಿಂದೆ ಬಿಜೆಪಿ ನಾಯಕರಿದ್ದಾರೆ. ಆಪರೇಷನ್ ಕಮಲಕ್ಕೆ ನಮ್ಮ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಬಲಿಯಾಗದ ಹಿನ್ನೆಲೆಯಲ್ಲಿ. ಮೇಯರ್ ಸ್ಥಾನಕ್ಕೆ ಡೀಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಪೋರೇಟರ್ ರಿಂದಲೇ ದೂರು ಕೊಡಿಸುವ ಕುತಂತ್ರ ಮಾಡಿದ್ದಾರೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಸಚಿವ ಶ್ರೀರಾಮುಲು ಬರುತ್ತಿರೋ ಹಿನ್ನೆಲೆ ಇಷ್ಟೇಲ್ಲ ರಾದ್ದಾಂತ ಮಾಡ್ತಿದ್ದಾರೆ ಎನಿಸುತ್ತಿದೆ.
ಬಿಜೆಪಿಗೆ ಬೆಂಬಲ ನೀಡುವಂತೆ
ಕಾರ್ಪೋರೆಟರ್ ಗಳಿಗೆ ಹಣ ಕೊಡೋದು, ಹಳೇ ಕೇಸ್ ರೀ ಓಪನ್ ಮಾಡೋದು ಮಾಡ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಕಾರ್ಪೋರೆಟರ್ ಗಂಡರೊಬ್ಬರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಕಾರ್ಪೊರೇಟರ್ ಜಮೀನು ಸರ್ಕಾರಿ ಜಮೀನು ಎಂದು ಜಪ್ತಿ‌ ಮಾಡಿದ್ದಾರೆ. ನಮ್ಮ ಮಾವ ಎರಿಸ್ವಾಮಿ ಮತ್ತು ಅಸೀಫ್ ಇಬ್ಬರು ಸ್ನೇಹಿತರು. ರಾಜಕೀಯಕ್ಕಾಗಿ ಸ್ನೇಹವನ್ನು ಒಡೆಯಲಾಗಿದೆ. ಆಸಿಫ್ ಅವರನ್ನು ಎದಿರಿಸಿ ಕೇಸು ಕೊಡಿಸಿದ್ದಾರೆ. ಶೀಘ್ರದಲ್ಲೇ ನಾಪತ್ತೆಯಾಗಿರೋ ಅಸೀಫ್ ಬಂದು ಎಲ್ಲದಕ್ಕೂ ಉತ್ತರ ಕೊಡ್ತಾರೆಂದಿದ್ದಾರೆ.