ಪಾಲಿಕೆಗೆ ನಾಡಿದ್ದು ಮತದಾನ ಮತದಾರರ ಮನಮುಟ್ಟುವ ಕಾರ್ಯ ಆರಂಭ

ಎನ್.ವೀರಭದ್ರಗೌಡ.
ಬಳ್ಳಾರಿ: ನಾಡಿದ್ದು ಇಲ್ಲಿ ಮಹಾನಗರ ಪಾಲಿಕೆಯ 39 ವಾರ್ಡುಗಳ ಸದಸ್ಯರನ್ನು ಆಯ್ಕೆ ಮಾಡಲು ಬೆಳಿಗ್ಗೆ 7 ರಿಂದ ಮತದಾನ ಆರಂಭಗೊಳ್ಳಲಿದ್ದು. ಅಭ್ಯರ್ಥಿಗಳ ಪರ ಏಜೆಂಟರು ಆಯಾ ವಾರ್ಡಿನಲ್ಲಿ ಮತದಾರರ ಮನ ಮುಟ್ಟುವ ಕಾರ್ಯವನ್ನು ನಿನ್ನೆಯಿಂದ ಆರಂಭಿಸಿದ್ದಾರೆ.
ಓಟರ್ ಲಿಸ್ಟ್ ಹಿಡಿದು. ಮನೆ ಮನೆಗೆ ತೆರಳುವ ಪಕ್ಷಬೇದಬಾವ ಇಲ್ಲದ ಯುವಕರ ಗುಂಪು. ನಿಮ್ಮ ಮೆನೆಯಲ್ಲಿ ಎಷ್ಟು ಓಟು ಇವೆ. ಇವೆಲ್ಲ ನಿಮ್ಮವೇ, ಎಂದು ಪ್ರಶ್ನಿರ್ನಿಸುತ್ತ, ಅವರಿಗೆ ಸಂಬಂಧಿಸಿದ ಮತದಾನಕ್ಕೆ ಬೇಕಾದ ಮತದಾರರ ಪಟ್ಟಿಯಲ್ಲಿ ಹೊಂದಿರುವ ಸಂಖ್ಯೆಯ ಚೀಟಿಯನ್ನು ನೀಡುತ್ತಿದ್ದಾರೆ. ಜೊತೆಗೆ ಅಭ್ಯರ್ಥಿ ಮತದಾರರ ಮನ ಮುಟ್ಟಲು ನೀಡಿದ್ದನ್ನು ಕೊಟ್ಟು ಮುಂದಕ್ಕೆ ಹೋಗುತ್ತಿದ್ದಾರೆ.
ಇದು ಬಹುರಂಗವಾಗಿ ನಿನ್ನೆ ಸಂಜೆಯಿಂದಲೇ ನಡೆದಿದೆ. ಮತದಾರರ ಚೀಟಿ ಇದ್ದು. ಹಲವು ಕಾರಣಗಳಿಂದ ಮತದಾರರ ಪಟ್ಟಿಯಲ್ಲಿ ಇಲ್ಲದವರಿಗೆ ಅಭ್ಯರ್ಥಿಯಿಂದ ಮನ ಮುಟ್ಟಿಸುವ ಕಾರ್ಯದಿಂದಲೂ ಅವರು ವಂಚಿತರಾಗುತ್ತಾರೆ. ಕೆಲವು ಕಡೆ ವಯಸ್ಸಾದ, ವೃದ್ದೆಯರು ತಮ್ಮ ಹೆಸರು ಇದೆ, ಓಟ್ ಕಾರ್ಡು ಇದೆ. ನನಗೇಕೆ ಇಲ್ಲ ಎಂತೀರಿ ಎಪ್ಪಾ . ಎಷ್ಟೋ ಕೊಟ್ಟು ಹೋಗ್ರಲೋ ಎಂದು ಕೇಳುತ್ತಿದ್ದು ಕುರಿಹಟ್ಟಿ ಪ್ರದೇಶದಲ್ಲಿ ಕಂಡು ಬಂತು.
ಈ ಹಿಂದಿನ ಚುನಾವಣೆಗಳಿಲ್ಲಿ ಗಡಿಯಾರ, ಕುಕ್ಕರ್, ಹೀಗೆ ಹಲವು ರೀತಿಯ ವಸ್ತುಗಳನ್ನು ವಿತರಿಸುವುದು ಕಂಡು ಬರುತ್ತಿತ್ತು. ಆದರೆ ಈ ಬಾರಿ ಅಂತಹುಗಳು ಕಂಡು ಬರದೇ ಏನಿದ್ದರೂ ಹಣ ಎನ್ನುವಂತಿದೆ.
ಈಗಾಗಲೇ ಕಳೆದ ಭಾನುವಾರ ಮನೆಗೆ ಎರೆಡು ನೂರ ಕೊಟ್ಟು ಕರಪತ್ರಗಳನ್ನು ಹಂಚಿದ್ದು ಅನೇಕ ವಾರ್ಡುಗಳಲ್ಲಿ ಕೇಳಿ ಬಂದಿತ್ತು.
ಈಗ ಆರಂಭಿಕವಾಗಿ ಕೆಲ ವಾರ್ಡುಗಳಲ್ಲಿ 200, 500 ಕೊಡುವ ಕಾರಣ ನಡೆದಿದೆ ಎನ್ನಲಾಗುತ್ತಿದೆ. ಆದರೆ ಕೆಲ ಪ್ರತಿಷ್ಠಿತ ವಾರ್ಡುಗಳಲ್ಲಿ ಇದು ಒಂಧರಿಂದ 2 ಸಾವಿರದ ವರೆಗೆ ಮುಟ್ಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅನೈತಿಕವಾದರೂ ಅಂತೂ ಕರೋನಾ ಸಂಕಷ್ಟ ಕಾಲದಲ್ಲಿ ಬಡ ಜನತೆಗೆ ಈ ಚುನಾವವಣೆ ಒಂದಿಷ್ಟು ಸಹಕಾರವೇ ಎನ್ನುವಂತಾಗಿದೆ.