ಪಾಲನೆಯಾಗದ ಸಾಮಾಜಿಕ ಅಂತರ

ದಾವಣಗೆರೆ.ಏ.೨೬; ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಎದುರಿಸಲು ಸರ್ಕಾರದ ಮಟ್ಟದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಸಾರ್ವಜನಿಕರು ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸುವ ಮೂಲಕ ಎಚ್ಚರಿಕೆ ವಹಿಸಬೇಕು, ಆದರೆ ಸಾರ್ವಜನಿಕರು ಮಾಸ್ಕ್ ಧರಿಸದೇ ಆಟೋದಲ್ಲಿ  ಸಾಮಾಜಿಕ ಅಂತರ ಪಾಲಿಸದೇ ಪ್ರಯಾಣಿಸುತ್ತಿರುವುದು  ದಾವಣಗೆರೆಯಲ್ಲಿಂದು ಕಂಡುಬಂದಿತು.ಆದರೆಪೊಲೀಸರು ಸಹ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.