ಪಾಲಕ್ ಚಾಟ್

ಬೇಕಾಗುವ ಸಾಮಗ್ರಿಗಳು

*ಪಾಲಕ್ ಸೊಪ್ಪು – ೧ ಕಟ್
*ಚಾಟ್ ಮಸಾಲ – ೧/೨ ಚಮಚ
*ಓಂ ಕಾಳು – ೧ ಚಮಚ
*ಎಣ್ಣೆ – ೧ ಕೆ.ಜಿ
*ಕಡ್ಲೆ ಹಿಟ್ಟು – ೧೫೦ ಗ್ರಾಂ
*ಟೊಮೆಟೊ – ೨
*ಅಕ್ಕಿ ಹಿಟ್ಟು – ೧೫೦ ಗ್ರಾಂ
*ಈರುಳ್ಳಿ – ೨
*ಅಚ್ಚ ಖಾರದ ಪುಡಿ – ೧ ಚಮಚ
*ಹಸಿರು ಮೆಣಸಿನಕಾಯಿ – ೩
*ಉಪ್ಪು – ಸ್ವಲ್ಪ

ಮಾಡುವ ವಿಧಾನ :

ಬೌಲಿಗೆ ಕಡ್ಲೆಹಿಟ್ಟು , ಅಕ್ಕಿ ಹಿಟ್ಟು, ಉಪ್ಪು, ಓಂಕಾಳು, ಅಚ್ಚಖಾರದ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ. ಇದಕ್ಕೆ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿಕೊಳ್ಳುತ್ತಾ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಈ ಮಿಶ್ರಣದಲ್ಲಿ ಒಂದೊಂದೇ ಪಾಲಕ್ ಎಲೆಯನ್ನು ಅದ್ದಿ, ಅದನ್ನು ಕಾದ ಎಣ್ಣೆಯಲ್ಲಿ ಕೆಂಪು ಬಣ್ಣ ಬರುವವರೆಗೂ ಕರಿಯಿರಿ. ಕರಿದ ಪಾಲಕ್ ಎಲೆಯ ಮೇಲೆ ಚಿಕ್ಕದಾಗಿ ಹೆಚ್ಚಿಕೊಂಡ ಟೊಮೆಟೊ, ಈರುಳ್ಳಿ, ಕೊತ್ತಂಬರಿಸೊಪ್ಪನ್ನು ಹಾಕಿ. ಜೊತೆಗೆ ನಿಂಬೆರಸ, ಚಾಟ್ ಮಸಾಲ ಹಾಕಿದರೆ ಗರಿಗರಿ ಪಾಲಕ್ ಚಾಟ್ ರೆಡಿ.