ಪಾಲಕರು ತಮ್ಮ ಮಕ್ಕಳನ್ನು ಬೇದಭಾವ ಮಾಡದೆ ಸಮಾನವಾಗಿ ನೋಡಬೇಕು : ಫಯಾಜ ಕಲಾದಗಿ

ವಿಜಯಪುರ : ಮೇ.27:ಪಾಲಕರು ತಮ್ಮ ಮಕ್ಕಳನ್ನು ಬೇದಭಾವ ಮಾಡದೆ ಸಮಾನ ನೋಡಬೇಕು. ಪ್ರತಿಯೊಬ್ಬ ಮಕ್ಕಳ ಶಿಕ್ಷಣಕ್ಕೆ ಶ್ರಮವಹಿಸಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಮಾಜ ಸೇವಕರಾದ ಫಯಾಕ ಕಲಾದಗಿ ಹೇಳಿದರು.
ಅವರು ನಗರದ ಅಲ್ ಹುದಾ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 100 ಕ್ಕೆ 100 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶ ಉನ್ನತಿಹೊಂದ ಬೇಕಾದರೆ ಪ್ರತಿಯೊಬ್ಬರ ಶಿಕ್ಷಣವಂತರಾಗಬೇಕು. ಪ್ರತಿಯೊಬ್ಬರು ಶಿಕ್ಷಣ ಪಡೆಯುವು ಅತಿ ಅವಶ್ಯವಾಗಿದೆ. ಶಿಕ್ಷದಿಂದ ಮಾತ್ರ ಪ್ರತಿಯೊಬ್ಬರು ಅಭಿವೃದ್ಧಿ ಹೊಂದ ಸಾಧ್ಯ ಎಂದರು.
ಸಿಕ್ಯಾಬ ಶಾಲೆಯ ಮುಖ್ಯ ಗುರುಗಳಾದ ಸಿರಾಜ ಜಮಖಂಡಿ ಮಾತನಾಡಿ, ವಿದ್ಯಾರ್ಥಿಗಳು ಶ್ರಮ ಪಟ್ಟರೆ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬಹುದು. ಅದರಂತೆ ಜ್ಞಾನ ವನ್ನು ಇಮ್ಮಡಿಗೊಳಿಸಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಶಾಲೆಯ ನಿರ್ದೇಶಕ ರಾದ ಜಿಲಾನಿ ಜಮಾದಾರ, ಕಾರ್ಯದರ್ಶಿ ಗಳಾದ ನಿಜಾಮ ಅತ್ತಾರ, ಅಧ್ಯಕ್ಷರಾದ ಡಾ. ಮೊಮ್ಮದ ಉಮರಿ , ಶ್ರೀಮತಿ ಐ.ಜೆ.ಜಮಾದಾರ, ಶ್ರೀಮತಿ ಕ್ಯೂ.ಜೆ.ಜಮಾದಾರ ಉಪಸ್ಥಿತರಿದ್ದರು.