ಪಾಲಕರು ಗರ್ವಪಡುವಂತೆ ವಿದ್ಯಾರ್ಥಿಗಳು ಸಾಧನೆ ಮಾಡಬೇಕು: ನಟಿ ಮೋಕ್ಷಿತಾ

ಕಲಬುರಗಿ,ನ.30- ಪಾಲಕರು ಕಷ್ಟಪಟ್ಟು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಶಿಕ್ಷಣ ಕೊಡಿಸುತ್ತಿರುವ ಅವರು ಗರ್ವಪಡುವಂತೆ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ಪಾರು ಧಾರವಾಹಿ ಖ್ಯಾತಿಯ ನಟಿ ಮೋಕ್ಷಿತಾ ಕರೆ ನೀಡಿದರು.
ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜೈಕನ್ನಡಿಗರ ಸೇನೆ ಅಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಪ್ರತಿಭೆ ಹಾಗೂ ಅಸಕ್ತಿಯ ವಿಷಯಗಳನ್ನು ಆಯ್ಕೆಮಾಡಿಕೊಂಡ ವೇದಿಕೆಯಿಂದ ಸಾಧನೆ ಮಾಡಲು ಶ್ರಮಿಸಬೇಕು. ನನ್ನಲ್ಲಿರುವ ಕಲೆಯ ಅಸಕ್ತಿಯಿಂದಾಗಿ ಇಂದು ಕಿರುತೆರೆಯಲ್ಲಿ ನಟಿಸುತ್ತಿದ್ದೇನೆ ನನ್ನ ಮೇಲಿನ ಪ್ರೀತಿ ಮತ್ತು ಅಭಿಮಾನದಿಂಧ ಇಲ್ಲಿನ ವಿದ್ಯಾರ್ಥಿ ಯುವಜನರು ಸೆಲ್ಫಿ ತೆಗೆದುಕೊಳ್ಳು ಮುಂದಾಗುತ್ತಿರುವ ತಮ್ಮ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ, ನೀವೆಲ್ಲರೂ ಎತ್ತರಕ್ಕೆ ಬೆಳೆದು ಕುಟುಂಬದ ಹಾಗೂ ನಾಡಿನ ಸೇವೆ ಮಾಡುವ ಭಾಗ್ಯ ದೇವರು ಕಲ್ಪಿಸಲಿ ಎಂದು ಪ್ರಾರ್ಥಿಸಿದರು.
ಶ್ರೀನಿವಾಸ ಸರಡಗಿಯ ಶ್ರೀರೇವಣಸಿದ್ದ ಶಿವಾಚಾರ್ಯರು ಮಾತನಾಡಿ, ಜಗತ್ತಿನ ಭಾಷೆಗಳಲ್ಲಿ ಅತ್ಯಂತ ಶ್ರೀಮಂತ ಹಾಗೂ ಸರಳ ಸುಂದರ ಭಾಷೆ ಕನ್ನಡವಾಗಿದೆ, ತಂತ್ರಜ್ಞಾನದ ಭರಾಟೆಯಲ್ಲಿ ಕನ್ನಡ ಅಳಿದು ಹೋಗದಂತೆ ನಾಡುನುಡಿಯನ್ನು ಉಳಿಸಿ ಬೇಳೆಸುವ ಕೆಲಸವನ್ನು ಕನ್ನಡಪರ ಸಂಘಟನೆಗಳು ಮಾಡಬೇಕು ಎಂದು ಕರೆ ನೀಡಿದರು.
ಶತಮಾನಗಳ ಇತಿಹಾಸ ಇರುವ ಕನ್ನಡವನ್ನು ಉಳಿಸಿ ಬೆಳೆಸಬೇಕು, ಭಾಷೆ ಉಳಿದರ ಮಾತ್ರ ನಾಡಿನ ಸಂಸ್ಕøತಿ ಪರಂಪರೆ ಉಳಿಯಲು ಸಾಧ್ಯವಿದೆ ಈ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಶ್ರಮಿಸುತ್ತಿರುವುದು ತುಂಬ ಸಂತಸದ ವಿಷಯ ಎಂದು ವಿಧಾನ ಪರಿಷತ್ತಿನ ಸದಸ್ಯ ಶಶೀಕ ಜಿ.ನಮೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಬರೀ ಭಾಷೆಯಲ್ಲ ಅದೊಂದು ಸಂಸ್ಕøತಿಯಾಗಿದೆ ಸಮಸ್ತ ಕನ್ನಡಿಗರೆಲ್ಲರೂ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಅವರು ಕರೆ ನೀಡಿದರು.
ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ, ಹಿರಿಯ ಸಾಹಿತಿ ಸ್ವಾಮಿರಾವ ಕುಲಕರ್ಣಿ, ಶಾಮರಾವ ಪ್ಯಾಟಿ, ಆದಿನಾಥ ಹೀರಾ, ಪ್ರಭುಲಿಂಗ ನೀಲೂರೆ, ಶರಣಯ್ಯ ಹಿರೇಮಠ, ಡಾ.ಎ.ಎಸ್.ಭದ್ರಶೆಟ್ಟಿ, ರೋಹನಕುಮಾರ ಅವರಿಗೆ ಸಂಘಟನೆಯ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಎಚ್.ಭಾಸಗಿ ವಹಿಸಿದ್ದರು, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ, ರವಿ ರಾಠೋಡ, ಜಿಲ್ಲಾ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಲತಾ ರವಿರಾಠೋಡ, ದಶರಥ ಕಣಮಸ್ ಸೇರಿದಂತೆ ಹಲವರಿದ್ದರು.