ಪಾರ್ಸೆಲ್ ತರುತ್ತಿದ್ದ ಲಾರಿಯಿಂದ ಟಿ.ವಿ, ಏರ್‌ಕೂಲರ್ ಕಳವುಗೈದ ಚಾಲಕ

ಮಂಗಳೂರು, ಮಾ.೩೧- ಬೆಂಗಳೂರಿನಿಂದ ಪಾರ್ಸೆಲ್ ತರುತ್ತಿದ್ದ ಲಾರಿಯನ್ನು ಅದರ ಚಾಲಕ ಬಂಟ್ವಾಳದ ಮೆಲ್ಕಾರ್ ನಲ್ಲಿ ನಿಲ್ಲಿಸಿ ಅದರಲ್ಲಿ ೯೬ ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ದೋಚಿದ ಘಟನೆ ಮಾರ್ಚ್ ೨೫ರಂದು ನಡೆದಿದೆ.
ಲಾರಿ ಮಾಲಕ ಬೆಂಗಳೂರು ಮೂಲದ ಹೆಚ್. ಆರ್. ಲೋಕೇಶ್ ಅವರು ದೂರು ನೀಡಿದ್ದು, ಲಾರಿಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಪಾರ್ಸೆಲ್ ಸಾಗಿಸಲಾಗುತ್ತಿತ್ತು. ಅದರ ಚಾಲಕ ತುಮಕೂರು ಮೂಲದ ಮಂಜುನಾಥ್ ಮೆಲ್ಕಾರ್ ನಲ್ಲಿ ಲಾರಿಯನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ. ಲಾರಿಯನ್ನು ಪರಿಶೀಲನೆ ಮಾಡಿದಾಗ ೩ ಟಿವಿ, ಏರ್ ಕೂಲರ್ ಸೇರಿದಂತೆ ಒಟ್ಟು ೯೬ ಸಾವಿರ ರೂ. ಮೌಲ್ಯದ ಸೊತ್ತುಗಳು ಕಳವಾಗಿರುವುದಾಗಿ ಗೊತ್ತಾಗಿದೆ. ಈ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.