ಪಾರ್ವತಿ ನಗರದ ಸರ್ಕಾರಿ ಶಾಲೆಗೆ
ಬೇಡಿದ ತಕ್ಷಣ ಬಂತು ಬೋರವೆಲ್ ನೀರು


ಎನ್.ವೀರಭದ್ರಗೌಡ
ಬಳ್ಳಾರಿ, ಜು.29: ಬೇಡಿದ ತಕ್ಷಣ ಬಂತು ಇಲ್ಲಿನ ಪಾರ್ವತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೋರ್ ವೆಲ್ ನೀರು.
ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿಯಲ್ಲಿ 320 ಕ್ಕೂ ಹೆಚ್ಚು ಮಕ್ಕಳಿವೆ. ಎಲ್ಲರೀತಿ ಸೌಲಭ್ಯ ಇದೆ ನೀರು ಬಿಟ್ಟು.
ಕಳೆದ ಹತ್ತಾರು ವರ್ಷಗಳ ಹಿಂದೆ ಕೊರೆಸುದ್ದ ಬೋರ್ ಬಂದ್ ಆಗಿತ್ತು. ಸಂಪು ಸೋರುತ್ತಿತ್ತು. ಪಾಲಿಕೆ ಸರಬರಾಜು‌ಮಾಡುವ ನೀರಿನ ಪೈಪ್ ಹೊಡೆದಿತ್ತು. ಒಟ್ಟಾರೆ ನೀರಿಲ್ಲದೆ ಶಾಲೆ ಗಬ್ಬುನಾರತೊಡಗಿತ್ತು.
ಕುಡಿಯುವ ನೀರಿಗಾಗಿ ಪಕ್ಕದ ಹಳ್ಳಿಮನೆ ಹೊಟೇಲ್ ಗೆ ಬೇಡುತ್ತಿದ್ದರು.
ಈ ಶಾಲೆಯ ಆವರಣ ಪ್ರವೇಶ ಮಾಡಿದರೆ ಗಮ್ ಎಂದು ದುರ್ವಾಸನೆ ಬರುತ್ತಿತ್ತು. ಕಾರಣ ನೀರಿಲ್ಲದೆ ಶೌಚಾಲಯದ ಬಳಕೆ. ಕಳೆದ ಒಂದು ತಿಂಗಳಿಂದ  ಶಾಲೆಯ ನೀರಿನ ಮೂಲಗಳೆಲ್ಲ ಬಂದ್ ಆಗಿದ್ದರಿಂದ ಈ ಪರಿಸ್ಥಿತಿ ಬಂದಿತ್ತು. ಆದರೂ ಮಕ್ಕಳು ಶಾಲೆಯ ಸಿಬ್ಬಂದಿ ಅನಿವಾರ್ಯವಾಗಿ ದಿನ ದೂಡುತ್ತಿದ್ದರು.
ಶಾಲೆಗೆ ನೀರಿನ ಸೌಲಭ್ಯ ಕಲ್ಪಿಸಿ ಎಂದು ಮುಖ್ಯಗುರುಗಳು ಶಿಕ್ಷಕರು, ಮೇಲಾಧಿಕಾರಿಗಳಿಗೆ ಪತ್ರ ಬರೆದರು. ಕರೆ ಮಾಡಿ ತಿಳಿಸಿದರು ಆಗಲಿಲ್ಲ. ಸ್ಥಳೀಯ ಕೆಲ ಜನಪ್ರತಿನಿಧಿಗಳ ಗಮನಕ್ಕು ತಂದರೂ ಆಗಲಿಲ್ಲ.
ಆಗ ಶಾಲೆಯ ಸಿಬ್ಬಂದಿಗೆ ಒಬ್ಬರು ನೀವು ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಷ್ ಅವರ ಬಳಿ ಹೋಗಿ  ನಿಮ್ಮ ಸಮಸ್ಯೆ ಬಗೆಹರಿಯುತ್ತೆ ಎಂದು. ಸತೀಶ್ ಅವರ ಬಳಿ ತೆರಳಿ ಶಾಲೆಯ ಸಿಬ್ಬಂದಿ ಸಮಸ್ಯೆ ವಿವರಿಸುತ್ತಿದ್ದಂತೆ. ಅವರು ತಮ್ಮ ವಯಕ್ತಿಕ ನೆರವಿನಿಂದ ಬೋರ್ ಕೊರೆಸಿ, ಸಂಪರ್ಕ ಕಲ್ಪಿಸಿ, ಕೆಲ ದುರಸ್ಥಿಕಾರ್ಯವನ್ನು ಮಾಡಿಸಿ. ಈಗ ಶಾಲೆಯ ಮಕ್ಕಳು ನೀರು ಬಳಕೆ ಮಾಡುವಂತೆ ಮಾಡಿದ್ದಾರೆ. ಶಾಲೆಯ ಆವರಣದಲ್ಲಿದ್ದ ದುರ್ನಾಥವನ್ನು ದೂರ ಮಾಡಿದ್ದಾರೆ. ಶಾಲೆಯ ಮಕ್ಕಳು ಸಿಬ್ಬಂದಿ ನೆಮ್ಮದಿಯಿಂದ ಪಾಠ ಹೇಳಲು, ಕೇಳುಲು ಅನುವಾಗಿದೆ.

:
ಶಾಲೆಯ ಸಮಸ್ಯೆಯನ್ನು ಸಂಬಂಧಿಸಿದ ಇಲಾಖೆ ಬಗೆಹರಿಸಬೇಕಿತ್ತು. ಆದರೆ ಸಿಬ್ಬಂದಿ ಬಂದಾಗ ನಾನು ನನ್ನಿಂದಾದ ನೆರವು ನೀಡಿರುವೆ. ನೆರವನ್ನು ಸ್ಮರಿಸಬೇಕಿಲ್ಲ
ವೈ.ಎಂ.ಸತೀಶ್, ಎಂಎಲ್ ಸಿ ಬಳ್ಳಾರಿ.

ನೀರಿಲ್ಲದೆ ನಮಗೆ  ಸಮಸ್ಯೆ ಆಗಿತ್ತು. ಶೌಚಾಲಯ ಬಳಕೆಯೂ ಕಷ್ಟ ಆಗಿತ್ತು. ಕುಡಿಯಲೂ ನೀರು ಇರಲಿಲ್ಲ. ಈಗ ನೀರು ಬಂದಿದೆ ಸಂತಸ ತಂದಿದೆ
ಗುರು ಬಸವ ಶಾಲೆಯ ವಿದ್ಯಾರ್ಥಿ.