ಪಾರ್ಥ ಚಟರ್ಜಿ ಏಮ್ಸ್‌ಗೆ ಸ್ಥಳಾಂತರ

ಕೊಲ್ಕತ್ತಾ, ಜು.೨೫ – ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಸಚಿವ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಯಿಂದ ಭುವನೇಶ್ವರದ ಏಮ್ಸ್ ಗೆ ಸ್ಥಳಾಂತರ ಮಾಡಿದ್ದಾರೆ.
ಕೊಲ್ಕತ್ತಾ ಹೈಕೋರ್ಟ್‌ನ ಆದೇಶದ ಪ್ರಕಾರ ಎಸ್‌ಎಸ್‌ಕೆಎಂ ಆಸ್ಪತ್ರೆಯ ವೈದ್ಯರು ಮತ್ತು ಅವರ ವಕೀಲರೊಂದಿಗೆ ಏರ್ ಆಂಬುಲೆನ್ಸ್ ಮೂಲಕ ಭುವನೇಶ್ವರದ ಏಮ್ಸ್‌ಗೆ ಸ್ಥಳಾಂತರಿಸಲಾಗಿದೆ..
ಆಡಳಿತ ಪಕ್ಷಕ್ಕೆ ಸೇರಿದದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಭಾವ ಬೀರಬಹುದು ಎನ್ನುವ ಕಾರಣಕ್ಕೆ ಒಡಿಶಾಕ್ಕೆ ಸ್ಥಳಾ.ತರ ಮಾಡಲಾಗಿದೆ.
ನ್ಯಾಯಾಧೀಶರ ಮುಂದೆ ಜಾರಿ ನಿರ್ದೇಶನಾಲಯ ಚಟರ್ಜಿಯನ್ನು ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಬದಲಿಗೆ ಕಮಾಂಡ್ ಆಸ್ಪತ್ರೆಗೆ ಕರೆದೊಯ್ಯಲು ಅನುಮತಿಸಬೇಕು. ಪಾರ್ಥ ಚಟರ್ಜಿ ಹಿರಿಯ ಸಚಿವರಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಭಾವಶಾಲಿಯಾಗಬಹುದು ಎಂದು ಹೇಳಿತ್ತು.
ಆರೋಪಿಯನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಮೂಲಕ ಕೊಲ್ಕತ್ತಾದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದು ಅಲ್ಲಿಂದ ಏರ್ ಅಂಬುಲೆನ್ಸ್ ಮೂಲಕ ಏಮ್ಸ್‌ಗೆ ದಾಖಲು ಮಾಡಲಾಗಿದೆ.
ಸಂಜೆ ೪ ಗಂಟೆಗೆ ವರ್ಚುವಲ್ ಮೂಲಕ ಕೊಲ್ಕತ್ತಾದ ವಿಶೇಷ ಇಡಿ ನ್ಯಾಯಾಲಯಕ್ಕೆ ಸಚಿವರನ್ನು ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿದೆ.
ಟಿಎಂಸಿ ಪಕ್ಷ ಪಾರ್ಥ ಚಟರ್ಜಿ ವಿರುದ್ಧದ ಇಡಿ ಪ್ರಕರಣದಲ್ಲಿ ಕಾಲಮಿತಿಯ ತನಿಖೆಗೆ ಒತ್ತಾಯಿಸಿದೆ,
ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಹಣದ ಜಾಡು ಹಿಡಿದಿರುವ ತನಿಖೆಯ ಭಾಗವಾಗಿ ಇಡಿ ಸಿಬ್ಬಂದಿ ಜುಲೈ ೨೨ ರಂದು ರಾಜ್ಯದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಹಗರಣದ ಇಡಿ ತನಿಖೆಯ ಭಾಗವಾಗಿ ಚಟರ್ಜಿ ಮತ್ತು ಮುಖರ್ಜಿ ಅವರನ್ನು ಬಂಧಿಸಿದೆ.