ಪಾರ್ಕ್ ಅಭಿವೃದ್ಧಿ ಕಾಮಗಾರಿ ಅಧಿಕಾರಿ ಭೇಟಿ

ಸಿಂಧನೂರು.ಸೆ.೨೫-ನಗರದಲ್ಲಿ ನಡೆದಿರುವ ಏಳು ಪಾರ್ಕ್ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾದ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿದ್ದು. ವರದಿಗೆ ಸ್ಪಂದಿಸಿ ಪಾಕ್ ಅಭಿವೃದ್ಧಿ ಕಾಮಗಾರಿ ನಡೆಸುತ್ತಿರುವ ದಿ ನರ್ಸ್‌ರಿ ಮೇನ್ ಕೋ ಆಪರೇಟ ಲಿ.ಸೋಸೈಟಿ ಬೆಂಗಳೂರು ಇವರು ಸ್ಥಳಕ್ಕೆ ಆಗಮಿಸಿ ಕಾಮಗಾರಿ ಪರಿಶೀಲನೆ ನಡೆಸಿದರು.
ಸೋಸೈಟಿಯ ತಿಪ್ಪೇರುದ್ರಸ್ವಾಮಿ ಜೆಇ ನರೇಶ ಹಾಗೂ ಇತರೆ ಸಿಬ್ಬಂದಿ ವರ್ಗ ನಗರ ಸಭೆ ಸದಸ್ಯ ಮುನೀರ್ ಪಾಷ ಸಮ್ಮುಖದಲ್ಲಿ ಕಾಮಗಾರಿ ಪರಿಶೀಲನೆ ನಡೆಸಿ ಇನ್ನು ಮುಂದೆ ಕಳಪೆಯಾಗದಂತೆ ಗುಣಮಟ್ಟದ ಕಾಮಗಾರಿ ಮಾಡಲಾಗುವುದು. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕಾಮಗಾರಿ ಕಳಪೆಯಾಗದಂತೆ ಗುಣಮಟ್ಟದ ನಡೆಯುವಂತೆ ನೋಡಿಕೊಳ್ಳಲು ಒರ್ವ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಸೋಸೈಟಿ ತಿಪ್ಪೇರುದ್ರಸ್ವಾಮಿ ಪತ್ರಿಕೆಗೆ ಸ್ಪಷ್ಟೀಕರಣ ನೀಡಿದರು.