ಪಾರ್ಕ್‌ ಗಳ ಅಭಿವೃದ್ಧಿಗೆ ಆದ್ಯತೆ

ಹರಿಹರ.ಡಿ.೨೬; ಜೈಭೀಮನಗರದ ಪಾರ್ಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಪೌರಾಯುಕ್ತ ಉದಯಕುಮಾರ್ ಹಾಗೂ ಎಇಇ ಎಸ್.ಎಸ್.ಬಿರಾದರ್  ಸ್ಥಳಕ್ಕೆ ಭೇಟಿ ನೀಡಿದ್ದರು. ಪಾರ್ಕಿಗೆ ಮೀಸಲಾದ ಜಾಗದಲ್ಲಿ ಹಸಿರಿಲ್ಲದಿರುವುದು, ಕಸ,ಕಡ್ಡಿಯನ್ನು ಗಮನಿಸಿದರು. ನಂತರ ಪೌರಾಯುಕ್ತ ಉದಯಕುಮಾರ್ ಮಾತನಾಡಿ, ಪಾರ್ಕುಗಳ ರಕ್ಷಣೆ, ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಹಸಿರೆ ಉಸಿರಾಗಿದೆ. ಮಕ್ಕಳ ಆಟ, ಮನೋರಂಜನೆಗೆ, ಹಿರಿಯರು ಹಾಗೂ ಮಹಿಳೆಯರ ವಾಕ್, ವ್ಯಾಯಾಮಕ್ಕೆ ತಕ್ಕದಾಗಿ ಈ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು.ಕೋವಿಡ್-19 ನಿಂದಾಗಿ ಅನುದಾನದ ಕೊರತೆ ಇದೆ. ಹೀಗಾಗಿ ಈ ಪಾರ್ಕಿನ ಸಮಗ್ರ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡುವುದು ಕಷ್ಟಕರವಾಗಿದೆ. ಆದರೆ ತಾತ್ಕಾಲಿಕವಾಗಿ ಈ ಆವರಣವನ್ನು ಸ್ವಚ್ಚಗೊಳಿಸಿ ಕುಳಿತುಕೊಳ್ಳುವ ಕೆಲವು ಬೆಂಚುಗಳನ್ನು ಅಳವಡಿಸುತ್ತೇವೆ. ಅನುದಾನ ಲಭ್ಯವಾದಾಗ ಪಾರ್ಕಿನ ಅಭಿವೃದ್ಧಿಗೆ ಆಧ್ಯತೆ ನೀಡಲಾಗುವುದೆಂದರು.