ಪಾರ್ಕ್‌ಗಳಲ್ಲಿ ಶಿಲ್ಪಗಳ ಸ್ಥಾಪಿಸಲು ಮನವಿ

ಬೆಂಗಳೂರು- ನಗರದ ಉದ್ಯಾನವನಗಳಲ್ಲಿ ಕರಕುಶಲ ಕರ್ಮಿಗಳಿಗೆ ನಾಡಿನ ಪರಂಪರೆಯನ್ನು ಬಿಂಬಿಸುವ ಕಲ್ಲಿನ ಶಿಲ್ಪಗಳನ್ನು ಸ್ಥಾಪಿಸಬೇಕು ಎಂದು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಅವರು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಅವರಿಗೆ ಮನವಿ ಮಾಡಿದ್ದಾರೆ.
ನೂತನ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಿದ ಬಳಿಕ ನಾಡಿನ ಸಂಸ್ಕೃತಿ ಬಿಂಬಿಸುವ ಶಿಲ್ಪಗಳು, ಹಂಪಿ ಬೇಲೂರು, ಹಳೆಬೀಡು ಮಾದರಿ ಕಲ್ಪಿನ ಶಿಲ್ಪಗಳನ್ನು ಬೆಂಗಳೂರಿನ ಉದ್ಯಾನವನಗಳಲ್ಲಿ ಸ್ಥಾಪಿಸಲು ನಿಗಮದ ಕರಕುಶಲ ಕರ್ಮಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾರೆ. ಬಳಿಕ ಮಾತನಾಡಿದ ರಾಘವೇಂದ್ರ ಶೆಟ್ಟಿ, ಉದ್ಯಾನವನದಲ್ಲಿ ಕಲ್ಲಿನ ಕೆಲಸ ನೀಡಿದರೆ ಅವರಿಗೆ ಪ್ರೋತ್ಸಾಹಿಸಿ ದಂತಾಗುತ್ತದೆ. ಈ ಬಗ್ಗೆ ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳಿಗೂ ಮನವಿ ಸಲ್ಲಿಸಲಾಗುವುದು ಸ್ಥಳೀಯ ಕಲ್ಲಿನ ಕೆತ್ತನೆಯ ಶಿಲ್ಪಿಗಳಿಗೆ ಕೆಲಸ ನೀಡಲಾಗುತ್ತದೆ. ಪ್ರಥಮವಾಗಿ ಬೆಂಗಳೂರು ನಗರದಲ್ಲಿ ಇದನ್ನು ಪ್ರಾರಂಭಿಸಲಾಗುವುದು ಎಂದರು.