
ಕಲಬುರಗಿ,ಏ 30: ಹಂಸ ನಾಮಕ ಮತ್ತು ಲಕ್ಷ್ಮೀನಾರಾಯಣ ಪಾರಾಯಣ ಸಂಘದಿಂದ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಇಂದು ಸನ್ಮಾನಿಸಲಾಯಿತು.
ಪಾರಾಯಣ ಸಂಘಗಳ ಸಂಚಾಲಕ ರವಿ ಲಾತೂರಕರ ಮಾತನಾಡಿ ಪ್ರತಿ ವರ್ಷ ನಮ್ಮ ಪಾರಾಯಣ ಸಂಘದಿಂದ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹಿಸುತ್ತಿದೆ.ಹೆಚ್ಚಿನ ಅಂಕ ಪಡೆದ ಮಕ್ಕಳು ವಿದ್ಯೆ ಜೊತೆಗೆ ಸಂಸ್ಕಾರ, ತಂದೆ ತಾಯಿ, ಹಿರಿಯರಲ್ಲಿ ಗೌರವ,ಧಾರ್ಮಿಕ ಕಾರ್ಯ ಮಾಡಬೇಕು. ಮುಂದೆ ಇನ್ನೂ ಹೆಚ್ಚಿಗೆ ಓದಿ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗಿ ದೇಶಕ್ಕೆ ಒಳ್ಳೆಯ ಪ್ರಜೆ ಆಗಬೇಕು ಎಂದು ಹೇಳಿದರು.
ಹೆಚ್ಚಿನ ಅಂಕಗಳನ್ನು ಪಡೆದ ಯಶಶ್ರೀ ದೇಶಪಾಂಡೆ ಶೇ 94, ಪ್ರಭಂಜನ ಕುಲಕರ್ಣಿ ಶೇ.91, ಪ್ರಾಚೀ ಕುಲಕರ್ಣಿ ಶೇ.90, ಬ್ರಹತಿ ಕುಲಕರ್ಣಿ ಶೇ.89, ಮೇದಿನಿ ಕುಲಕರ್ಣಿ, ಅನನ್ಯಾ ಜೋಶಿ ಅವರನ್ನು ಸನ್ಮಾನಿಸಲಾಯಿತು.
ಪಾರಾಯಣ ಸಂಘದ ಪ್ರಮುಖರಾದ ನಾರಾಯಣ ಆಚಾರ್ಯ ಓಂಕಾರ,ಜಗನ್ನಾಥ್ ಸಗರ ,ಕೆ. ಬಿ. ಕುಲಕರ್ಣಿ, ಅನಿಲ್ ಕುಲಕರ್ಣಿ, ಸುರೇಶ್ ಕುಲಕರ್ಣಿ, ವಿನೂತ ಜೋಶಿ, ಡಾ ಶ್ರೀನಿವಾಸ ಜಾಗಿರದಾರ,ನರಸಿಂಹರಾವ ಕುಲಕರ್ಣಿ, ಪಾರ್ಥಸಾರಥಿ,ಗಿರೀಶ್ ಸಪ್ತ ಗಿರಿ, ಧನೇಶ್ ಉಪಸ್ಥಿತರಿದ್ದರು.