
ಕಲಬುರಗಿ,ಮಾ 7: ನಗರದ ಬ್ರಹ್ಮಪುರ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದ ಉತ್ತರಾದಿ ಮಠದಲ್ಲಿ ಮಾ.18 ರಂದು ಕೂಡಲೀ ಆರ್ಯ ಅಕ್ಷೋಭ್ಯತೀರ್ಥ ಮಠದ ರಘುವಿಜಯತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ಶ್ರೀಲಕ್ಷ್ಮೀ ನಾರಾಯಣ ಮತ್ತು ಶ್ರೀಹಂಸನಾಮಕ ಪಾರಾಯಣ ಸಂಘದ ಆರನೇ ವಾರ್ಷಿಕೋತ್ಸವ ಹಾಗೂ ದಿ. ಜಯತೀರ್ಥ ಕಾಗಲ್ಕರ್ ಅವರ ಸ್ಮರಣಾರ್ಥ ಪಾರಾಯಣ ಪ್ರವೀಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪಾರಾಯಣ ಸಂಘಗಳ ಸಂಚಾಲಕ ರವಿ ಲಾತೂರಕರ ತಿಳಿಸಿದ್ದಾರೆ.ಮಾರ್ಚ18 ರಂದು ಬೆಳಿಗ್ಗೆ 9 ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ನಂತರ ಪಾರಾಯಣ ಪ್ರವೀಣ ಪ್ರಶಸ್ತಿಯನ್ನು ನಾರಾಯಣಾಚಾರ್ಯ ಓಂಕಾರ ಮತ್ತು ರವೀಂದ್ರ ದೇಶಪಾಂಡೆ ಆಲಮೇಲ ಅವರಿಗೆ ಪ್ರದಾನ ಮಾಡಲಾಗುವದು.ನಂತರ ಶ್ರೀಗಳಿಂದ ವೈಕುಂಠ ರಾಮದೇವರ ಪೂಜೆ ಮತ್ತು ಸಂಜೆ 6 ಗಂಟೆಗೆ ಪ್ರವಚನ ಮತ್ತು 19 ರಂದುದ್ವಾದಶಿ ಪ್ರಯುಕ್ತ ನಸುಕಿನ 4 ಗಂಟೆಗೆ ವೈಕುಂಠ ರಾಮ ದೇವರ ಪೂಜೆ ನಡೆಯಲಿದೆ ಎಂದು ತಿಳಿಸಿದ್ದಾರೆ.