
ಕಲಬುರಗಿ,ಮಾ 19: ಕಲಿಯುಗದಲ್ಲಿ ಕಠಿಣ ತಪಸ್ಸು ಮಾಡುವ ಅಗತ್ಯವಿಲ್ಲ. ಭಗವಂತನ ಸ್ಮರಣೆ ಮುಕ್ತಿಗೆ ಮಾರ್ಗ ತೋರುತ್ತದೆ ಎಂದು ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠದ ರಘುವಿಜಯತೀರ್ಥರು ಹೇಳಿದರು.
ಬ್ರಹ್ಮಪುರ ಉತ್ತರಾದಿಮಠ ರುಕ್ಮಿಣಿ ವಿಠ್ಠಲ ಮಂದಿರದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಮತ್ತು ಹಂಸನಾಮಕ ಪಾರಾಯಣ ಸಂಘದ ವಾರ್ಷಿಕೋತ್ಸವ ನಿಮಿತ್ತ ಸಾಮೂಹಿಕ ಪಾರಾಯಣ ಮತ್ತು ಹಿರಿಯ ಪತ್ರಕರ್ತ ದಿ .ಜಯತೀರ್ಥ ಕಾಗಲಕರ ಸ್ಮರಣಾರ್ಥ ಪಾರಾಯಣ ಪ್ರವೀಣ ಪ್ರಶಸ್ತಿ ಪ್ರದಾನ ಸಮಾರಂಭ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು,
ನಿರಂತರ ಪಾರಾಯಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಾರಾಯಣಾಚಾರ್ಯ ಓಂಕಾರ ಮತ್ತು ರವೀಂದ್ರ ದೇಶಪಾಂಡೆ ಅವರಿಗೆ ಶ್ರೀಗಳು ಪ್ರಶಸ್ತಿ ನೀಡಿ ಆಶೀರ್ವದಿಸಿದರು.
ಉತ್ತರಾದಿ ಮಠದ ವ್ಯವಸ್ಥಾಪಕ ಪಂ. ವಿನೋದಾಚಾರ್ಯ ಗಲಗಲಿ,
ಉತ್ತರಾದಿ ಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ ಅವರು ಮಾತನಾಡಿ ಪ್ರತಿಯೊಂದು ಬಡಾವಣೆಯಲ್ಲಿ ಪಾರಾಯಣ ಆಗಬೇಕು ಎಂದರು.ಪಾರಾಯಣ ಸಂಘಗಳ ಸಂಚಾಲಕ ರವಿ ಲಾತೂರಕರ್ ಮಾತನಾಡಿ ಧರ್ಮ ಪರಿಕ್ರಮಣ ಆಗಬೇಕಾದರೆ ಮನೆ ಮನೆಯಲ್ಲಿ ಪುರುಷರು ಪಾರಾಯಣ ಸಂಘ ಸೇರಿಸಬೇಕು.ಮಹಿಳೆಯರು ಭಜನಾ ಮಂಡಳಿ ಸೇರಬೇಕು. ಯುವಕ ಯುವತಿಯರು ಇದರಲ್ಲಿ ಭಾಗವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಭೀಮಸೇನಾಚಾರ್ಯ ಜೋಶಿ,ಪಂಡಿತ ಅಭಯಾಚಾರ್ಯ,ವಿಎಂಎಂಪಿ ಅಧ್ಯಕ್ಷ ರಾಮಾಚಾರ್ಯ ಮೊಗರೆ,ಕೃಷ್ಣ ಕಾಕಲವಾರ,ಪದ್ಮನಾಭ ಜೋಶಿ, ರಾಮಾಚಾರ್ಯ ಜೋಶಿ ನಗನೂರ, ವಿಜಯ ಕುಲಕರ್ಣಿ ಶಾಬಾದ,ರಾಘವೇಂದ್ರ ಆಶ್ರಿತ, ಗುರುರಾಜ ದೇಸಾಯಿ, ಗುರುರಾಜ ದೇಶಪಾಂಡೆ,ಜಗನ್ನಾಥ್ ಮೊಗರೆ, ಡಾ.ಸಂಜಯ ಕುಲಕರ್ಣಿ, ಸಂಜೀವ ಮಹಿಪತಿ, ಅನೀಲ ಕುಲಕರ್ಣಿ, ವಿನುತ್ ಜೋಶಿ, ಸುರೇಶ ಕುಲಕರ್ಣಿ, ಬಾಲಕೃಷ್ಣ ಲಾತೂರಕರ್, ವಿಜಯಕುಮಾರ ಕುಲಕರ್ಣಿ,ಎನ್ .ವಿ ಕುಲಕರ್ಣಿ,ಪ್ರಾಣೆಶ ಮುಜುಮದಾರ,ಸತ್ಯ ಬೋಧ ಸೇರಿದಂತೆ ನಗರದ ವಿವಿಧ ಪಾರಾಯಣ ಸಂಘಗಳ ಸದಸ್ಯರು ಪಾಲ್ಗೊಂಡರು.