
ಸತ್ತೂರು,ಆ9: ಪ್ರತಿಯೊಬ್ಬ ಮನುಷ್ಯರು ಮೂರು ಖುಣಗಳನ್ನು ಪಡೆದುಕೊಂಡೇ ಹುಟ್ಟಿರುತ್ತಾನೆ. ಖುಣ ಎಂದರೆ ಸಾಲ. ದೇವ ಋಣ, ಋಷಿ ಋಣ, ಪಿತೃ ಋಣ. ಸೂರ್ಯ, ಚಂದ್ರ, ಅಗ್ನಿ ವಾಯು ಮುಂತಾದ ದೇವತೆಗಳಿಂದ ನಮ್ಮ ಬದಕು, ಇವರಿಲ್ಲದೇ ಬದುಕೇ ಇಲ್ಲ, ಆದ್ದರಿಂದ ದೇವರನ್ನು ಪೂಜಿಸುವುದು ಹಾಗೂ ವಂದಿಸುವುದು ಅಥವಾ ಸ್ಮರಿಸುವುದು ನಮ್ಮೆಲ್ಲರ ಪರಮ ಕರ್ತವ್ಯ, ಋಷಿ ಋಣವನ್ನು ಜ್ಞಾನ ಪಡೆಯುವುದರ ಮೂಲಕ ತೀರಿಸಬಹುದು, ಜ್ಞಾನದ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಆದರಂತೆ, ಪಿತೃ ಋಣವನ್ನು ಮಕ್ಕಳನ್ನು ಪಡೆಯುವದರ ಮೂಲಕ ಹಾಗೂ ಶ್ರಾದ್ಢ ಮಾಡುವುದರ ಮೂಲಕ ತೀರಿಸಬಹುದು, ತಂದೆ ತಾಯಿಗಳ ಮಾತು ನಡೆಸುವುದು, ಗಯೆಯಲ್ಲಿ ಪಿಂಡ ಪ್ರಧಾನ ಹಾಗೂ ಪಿತೃಗಳ ತೃಪ್ತಿಗಾಗಿ, ಭೂರಿ ಭೋಜನ. ಹೀಗೇ ಮೂರು ಋಣಗಳನ್ನು ಕಳೆದುಕೊಳ್ಳುವುದು ಮಾನವನ ಆದ್ಯ ಕರ್ತವ್ಯವೆಂದು ಶ್ರೀ ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠದ ಶ್ರೀ 1008 ರಘುವಿಜಯತೀರ್ಥ ಶ್ರೀಪಾದಂಗಳವರು ಉಪದೇಶ ನೀಡಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ, ಸಂಜೀವ ಜೋಶಿಯವರ ನಿವಾಸದಲ್ಲಿ ಜರುಗಿದ ಪಾರಾಯಣ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಪ0. ಡಾ. ವೆಂಕಟನರಸಿ0ಹಾಚಾರ್ಯ ಜೋಶಿಯವರಿಂದ ಸ್ವಾಗತ, ಪ್ರಾಸ್ತಾವಿಕ ಮಾತನಾಡಿದ ಕಾರ್ಯದರ್ಶಿಯಾದ ರಘೂತ್ತಮ ಅವಧಾನಿಯವರು ಈ ಪುಸ್ತಕವನ್ನು ಬಳಗದ ಸದಸ್ಯರ ಅನುಕೂಲಕ್ಕಾಗಿ ಹಿರಿಯ ಸದಸ್ಯರಾದ ಪೆÇ್ರ. ಸಿ. ಕೆ. ಕುಲಕರ್ಣಿ, ಮತ್ತು ಹಿಂದಿನ ಅಧ್ಯಕ್ಷರಾದ ಆನಂದ ಬಾಗಲ ಇವರ ಪ್ರಾಯೋಜಕತ್ವದಲ್ಲಿ ಮಾಡಿದ್ದಾಗಿ ತಿಳಿಸಿದರು.
ವಿಷ್ಣುಸಹಸ್ರನಾಮಾದಿ ಪಾರಾಯಣಾದಿಗಳು ಜರುಗಿತು,. ಕಾರ್ಯಕ್ರಮದಲ್ಲಿ ಕೃಷ್ಣ ಹುನಗುಂದ, ಡಿ.ಕೆ. ಜೋಶಿ, ಡಾ. ಶ್ರೀನಾಥ, ರಮೇಶ ಅಣ್ಣಿಗೇರಿ ಪೆÇ್ರ. ವಾಮನ ಭಾದ್ರಿ, ಆನಂದ ದೇಶಪಾಂಡೆ, ಗುರುನಾಥ ಸರದೇಶಮುಖ, ಶ್ರೀನಿವಾಸ ಪಟ್ಟಣಕುಡಿ, ವಿಠ್ಠಲ ಅಂಬೇಕರ, , ಪಾಂಡುರಂಗ ಕುಲಕರ್ಣಿ ಅನಿಲ ಹರಿಹರ, ರಾಘವೇಂದ್ರ ಮುಂಡಗೋಡ, ಭೀಮರಾವ ಗಡ, ಮಧುಕರ ಜೋರಾಪೂರ, ವೆಂಕಟೇಶ ಕುಲಕರ್ಣಿ, ಎಲ್. ವಿ. ಜೋಶಿ, ಅಶೋಕ ಬಹದ್ದೂರ ದೇಸಾಯಿ, ಬದರಿನಾಥ ಬೆಟಗೇರಿ ವಾದಿರಾಜಾಚಾರ್ಯ, ಗೋಪಾಲಾಚಾರ್ಯ ಹರಿಹರ, ವಿಲಾಸ ಜೋಶಿ, ಎಂ. ಆರ್. ಕಲಕೋಟಿ, , ಎಸ್. ಎಂ. ಜೋಶಿ, ವಿಲಾಸ ಸಬನೀಸ, ಅಶೋಕ ಬಹದ್ದೂರ ದೇಸಾಯಿ, ಪಿ.ಆರ್.ಎನ್ ಸರದೇಸಾಯಿ ಉಪಸ್ಥಿತರಿದ್ದರು.