
ಸತ್ತೂರು,ಏ1 : ಮಹಾಭಾರತದ ಯುದ್ಧ ಎಲ್ಲ ಮುಗಿದ ಮೇಲೆ ಪಾಂಡವರೆಲ್ಲ ಸಂತಸದಿಂದ ರಾಜ್ಯಭಾರವನ್ನು ಮಾಡುತ್ತಿರುವಾಗ ಶ್ರೀ ಕೃಷ್ಣ ಪರಮಾತ್ಮ ಮಾತ್ರ ಒಂದು ಮೂಲೆಯಲ್ಲಿ ಕುಳಿತುಕೊ0ಡು ಕಣ್ಣಿರು ಹಾಕುತ್ತಾ ಅಳುತ್ತಾ ಕುಳಿತಿದ್ದಾ, ಇದನ್ನು ನೋಡಿದ ಧರ್ಮರಾಜ ಕೃಷ್ಣನ ಬಳಿಗೆ ಹೋಗಿ ಕೇಳುತ್ತಾನೆ, ಕೃಷ್ಣಾ, ಎಲ್ಲರೂ ಅಳುವಾಗ ನೀನು ಮಾತ್ರ ನಗು ನಗುತ್ತಾ ಇರುತ್ತೀಯಾ, ಆದರೆ ಎಲ್ಲರೂ ಸಂತಸದಿಂದಿರುವಾಗ ನೀನೇಕೆ ಅಳುತ್ತಿರುವೆ ಎಂದು ಕೇಳಿದಾಗ, ಆಗ ಕೃಷ್ಣ ಹೇಳುತ್ತಾನೆ, ಶರಪಂಜರದಲ್ಲಿ ಮಲಗಿರುವ ಭೀಷ್ಮಾಚಾರ್ಯರು ಇಚ್ಛಾಮರಣಿಗಳು, ಸಾ0ಯಬೇಕು ಎಂದು ಯೋಚಿಸುತ್ತಿದ್ದಾರೆ, ಆದ್ದರಿಂದ ನನಗೆ ದು:ಖವಾಗುತ್ತಿದೆ ಎಂದು ಕೃಷ್ಣ ಹೇಳಿದ ಎಂದು ಕೆ.ಎಸ್.ಎಸ್. ಕಾಲೇಜಿನ ಕಾರ್ಯದರ್ಶಿಗಳಾದ ಡಾ. ಸತ್ಯಮೂರ್ತಿಯವರು ಹೇಳಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ 8ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವನಸಿರಿನಗರದಲ್ಲಿರುವ ಪೆÇ್ರ. ಸಿ.ಕೆ. ಕುಲಕರ್ಣಿಯವರ ನಿವಾಸದಲ್ಲಿ ಪಂಚಾಂಗ ಶ್ರವಣ ಮತ್ತು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡುತ್ತಾ, ಶರಪಂಜರದಲ್ಲಿ ಮಲಗಿದ ಭೀಷ್ಮಾಚಾರ್ಯರಿಗೆ ನೋವು ತಡೆಯುವುದು ಕಷ್ಟವಾಗುತ್ತಿರುತ್ತೆ, ಆದ್ದರಿಂದ ಸಾಯಬೇಕು ಅಂತ ಯೋಚಿಸುತ್ತಿದ್ದಾನೆ ಕೃಷ್ಣ ಹೇಳುತ್ತಾನೆ. ಅದಕ್ಕೆ ಯೋಚಿಸುವುದು ತಪ್ಪೇನಿದೆ ಎಂದು ಧರ್ಮರಾಜ ಕೇಳಿದಾಗ, ಭೀಷ್ಮರು ಸಾಯುವುದು ಎಂದರೆ ಒಬ್ಬ ವ್ಯಕ್ತಿ ಸಾಯುವುದು ಅಂತ ಅರ್ಥ ಅಲ್ಲ, ಭೀಷ್ಮಾಚಾರ್ಯರು ಒಟ್ಟು ಆಯುಷ್ಯ 800 ವರ್ಷ, ಅದರಲ್ಲಿ 525 ವರ್ಷಗಳ ಕಾಲ ನಿರಂತರ ಅಧ್ಯಯನವನ್ನೇ ನಡೆಸಿದ್ದಾರೆ, ಭೀಷ್ಮಾಚಾರ್ಯರ ಅಂತಹ ಸಾಯುವುದು ಎಂದರೇ ಜ್ಞಾನದ ಭಂಡಾರವೇ ನಾಶವಾಗುತ್ತದೆ ಆದ್ದರಿಂದ ನನಗೆ ದು:ಖವಾಗುತ್ತಿದೆ ಎಂದನು ಕೃಷ್ಣ. ಆಗ ಧರ್ಮರಾಜ ಕೃಷ್ಣಾ, ಹಾಗಾದರೆ ಏನು ಮಾಡಬೇಕು ಎಂದು ಕೇಳಿದಾಗ, ಕೃಷ್ಣಾ ಧರ್ಮರಾಜನನ್ನು ಭೀಷ್ಮಾಚಾರ್ಯ ಬಳಿಗೆ ಕರೆದುಕೊಂಡು ಹೋಗಿ ಭೀಷ್ಮಾಚಾರ್ಯರಲ್ಲಿರುವ ಜ್ಞಾನದ ರಾಶಿಯನ್ನು ಉಪದೇಶ ಮಾಡಿಸುತ್ತಾನೆ. ಆಗ ಧರ್ಮರಾಜ ಕೊನೆಯಲ್ಲಿ, ಎಲ್ಲಾ ಶಾಸ್ತ್ರಗಳನ್ನು ಅಧ್ಯಯನ ಮಾಡಿದ ತಾವು, ನಿಮಗೆ ಶ್ರೇಷ್ಠವಾದ ಧರ್ಮ ಅಂತ ಅನಿಸುವುದು ಯಾವುದು ಎಂದು ಕೇಳುತ್ತಾನೆ. ಆಗ ಭೀಷ್ಮಾಚಾರ್ಯರು ತಮ್ಮ 525 ವರ್ಷಗಳ ಅಧ್ಯಯನದಲ್ಲಿ ಹಿನ್ನೆಲೆ ಹೇಳುತ್ತಾ, ವಿಷ್ಣು ಸಹಸ್ರನಾಮದಿಂದಾಗಿ ಭಗವಂತನನ್ನು ಭಜನೆ ಮಾಡುವ ಧರ್ಮಕ್ಕಿಂತಲೂ ದೊಡ್ಡ ಧರ್ಮ ಜಗತ್ತಿನಲ್ಲಿ ಮತ್ತೊಂದಿಲ್ಲ ಎಂದು ಸುಂದರವಾಗಿ ವರ್ಣಿಸಿದರು.
ಈ ಸಂದರ್ಭದಲ್ಲಿ ನಾರಾಯಣ ಪಾರಾಯಣ ಬಳಗದ ಸದಸ್ಯರಿಂದ ಶ್ರೀವಿಷ್ಣು ಸಹಸ್ರನಾಮ, ಶ್ರೀ ವೆಂಕಟೇಶ ಸ್ತೋತ್ರ, ಶ್ರೀರಾಮ ಸ್ತೋತ್ರ, ಶ್ರೀ ಸೂಕ್ತ, ಶ್ರೀ ಹರಿ ವಾಯುಸ್ತುತಿ, ಶ್ರೀಮದರಾಘವೇಂದ್ರ ಸ್ತೋತ್ರಗಳ ಪಾರಾಯಣ ನಡೆಯಿತು. ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಡಿ.ಕೆ. ಜೋಶಿ, ಜಯತೀರ್ಥ ನಿಲೋಗಲ, ಹನುಮಂತ ಪುರಾಣಿಕ, ಭೀಮಸೇನ ದಿಗ್ಗಾವಿ, ಪ್ರಕಾಶ ದೇಸಾಯಿ, ಎಲ್.ವಿ. ಜೋಶಿ. ಶ್ರೀನಿವಾಸ ಪಟ್ಟಣಕೊಡಿ, ಸಂಜೀವ ಜೋಶಿ, ಕೇಶವ ಕುಲಕರ್ಣಿ, ಆನಂದ ದೇಶಪಾಂಡೆ, ಡಾ. ಶ್ರೀನಾಥ, ಪೆÇ್ರ. ವಾಮನ ಭಾಧ್ರಿ, ಗೋಪಾಲಾಚಾರ್ಯ ಹರಿಹರ, ಉದಯ ದೇಶಪಾಂಡೆ, ಅನಿಲ್ ಹರಿಹರ, ವಾದಿರಾಜಾಚಾರ್ಯ, ಆನಂದ ಬಾಗಲ, ವೆಂಕಟೇಶ ಶಿರೋಳ, ವಿಲಾಸ ಸಬನೀಸ, ರಮೇಶ ಅಣ್ಣಿಗೇರಿ, ಧಿರೇಂದ ್ರತಂಗೋಡ, ಮಾರ್ತಾಂಡ ಕುಲಕರ್ಣಿ, ಸತ್ಯಜೀತ ಮುನೋಳಿ ಉಪಸ್ಥಿತರಿದ್ದರು.