
ತಾಳಿಕೋಟೆ:ಮಾ.7:ಉಪನಿಷತ್ತು ಋಷಿಗಳು 5ಸಾವಿರ ವರ್ಷಗಳ ಹಿಂದೆ ಭಗವಂತನ ಕುರಿತು ವರ್ಣನೆ ಮಾಡುತ್ತಾ ಸಚರಾಚರ ವಸ್ತುಗಳಲ್ಲಿ ನಿಗೂಢವಾಗಿ ಸ್ಥಾಪಿಸಲ್ಪಟ್ಟ ಭಗವಂತ ಮಹಾದೇವನನ್ನು ವರ್ಣನೆ ಮಾಡಿ ಆತನನ್ನು ಕೊಂಡಾಡುತ್ತಾರೆಂದು ಪಡೆಕನೂರ ದಾಸೋಹ ಮಠದ ಮಲ್ಲಿಕಾರ್ಜುನ ಮಹಾ ಸ್ವಾಮಿಗಳು ನುಡಿದರು.
ಸೋಮವಾರರಂದು ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಸಾಗಿಬಂದ ಅಲ್ಲಮಪ್ರಭು ದೇವರ ಶೂನ್ಯ ಸಂಪಾದನೆಯ ಆಧ್ಯಾತ್ಮಿಕ ಪ್ರವಚನದ 14ನೇ ದಿನದಂದು ಮುಂದುವರಿಸಿ ಮಾತನಾಡುತ್ತಿದ್ದ ಅವರು ಈ ಜಗತ್ತು ಭಗವಂತನ ವಶದಲ್ಲಿದೆ. ಇದೇನು ಕಣ್ಣಿಗೆ ಕಾಣುವಂತ ದೇಶವಿದೇಶಗಳಿರಬಹುದು ಇಡಿ ವಿಶ್ವವೇ ಭಗವಂತನ ವಶದಲ್ಲಿದೆ ಎಂದರು. ಭಗವಂತನ ಆಜ್ಞಾನುಸಾರ ಜಗತ್ತು ನಡೆಯುತ್ತದೆ ಈ ವಿಶ್ವದಲ್ಲಿರುವ ಭೂತ ಭವಿಷ್ಯಗಳು ಪರಮಾತ್ಮನ ಹಿಡಿತದಲ್ಲಿದೆ. ಕಾಣುವ ವಿಶ್ವದ ಕೆಳಗಡೆ ಮೇಲಿನ ಲೋಕ ಸ್ವರ್ಗ, ಪಾತಾಳ, ಭೂಲೋಕ ಈ ಮೂರು ಲೋಕದಲ್ಲಿರುವ ಜೀವಚರ ಭಗವಂತನ ವಶದಲ್ಲಿವೆ ಎಂದು ಋಷಿಗಳೆಲ್ಲ ವರ್ಣನೆ ಮಾಡುತ್ತಾರೆ ಆದರೆ ನಾವು ದೇವರ ಬಗ್ಗೆ ಚಕಾರ ಶಬ್ದ ಎತ್ತುವುದಿಲ್ಲ ಯಾಕೆಂದರೆ ಪ್ರಪಂಚದ ವ್ಯಾಮೋಹದಲ್ಲಿ ಇದ್ದುದ್ದೆ ಕಾರಣವೆಂದರು.
ವಸಿಷ್ಠ ಋಷಿಗಳು ದೇವರನ್ನು ವರ್ಣನೆ ಮಾಡಿ ಋಷಿ ಸಾಮಥ್ರ್ಯ ಕೊಟ್ಟವ ಭಗವಂತನೆಂಬ ವರ್ಣನೆ ಮಾಡುತ್ತಾರೆ ಭಗವಂತನಿಗೆ ಒಂದೇ ರೂಪ ಒಂದೇ ನಾಮವೆಂದು ಮಹ್ಮದ ಪೈಗಂಬರವರು ಹೇಳಿದ್ದಾರೆಂದರು. ಜಗತ್ತು ಒಂದೇ ತರನಾಗಿಲ್ಲ ಒಬ್ಬರಂತೆ ಒಬ್ಬರಿಲ್ಲ ಸ್ತ್ರೀ ಪುರುಷರು ಬದಲಿಲ್ಲ ರೂಪದ ಅನುಗುಣವಾಗಿ ಅವರವರ ಭಕ್ತಿಗೆ ತೆರವಾಗಿ ಶಿವ ಇರುತ್ತಾನೆಂದರು. ಭಕ್ತರಿಗೆ ಹರಿಯಾಗಿ, ಶಿವ ಭಕ್ತರಿಗೆ ಶಿವನಾಗಿ ಜಗತ್ತಿನಲ್ಲಿ ಮತಬೇಧಗಳಲ್ಲಿ ಆಯಾ ನಾಮ ಇಟ್ಟುಕೊಂಡಿದ್ದಾರೆ ಅನೇಕ ಹೆಸರುಗಳಿವೆ ಅಲ್ಲಮ ಶಿವಯೋಗಿಯು ಗುಹೇಶ್ವರನೆಂದು ಕರೆದ, ಬಸವಣ್ಣನವರು ಕೂಡಲ ಸಂಗಮದೆವನೆಂದು ಕರೆದರು, ಅದರಂತೆ ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನ ಎಂದು ಕರೆದಳು ಯಾವ ಯಾವ ರೂಪದಲ್ಲಿ ಭಕ್ತಿಭಾವದಿಂದ ಕರೆಯುತ್ತಾರೆಯೋ ಅನುಭವಕ್ಕೆ ಶಿವಬಂದು ರೂಪ ಧರಿಸುತ್ತಾನೆಂದು ಶ್ರೀಗಳು ನುಡಿದರು.
ಧಿರಹ ಎಂದರೇ ಗೆದ್ದವರು ಇದು ಲೋಕದ ವ್ಯವಹಾರಗಳೂ ಭಗವಂತನ ಕೃಪೆಯಾಗುತ್ತದೆಯಲ್ಲ ಅವರಿಗೆ ಧಿರಹ ಎಂದು ಗೆದ್ದವರೆನ್ನುತ್ತಾರೆಂದರು. ಈ ಲೋಕದಲ್ಲಿ ಬಂದು ಗೆದ್ದು ಪೂಜೆಗೈಯುತ್ತಾರೆಯಲ್ಲ ಶರಣರಿಗೆ ಗೆದ್ದವರೆನ್ನುತ್ತಾರೆ ಎಂದರು. ಆತ್ಮ ಸ್ವರೂಪದಲ್ಲಿ ಪೂಜೆ ಗೈಯುವವರಿಗೆ ಧಿರರು ಮಹಾತ್ಮರು ಎಂದು ಕರೆಯುತ್ತಾರೆಂದರು. ಸಂಸಾರ ಅಂದರೇ ಬಾಳೆಹಣ್ಣು ತಿಂದಂತೆ ಅಲ್ಲ ಸಂಸಾರ ಅಂದರೇ ನೆಲಕಬ್ಬ ತಿಂದಂತಹಾಗೆ. ಪಾರಮಾರ್ಥ ಧರ್ಮ ಅಂದರೇ ಸದಪತ ಅಂದರೇ ನೆಲಕಬ್ಬ್ಬು ಇದ್ದಹಾಗೆ. ಪಾರಮಾರ್ಥ ಅನ್ನುವುದು ಉಕ್ಕಿನ ಕಡಲೆಯಿದ್ದಂತೆದರು. ಧರ್ಮದ ಮಾರ್ಗದಲ್ಲಿ ನಡೆಯುವ ಸಮಯದಲ್ಲಿ ಸ್ಥುತಿಗಳು ಬರುತ್ತವೆ ಅದನ್ನು ಅರ್ಥೈಸಿಕೊಂಡವರಿಗೆ ಶರಣರೆಂದು ಕರೆಯುತ್ತಾರೆ ಇವೆಲ್ಲವು ದೇವನ ವಶದಲ್ಲಿವೆ ಎಂದರು. ನಮ್ಮಲ್ಲೆಲ್ಲರ ವಶದಲ್ಲಿ ಮಾಲಿಕತ್ವ ಎಂಬುವುದಿದೆ. ಕಟ್ಟಿದ ಮನೆ ತೊಂಬತ್ತು ವರ್ಷದವರೆಗೆ ಇರುತ್ತದೆ ಈ ಮನೆ ಕಟ್ಟಿದವ ಹೋದಮೇಲೆ ಮತ್ತೊಬ್ಬರ ಹೆಸರಾಗುತ್ತ ಹೋಗುತ್ತದೆ. ಹೋಗಾಗ ಏನೂ ವೈಯುವುದಿಲ್ಲ. ಹೋಲ ಇದ್ದರು ಬರಿಗೈಲ್ಲಿ ಹೋಗಬೇಕಾಗುತ್ತದೆ ಕಾರಣ ನಮ್ಮ ವಶದಲ್ಲಿ ಬ್ರಾಂತಿ ಎನ್ನುವುದಿದೆ ಎಂದರು. ಮುಕ್ತಿ ಸಾಮ್ರಾಜ್ಯ ಎನ್ನುವುದು ದೊರೆಯಬೇಕಾದರೆ ಎಲ್ಲವು ನಿನ್ನದೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ. ಮನುಷ್ಯನ ಆದಾರದ ಮೇಲೆ ಸ್ವರ್ಗ ಭೂಲೋಕ ಎಲ್ಲವೂ ಪರಮಾತ್ಮನ ವಶದಲ್ಲಿವೆ ನಮ್ಮ ವಶದಲ್ಲಿ ಏನೂ ಇಲ್ಲ ಅನಿತ್ಯವಾದಂತಹ ಶರೀರ ನಿತ್ಯ ಶಾಶ್ವತ ಎಂದು ತಿಳಿದುಕೋಂಡಿದ್ದೆವೆ. ಇದು ಶೂನ್ಯ ಸಂಪಾದನೆ ಎಂದು ತಿಳಿದುಕೊಳ್ಳಬೆಕೆಂದರು.
12ನೇ ಶತಮಾನದ ಶೂನ್ಯ ಅಧಿಪತಿ ಅಲ್ಲಮಪ್ರಭು ದೇವ ಮಾಯಾದೇವಿಯನ್ನು ಸೋಲಿಸಿ ಕಳಿಸಿರುತ್ತಾನೆ ಆ ಮಾಯಾದೇವಿ ಪಾರ್ವತಿ ರೂಪವಾಗಿದ್ದರಿಂದ ಮತ್ತೆ ಪರಮಾತ್ಮನಿಗೆ ಹೇಳಿ ನಾನೂ ಶಿವಮೊಗ್ಗ ಜಿಲ್ಲೆಯ ಉಡತಡಿ ಗ್ರಾಮದ ಸುಮಲತಾದೇವಿ ನಿರ್ಮಲಶೆಟ್ಟಿ ಎಂಬ ದಂಪತಿಗಳ ಉದರದಲ್ಲಿ ಜನ್ಮ ತಾಳಲೂ ಇಚ್ಚಿಸಿದ್ದೇನೆ ಎಂದಾಗ ಪರಮಾತ್ಮ ಪಾರ್ವತಿಗೆ ಆಕೆಯ ಇಚ್ಚಾನೂಸಾರ ಭೂಲೋಕಕ್ಕೆ ಕಳಿಸುತ್ತಾನÉ. ಸುಮಲತಾದೇವಿ ನಿರ್ಮಲಶೆಟ್ಟಿ ಅವರಿಗೆ ಮಕ್ಕಳಿರಲಿಲ್ಲ ಆ ಉಡತಡೆ ಗ್ರಾಮದಲ್ಲಿ ಮಠವೊಂದಿತ್ತು ಅಲ್ಲಿಯ ಮಠದ ಪೂಜ್ಯರ ಹತ್ತಿರ ಈ ದಂಪತಿಗಳು ಹೋಗಿ ಮಕ್ಕಳಿಲ್ಲದ ವಿಷಯ ತಿಳಿಸಿದಾಗ ಶ್ರೀಗಳಾದ ಶ್ರೀ ಗುರುಲಿಂಗ ದೇವರು ಪ್ರಸಾದ ನಿಡುತ್ತಾರೆ. ಇದರಿಂದ ಪಾರ್ವತಿದೇವಿ ಸುಮಲತಾಳ ಉದರದಲ್ಲಿ ಜನ್ಮ ತಾಳುತ್ತಾ¼.É ಗುರುಲಿಂಗ ಶ್ರೀಗಳು ಜನ್ಮ ತಾಳಿದ ವಿಷಯಕೇಳಿ ಸಂತಸವಾಗಿ ಆ ಹೆಣ್ಣು ಮಗುವಿನ ಭವಿಷ್ಯ ಬರೆದು ಈ ಬಾಲಕಿ ಮುಂದೆ ದೊಡ್ಡವಳಾಗಿ ಸ್ತ್ರೀಯರಿಗೆ ಸ್ವಾತಂತ್ರ್ಯ ತಂದು ಕೊಡುವ ಮಹಾಶಿವಯೋಗಿಣಿ ಆಗುತ್ತಾಳೆ ಎಲ್ಲರಿಗೂ ಅಕ್ಕಆಗುತ್ತಾಳೆಂದು ಹೇಳಿದಾಗ ಅಕ್ಕಮಹಾದೇವಿ ಬೆಳೆಯುತ್ತ 8 ವರ್ಷದವಳಾಗುತ್ತಾಳೆ ದಿನನಿತ್ಯ ತಂದೆ ತಾಯಿಯವರು ಹೋಗುತ್ತಿರುವ ಮಲ್ಲಿಕಾರ್ಜುನ ಗುಡಿಗೆ ತಾನೂ ಹೋಗುವ ವಿಚಾರವನ್ನು ತಂದೆ ತಾಯಿಗೆ ತಿಳಿಸಿ ದಿನ ನಿತ್ಯ ಭಕ್ತಿಭಾವದಿಂದ ಗುಡಿಗೆ ಹೋಗುತ್ತಿದ್ದಾಗ ಒಮ್ಮೆ ಅರ್ಚಕ ಗುಡಿಗೆ ಬೀಗ ಹಾಕಿ ಹೋಗುವ ಸಮಯದಲ್ಲಿ ಅಕ್ಕಮಹಾದೇವಿ ಬಂದು ಅರ್ಚಕರಿಗೆ ಪರಿಪರಿಯಾಗಿ ಕೇಳಿ ಬೀಗ ತಗಿಯಲು ಹೇಳಿದರೂ ಬೀಗ ತಗೆಯದೇ ದೇವರ ದರ್ಶನಕ್ಕೆ ಅನೂವುಮಾಡಿಕೊಡಲಿಲ್ಲ ಗುರುವಿನ ಕಾರಣದಿಂದ ಲಿಂಗ ಜಂಗಮ ಕಂಡೆ ಗುರುವಿನ ಕಾರಣದಿಂದ ಚೆನ್ನಮಲ್ಲಿಕಾರ್ಜುನನ ಪಾದವನ್ನು ಕಾಣಲು ಬಂದೆ ಎನ್ನುತ್ತಾಳೆ ಅಕ್ಕಮಹಾದೇವಿ. ಈ ಶಬ್ದ ಕೇಳಿದ ಚೆನ್ನಮಲ್ಲಿಕಾರ್ಜುನ ಒಮ್ಮಿಂದೊಮ್ಮಲೆ ಪ್ರತ್ಯಕ್ಷನಾಗಿ ಬಾಗಿಲಿಗಿದ್ದ ಬೀಗ ತಾನೆ ತೆಗೆಯುತ್ತದೆ ಅಲ್ಲಿದ್ದ ಅರ್ಚಕರು ಗುಡಿಯೊಳಗೆ ನೊಡುವಸ್ಟರಲ್ಲಿ ಪ್ರತ್ಯಕ್ಷನಾಗಿದ್ದ ಚೆನ್ನಮಲ್ಲಿಕಾರ್ಜುನನ್ನು ಅಕ್ಕಮಹಾದೇವಿ ನಮಿಸುತ್ತಿರುವ ದೃಶ್ಯವನ್ನು ಕಂಡು ಅರ್ಚಕ ಓಡಿಬಂದು ನನ್ನದು ತಪ್ಪಾಯಿತೆಂದು ಅಕ್ಕಮಹಾದೆವಿಗೆ ಕಾಲಿಗೆ ಬಿಳುತ್ತಾನೆಂದು ಶ್ರೀಗಳು ಹೆಮರೆಡ್ಡಿಮಲ್ಲಮಳ ಹಾಗೂ ಅಕ್ಕಮಹಾದೇವಿಯ ಕೆಲವು ಗತಿಸಿದ ಘಟನೆಗಳ ಕುರಿತು ಭಕ್ತ ಸಮೂಹಕ್ಕೆ ವಿವರಿಸಿದರು.
ಈ ಸಮಯದಲ್ಲಿ ಶ್ರೀ ಶರಣಮುತ್ಯಾರ ಮಠದ ಶ್ರೀ ಬಸಣ್ಣ ಶರಣರ, ಶರಣಪ್ಪ ಶರಣರ ನೇತೃತ್ವ ವಹಿಸಿದ್ದರು. ಸಿದ್ದಣ್ಣ ಶರಣರ, ಭಿಮಣ್ಣ ಇಂಗಳಗಿ, ಶರಣಪ್ಪ ದೊರೆ, ಮಲ್ಲಣ್ಣ ಇಂಗಳಗಿ, ಮಲ್ಲಣ್ಣ ಶರಣರ, ಶರಣಗೌಡ ಪೋಲಿಸ ಪಾಟೀಲ, ಶ್ರೀಕಾಂತ ಕುಂಬಾರ, ಬಸವರಾಜ ಛಾಂದಕೋಟೆ, ಕಾಶಿರಾಯ ದೇಸಾಯಿ, ಸಂಗಮೇಶ ಶರಣರ, ಗುರುಲಿಂಗಪ್ಪ ದೊಡಮನಿ, ಸುಭಾಸಗೌಡ ಹಳೆಮನಿ, ತಿಪ್ಪಣ್ಣ ಸಜ್ಜನ, ಭಾರತ ಮಂಟಪ ಮತ್ತು ಸೌಂಡಸಿಸ್ಟಮದ ರಪೀಕ ಮುರಾಳ, ಗವಾಯಿಗಳಾದ ಹಣಮಂತಕುಮಾರ ಬಳಗಾನೂರ, ಬಸವನಗೌಡ ಬಿರಾದಾರ(ಚೊಕ್ಕಾವಿ) ಉಪಸ್ಥಿತರಿದ್ದರು.