ಪಾರದರ್ಶಕ ಮತದಾನಕ್ಕೆ ಚುನಾವಣಾ ಆಯೋಗ ತಾಲೂಕಾ ಆಡಳಿತ ಸಕಲ ಸಿದ್ದತೆಕ್ಷೇತ್ರದಲ್ಲಿ ಒಟ್ಟು 2,15,935 ಮತದಾರರು 230 ಮತಗಟ್ಟೆಗಳು

ಬಸವನಬಾಗೇವಾಡಿ:ಮಾ.23: ಲೋಕಸಭಾ ಚುನಾವಣೆಯಲ್ಲಿ ಪಾರದರ್ಶಕವಾಗಿ ಮತದಾನ ನಡೆಯುವ ನಿಟ್ಟಿನಲ್ಲಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಚುನಾವಣಾ ಆಯೋಗ ಹಾಗೂ ತಾಲೂಕಾ ಆಡಳಿತದಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಆಲಮಟ್ಟಿಯ ಯುಕೆಪಿ ಭೂ ಸ್ವಾಧಿನಾಧಿಕಾರಿ ಸಹಾಯಕ ಚುನಾವಣಾಧಿಕಾರಿ ಎಂ, ಗಂಗಪ್ಪ ಹೇಳಿದರು.
ಪಟ್ಟಣದ ತಹಸೀಲ್ದರಾ ಕಚೇರಿಯಲ್ಲಿ ಶುಕ್ರವಾರ ಅಖಂಡ ತಾಲೂಕಿನ ಪತ್ರಿಕಾ ವರದಿಗಾರರ ಹಾಗೂ ವಿಡಿಯೋ ಮಾಧ್ಯಮದವರ ಸಭೆಯಲ್ಲಿ ಮಾತನಾಡಿದ ಅವರು ಕೊಲ್ಹಾರ ಯುಕೆಪಿ ಬ್ರಿಜ್, ಅರಳಿದಿನ್ನಿ ಕ್ರಾಸ್, ಯಲಗೂರ ಕ್ರಾಸ್‍ನಲ್ಲಿ ಚೆಕ್ ಪೂಸ್ಟ ಸ್ಥಾಪಿಸಲಾಗಿದೆ, ರೂ, 50 ಸಾವಿರಕ್ಕಿಂತ ಹೆಚ್ಚಿನ ಹಣ ದಾಖಲೆ ಇಲ್ಲದೇ ತೆಗೆದುಕೊಂಡು ಹೋಗುವಂತಿಲ್ಲ, ದಾಖಲೆಯಿಲ್ಲದ ಹಣವನ್ನು ವಶಪಡಿಸಿಒಳ್ಳಲಾಗುವದು, ರೂ, 10 ಲಕ್ಷಕ್ಕಿಂತ ಹೆಚ್ಚು ಹಣ ಸಿಕ್ಕರೆ ಅದನ್ನ ಆದಾಯ ತೆರೆಗೆ ಇಲಾಖೆಗೆ ಹಸ್ತಾಂತರಿಸಲಾಗುವದು, ಮದ್ಯ ಸೇರಿದಂತೆ ಇತರೆ ವಸ್ತುಗಳ ಸಾಗಣೆ ಮೇಲೆ ನಿಗಾ ವಹಿಸಲಾಗುತ್ತಿದೆ, ಸಿ,ವ್ಹಿಜಲ್ ಯ್ಯಾಪ್ ಮೂಲಕ ಇದುವರೆಗೆ ದಾಖಲಾಗಿದ್ದ 37 ದೂರು ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ, ಕ್ಷೇತ್ರದಲ್ಲಿ 9 ಫ್ಲಾಯಂಗ್ ಸ್ಕ್ವಾಡ್ ತಂಡ ರಚಿಸಲಾಗಿದೆ, ಸಾರ್ವಜನಿಕರು ಚುನಾವಣೆಗೆ ಸಂಭಂದಿಸಿದ ದೂರುಗಳನ್ನು ಹೆಲ್ಪ್ ಲೈನ್ ಸಂಖ್ಯೆ: 08358245226 ಗೆ ಹಾಗೂ ಸಿ, ವ್ಹಿಜಲ್ ಯ್ಯಾಪ್ ಮೂಲಕ ದೂರು ಸಲ್ಲಿಸಬಹುದು ಎಂದು ಹೇಳಿದರು.
ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 1,09,508 ಪುರುಷ ಮತದಾರರು, 1,06,412 ಮಹಿಳಾ ಮತದಾರರು, ಇತರೆ 15 ಮತದಾರರು, ಸೇರಿದಂತೆ ಒಟ್ಟು 2,15,935 ಮತದಾರರಿದ್ದಾರೆ, ಇದರಲ್ಲಿ 5,495 ಪ್ರಥಮ ಬಾರಿಗೆ ಮತ ಚಲಾಯಿಸಲಿದ್ದಾರೆ, ಮತಕ್ಷೇತ್ರದಲ್ಲಿನ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು 1752 ಹಾಗೂ ಅಂಗವಿಕಲ 1975 ಮತದಾರರಿದ್ದಾರೆ, ಅವರಿಗೆ ಅಂಚೆ ಮತದಾನ ಅವಕಾಶ ಮಾಡಿಕೊಳ್ಳಲಾಗುವದು ಎಂದು ಹೇಳಿದರು.
ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಒಟ್ಟು 230 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತಗಟ್ಟೆಯಲ್ಲಿ ಮೂಲ ಸೌಲಭ್ಯದೊಂದಿಗೆ ಉತ್ತಮ ವಾತವರಣ ನಿರ್ಮಿಸಲಾಗುವದು, ಕ್ಷೇತ್ರದಲ್ಲಿ 5 ವೆಲ್ನರೇಬಲ್, 9 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ, 5 ಸಖಿ ಮತಗಟ್ಟೆಗಳನ್ನ ಸ್ಥಾಪಿಸಲಾಗುವದು, ನಾಗೂರಿನ ಮತಗಟ್ಟೆ ಸಂಖ್ಯೆ 124 ರಲ್ಲಿ ಹೆಚ್ಚು ಅಂಗವಿಕಲ ಮತದಾರರಿದ್ದಾರೆ, ಬಳೂತಿಯ ಮತಗಟ್ಟೆ ಸಂಖ್ಯೆ 183ರಲ್ಲಿ 51 ಹೊಸ ಮತದಾರರಿದ್ದಾರೆ, ಎಂದು ಮಾಹಿತಿ ನೀಡಿದರು.
21 ಸೆಕ್ಟರ್ ಅಧಿಕಾರಿಗಳು, 21 ಮತಗಟ್ಟೆ, ಅಧಿಕಾರಿಗಳ ಮೇಲ್ವಾಚಾರಕರು 230 ಮತಗಟ್ಟೆ ಅಧಿಕಾರಿಗಳನ್ನ ನಿಯೋಜನೆ ಮಾಡಲಾಗಿದೆ, ಮತದಾನಕ್ಕಾಗಿ ಮತಗಟ್ಟೆಗಳಲ್ಲಿ ಕರ್ಯ ನಿರ್ವಹಿಸುವ 1900 ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುವದು, ಎಂದು ಹೇಳಿದರು.
ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿರುವುದರಿಂದ ರಾಜಕೀಯ ಸಭೆ ಸಮಾರಂಭಗಳಿಗೆ ಚುನಾವಣಾಧಿಕಾರಿಗಳಿಂದ ಅನುಮತಿ ಪೆಡೆದುಕೊಳ್ಳಬೇಕು, ಸ್ಥಳೀಯ ಸಂತೆ, ಜಾತ್ರೆ ಮದುವೆ ಇತರೆ ಸಮಾರಂಭಗಳಿಗೆ ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಬಸವನಬಾಗೇವಾಡಿ ತಹಶೀಲ್ದಾರ ವೈ,ಎನ್ ಸೋಮನಕಟ್ಟಿ, ಕೊಲ್ಹಾರ ತಹಶೀಲ್ದಾರ ಎಸ್,ಎಸ್ ನಾಯಕಲಮಠ ಇದ್ದರು.