ಪಾರದರ್ಶಕ, ಪ್ರಾಮಾಣಿಕ, ಜನಪರ ಆಡಳಿತ: ರವಿಕೃಷ್ಣಾ ರೆಡ್ಡಿ

ಕೊಲ್ಹಾರ:ಫೆ.26: ಕೆಆರ್‍ಎಸ್ ಪಕ್ಷದ ಮುಖ್ಯಸ್ಥ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ “ಕರ್ನಾಟಕಕ್ಕಾಗಿ ನಾವು” ಬೈಕ್ ರ್ಯಾಲಿ ಶನಿವಾರ ಪಟ್ಟಣಕ್ಕೆ ಆಗಮಿಸಿತು.
ಪಾರದರ್ಶಕ, ಪ್ರಾಮಾಣಿಕ, ಜನಪರ ರಾಜಕಾರಣದ ಉದ್ದೇಶದಿಂದ ಈ ರ್ಯಾಲಿ ಹಮ್ಮಿಕೊಳ್ಳಲಾಗಿದೆ, ಬಡವರು ಬೆಳೆಯಬೇಕು, ಬಡವರು ಉಳಿಯಬೇಕು, ಬಡವರಿಗಾಗಿಯೇ ಕೆಆರ್‍ಎಸ್ ಪಕ್ಷ ಉದಯಿಸಿದ್ದು ಎಂದರು. ಜನರು ಪ್ರಬುದ್ಧರಾಗಬೇಕು ಭ್ರಷ್ಟರನ್ನು ರಾಜಕೀಯವಾಗಿ ತಿರಸ್ಕರಿಸಿ, ಪ್ರಾಮಾಣಿಕರಿಗೆ ಮನ್ನಣೆ ನೀಡಬೇಕು ಜನ ಸಾಮಾನ್ಯರು ಕೂಡಾ ಚುನಾವಣೆಗೆ ನಿಂತು ಗೆಲ್ಲುವಂತಾಗಬೇಕು, ಪಾರದರ್ಶಕ ಆಡಳಿತ ನಡೆಸುವಂತಾಗಬೇಕು ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅಶೋಕ್ ಜಾಧವ, ಜಿಲ್ಲಾ ಉಸ್ತುವಾರಿಗಳಾದ ವಿಜಯಕುಮಾರ್ ಯು.ಬಿ, ಜಿಲ್ಲಾ ಕಾರ್ಯದರ್ಶಿಗಳಾದ ಮಹಾಂತೇಶ್ ಮರನೂರ್ ತಾಲೂಕು ಅಧ್ಯಕ್ಷ ಬಸು ಕುದರಿ ಸಹಿತ ಅನೇಕರು ಇದ್ದರು.