ಪಾರದರ್ಶಕ ನೇಮಕಾತಿ, ವರ್ಗಾವಣೆ ನೀತಿ ಜಾರಿಗೆ ತನ್ನಿ – ಸಿಪಿಐಎಂ ಒತ್ತಾಯ.


ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.31: ಸರಕಾರಿ ಅಧಿಕಾರಿಗಳ ಹಾಗೂ ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿನಡೆಯುತ್ತಿರುವ ವ್ಯಾಪಕ ಭ್ರಷ್ಠಾಚಾರವನ್ನು ತಡೆಯಲು ಕರ್ನಾಟಕ ಸರಕಾರ ರಾಜಕೀಯ ಹಾಗೂ ಉನ್ನತ ಅಧಿಕಾರಿಗಳ ಶಿಫಾರಸು ಮುಕ್ತ ಪಾರದರ್ಶಕ ಆನ್ ಲೈನ್ ನೇಮಕಾತಿ ಹಾಗೂ ವರ್ಗಾವಣೆ ನೀತಿಯನ್ನು ಜಾರಿಗೊಳಿಸುವಂತೆ ಸಿಪಿಐಎಂ ಒತ್ತಾಯಿಸುತ್ತದೆ.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ಧಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿ
ರಾಜಕೀಯ ಹಾಗೂ ಉನ್ನತ ಅಧಿಕಾರಿಗಳ ಶಿಫಾರಾಸಿನ  ನೇಮಕಾತಿ ಮತ್ತು ವರ್ಗಾವಣೆಯು ಅದು ಕೇವಲ ಆಗ ಮಾತ್ರವೇ ಭ್ರಷ್ಠತೆಯನ್ನು ಪೊಇಷಿಸುವುದಾಗಿಲ್ಲ ಅದು ಮುಂದುವರೆದು ಈ ರೀತಿ ಭ್ರಷ್ಠತೆಯ ಮೂಲಕ ನೆಮಕಗೊಳ್ಳುವ ಮತ್ತು ವರ್ಗಾವಣೆಗೊಳ್ಳುವ ಅಧಿಕಾರಿಗಳು ಮತ್ತು ನೌಕರರನ್ನು ಭ್ರಷ್ಠಾಚಾರಿಗಳಾಗುವಂತೆ ಪ್ರೋತ್ಸಾಹಿಸುತ್ತದೆ ಆ ಮೂಲಕ ರಾಜ್ಯವನ್ನೆ ಭ್ರಷ್ಠತೆಗೆ ಈಡು ಮಾಡುತ್ತದೆ.
ಹಾಲಿನ ದರ ಏರಿಕೆ – ಸಿಪಿಐಎಂ ವಿರೋಧ
ಕರ್ನಾಟಕ ಸರಕಾರ ಹಾಗೂ ಕರ್ನಾಟಕ ಹಾಲು ಒಕ್ಕೂಟಗಳು ತಲಾ ಲೀಟರ್ ಗೆ ಮೂರು ರೂಗಳಂತೆ ಹಾಲಿನ ದರ ಏರಿಕೆಗೆ ಕ್ರಮವಹಿಸಿರುವುದನ್ನು ಸಿಪಿಐಎಂ ಬಲವಾಗಿ ಖಂಡಿಸುತ್ತದೆ ಮತ್ತು ತಕ್ಷಣವೇ ದರ ಏರಿಕೆಯನ್ನು ಹಿಂಪಡೆಯುವಂತೆ ಬಲವಾಗಿ ಒತ್ತಾಯಿಸುತ್ತದೆ.
ಈ ದರ ಏರಿಕೆಯು ಕೇವಲ ಮಧ್ಯಮ ವರ್ಗವನ್ನು ಮಾತ್ರವೇ ಬಾಧಿಸುವುದೇನಲ್ಲ. ಅವರಿಗಿಂತಲೂ ಹೆಚ್ಚಾಗಿ ರಾಜ್ಯದಲ್ಲಿರುವ 1.5 ಕೋಟಿಗಳಷ್ಠಿರುವ ಎಲ್ಲ ಬಿಪಿಎಲ್ ಕಾರ್ಡ್ ಬಡಕುಟುಂಬಗಳನ್ನು ತೀವ್ರವಾಗಿ ಬಾಧಿಸುತ್ತದೆ.
ರಾಜ್ಯದಲ್ಲಿ ಮತ್ತು ದೇಶದಲ್ಲಿ ಅಪೌಷ್ಠಿಕತೆ ಹಾಗೂ ಹಸಿವಿನ ಸಾವುಗಳ ಸಂಖ್ಯೆ ಹೆಚ್ಚುತ್ತಿರುವಾಗ ವಿದ್ಯುತ್ ಮತ್ತಿತರೆ ಅಗತ್ಯವಸ್ತುಗಳ ದರ ಏರಿಕೆಯ ಜೊತೆ ಈ ಹಾಲಿನ ದರ ಏರಿಕೆಯು ಇವರನ್ನು ಮತ್ತಷ್ಠು ಅಪೌಷ್ಠಿಕತೆಯೆಡೆಗೆ ತಳ್ಳುತ್ತದೆ.
ಆದ್ದರಿಂದ ಈ ಬಡ ಗ್ರಾಹಕರು ಈ ಹೊರೆಯನ್ನು ಭರಿಸುವಂತಹ ಸ್ಥಿತಿಯಲ್ಲಿಲ್ಲ. ಕಾರಣ ಕೂಡಲೇ ಬೆಲೆ ಏರಿಕೆಯನ್ನು ತಡೆಯಬೇಕು.
ಹಾಲು ಒಕ್ಕೂಟಗಳ ನಷ್ಠವನ್ನು ತಡೆಯಲು ಅಲ್ಲಿ ವಿವಿಧ ಆಯಾಮಗಳಲ್ಲಿ ನಡೆಯುತ್ತಿರುವ ಭ್ರಷ್ಠಾಚಾರ ತಡೆಯಲು ಅಗತ್ಯ ಕ್ರಮವಹಿಸಬೇಕು.
ಹಾಲು ಉತ್ಪಾದಕರ ಕುರಿತು ಸರಕಾರಕ್ಕೆ ನೈಜ ಕಾಳಜಿ ಇದ್ದರೇ  ಏರುತ್ತಿರುವ ಹಾಲು ಉತ್ಪಾದನೆ ವೆಚ್ಚವನ್ನು ತಗ್ಗಿಸಲು ಕ್ರಮವಹಿಸಬೇಕು. ಅದಕ್ಕೆ ಅಗತ್ಯವಾದ ಪಶು ಆಹಾರ ಮುಂತಾದ ಅಗತ್ಯ ವಸ್ತುಗಳಿಗೆ ಹೆಚ್ಚಿನ ಸಹಾಯಧನ ಒದಗಿಸಬೇಕು. ನಿರುಪಯುಕ್ತ ದನಗಳ ಮಾರಾಟಕ್ಕೆ ಅನುವು ಮಾಡಬೇಕು. ಅದೇ ರೀತಿ,ತಲಾ ಲೀಟರ್ ಗೆ ನೀಡುವ ಸಹಾಯಧನವನ್ನು ಹತ್ತು ರೂಪಾಯಿಗಳಿಗೆ ಹೆಚ್ಚಿಸಬೇಕು.
ಅದೇ ರೀತಿ,ಹೈನುಗಾರರಿಗೆ ಹೊರೆ ಹೇರುತ್ತಿರುವ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಾಪಾಸು ಪಡೆಯಬೇಕು.
ಗ್ಯಾರಂಟಿಗಳಲ್ಲಿನ ಕೊರತೆ ನೀಗಿಸಿ
ಗೃಹ ಜ್ಯೋತಿ ಯೊಜನೆಯಂತೆ ಎಲ್ಲಾ ಭ್ಯಾಗ್ಯ ಜ್ಯೋತಿ, ಕುಠೀರ ಜ್ಯೋತಿ ಮುಂತಾದ ಯೋಜನೆಗಳ ಫಲಾನುಭವಿಗಳು  ಉಚಿತ ಹೆಚ್ಚುವರಿ ವಿದ್ಯುತ್ ಬಳಸದಂತೆ ಅವರ ಮೇಲೆ ಹೇರಿರುವ ತಾರತಮ್ಯ ನೀತಿಯನ್ನು ವಾಪಾಸು ಪಡೆದು ಮತ್ತು ಅವರ ಹಳೆ ಬಾಕಿಯನ್ನು ಮನ್ನಾ ಮಾಡಿ ಅವರಿಗೂ ಗೃಹ ಜ್ಯೋತಿ ಯೋಜನೆಯ ಫಲ ಸಿಗುವಂತೆ ಕ್ರಮವಹಿಸಬೇಕು.
ಗೃಹ ಲಕ್ಷ್ಮಿ ಯೋಜನೆಯಲ್ಲಿ ಗಂಡನ ಆಧಾರ ಕಾರ್ಡ್ ಜೊಡಣೆಯ ಕೇಳಿಕೆಯು ಗಂಡನಿಲ್ಲದ ಲಕ್ಷಾಂತರ ಒಂಟಿ ಮಹಿಳೆಯರನ್ನು ಫಲಾನುಭವಿಯಾಗದಂತೆ ತಡೆಯುತ್ತದೆ. ಆದ್ದರಿಂದ ಅಂತಹ ಕ್ರಮವನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿದರು. ಕಾರ್ಯದರ್ಶಿ ಯು.ಬಸವರಾಜ,ರಾಜ್ಯ ಸಮಿತಿ ಸದಸ್ಯರು ಆರ್ ಎಸ್ ಬಸವರಾಜ,  ಬಿ.ಮಾಳಮ್ಮ, ನಾಗರತ್ನ, ಕಾರ್ಯದರ್ಶಿ ಆರ್. ಭಾಸ್ಕರರೆಡ್ಡಿ ಪಾಲ್ಗೊಂಡಿದ್ದರು.