ಪಾರದರ್ಶಕ ಚುನಾವಣೆಗೆ ರಾಜಕೀಯ ಪಕ್ಷಗಳ ಸಹಕಾರ ಅತ್ಯಗತ್ಯ

ಚುನಾವಣೆ ಹಿನ್ನೆಲೆ ರಾಜಕೀಯ ಪಕ್ಷಗಳ ಸಭೆ
ರಾಯಚೂರು,ಮಾ.೧೫- ಪಾರದರ್ಶಕ ಮತ್ತು ಸರಿಯಾದ ರೀತಿಯಲ್ಲಿ ಚುನಾವಣೆ ನಡೆಯಲು ರಾಜಕಿಯ ಪಕ್ಷಗಳ ಸಹಕಾರ ಅತ್ಯಗತ್ಯ ಆದ್ದರಂದ ರಾಜಕೀಯ ಪಕ್ಷಗಳು ಜಿಲ್ಲಾಡಳಿತ ಹಾಗೂ ಚುನಾವಣೆ ಆಯೋಗದ ಜೊತೆಗೆ ಸಹಕಾರದಿಂದ ನಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಹೇಳಿದರು.
ಅವರು ಮಾ.೧೪ರ(ಮಂಗಳವಾರ) ನಗರದ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಸಂವಾದ ಕೊಠಡಿಯಲ್ಲಿ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂತಿಮ ಮತದಾರರ ಪಟ್ಟಿಯಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದಲ್ಲಿ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಕ್ರಮ ಕೈಗೊಲ್ಳಲಾಗುವುದು ಎಂದರು.
ಈಗಾಗಲೇ ತರಬೇತಿ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಗ್ರಾಮೀಣ ಭಾಗಗಳ ಜನರಲ್ಲಿ ಮತದಾನ ಪ್ರಕ್ರಿಯೇ ಕುರಿತು ಅರಿವು ಮೂಡಿಸಲು ವಲಯ ಮಟ್ಟದ ಅಧಿಕಾರಿಗಳ ಜೊತೆಗೆ ಕಳುಹಿಸಲಾಗಿದ್ದು, ಇ ಯಂತ್ರಗಳು ಕೇವಲ ತರಬೇತಿ ನೀಡಲು ಮಾತ್ರ ಕಳುಹಿಸಲಾಗಿರುತ್ತವೆ ಆದ್ದರಿಂದ ಜನರು ಅಥವಾ ಪಕ್ಷದ ಕಾರ್ಯಕರ್ತರು ಯಾವುದೇ ಗೊಂದಲಕೊಳ್ಳಗಾಗಬಾರದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಮತಗಟ್ಟಗಳಲ್ಲಿ ನೀರಿನ ವ್ಯವಸ್ಥೆ, ಶಾಮಿಯಾನದ ವ್ಯವಸ್ಥೆ ಮಾಡಲು ಜಿಲ್ಲಾಡಳಿತದಿಮದ ಸೂಕ್ತ ಕ್ರಮ ಕೈಗೊಲ್ಳಲಾಗುವುದು ಎಂದರು.
ಅಭ್ಯರ್ಥಿಯು ಆಯ್ಕೆಯಾದ ನಂತರ ಅಥವಾ ಆಯ್ಕೆಗೂ ಮೊದಲು ಪಾವತಿ ವರದಿಗಳು( ಪೇಡ್ ನ್ಯೂಸ್) ಸುದ್ದಿಗಳನ್ನು ಪ್ರಕಟಿಸಬಾರದು. ಅಭ್ಯರ್ಥಿಯ ಆಯ್ಕೆಗೂ ಮಿದಲು ಇಂತಹದ್ದೆ ಅಭ್ಯರ್ಥಿ ಆಯ್ಕೆಯಾಗಿದ್ದಾರೆ ಎಂದು ವರದಿಗಳನ್ನು ಪಾವತಿಸಿ ವರದಿಗಳ ಮೂಲಕ ಪ್ರಚಾರ ಮಾಡಿದ್ದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಉಳಿದಂತೆ ಸಾಮಾಜಿಕ ಜಾಲತಾಣದಲ್ಲಿ ಅಭ್ಯರ್ಥಿಗಳ ಕುರಿತು ಅವಹೇಳನಕಾರಿ ಪೋಸ್ಟ್ಗಳು ಸಂದೇಶಗಳನ್ನು ಹಾಕಿದ್ದಲ್ಲಿ ಅದಕ್ಕೂ ಸೂಕ್ತ ಕ್ರಮ ಜರುಗಿಸಲಾಗುವುದು. ಚುನಾವಣೆ ಸಂದರ್ಭದಲ್ಲಿ ಮದ್ಯ ಕಳ್ಳಸಾಗಾಣಿಕೆ, ಮಾರಾಟ ಮಾಡುವುದನ್ನು ನಿಷೇದಿಸಲಾಗುವುದು ಒಂದು ವೇಳೆ ಮದ್ಯ ಕಳ್ಳ ಸಾಗಾಣಿಕೆ ಮತ್ತು ಮಾರಾಟ ಮಾಡುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣವರ, ರೀಮ್ಸ್ ಆಡಳಿತಾಧಿಕಾರಿ ತರಬೇತಿ ನೋಡಲ್ ಅಧಿಕಾರಿ ಹಂಪಣ್ಣ ಸಜ್ಜನ್, ಚುನಾವಣೆ ಕಂಪ್ಲೆಂಟ್ ನೋಡಲ್ ಅಧಿಕಾರಿ ಆಶಪ್ಪ ಸೇರಿದಂತೆ ಹಲವು ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.