ಪಾರದರ್ಶಕತೆಯನ್ನು ಮುಚ್ಚಿ ಹಾಕಲಿಕ್ಕೆ ಅಧಿಕಾರಿಗಳು ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ

ತಿ.ನರಸೀಪುರ : – ಪಟ್ಟಣದ ಪುರಸಭೆ ಸೇರಿದಂತೆ ಹಿರಿಯ ಉಪ ನೊಂದಣಾಧಿಕಾರಿಗಳ ಕಛೇರಿ ಹಾಗೂ ತಾಲ್ಲೂಕು ಮಟ್ಟದ ಸರ್ಕಾರಿ ಕಛೇರಿಗಳಲ್ಲಿ ಮಾಹಿತಿ ನೀಡಬೇಕಾದ ಅಧಿಕಾರಿಗಳೇ ಮಾಹಿತಿ ಹಕ್ಕು ಕಾಯ್ದೆಯನ್ನು1 ಸಂಪೂರ್ಣವಾಗಿ ಉಲ್ಲಂಘನೆ ಮಾಡುತ್ತಿದ್ದು, ಪಾರದರ್ಶಕತೆಯನ್ನು ಮುಚ್ಚಿ ಹಾಕಲಿಕ್ಕೆ ಅಧಿಕಾರಿಗಳು ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಡಾ.ಆಲಗೂಡು ಎಸ್.ಚಂದ್ರಶೇಖರ್ ಗಂಭೀರ ಆರೋಪವನ್ನು ಮಾಡಿದರು.
ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಕಬಿನಿ ಅತಿಥಿ ಗೃಹದಲ್ಲಿ ಕರೆಯಲಾಗಿದ್ದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿಕೊಟ್ಟಿರುವ ಬಗ್ಗೆ ಪುರಸಭೆಯಲ್ಲಿ ಕಳೆದ ಜು.23 ರಂದು ಮುಖ್ಯಾಧಿಕಾರಿ ಅವರಿಗೆ ಮಾಹಿತಿ ಕೋರಿ ಸಲ್ಲಿಸಿ ಅರ್ಜಿ ಸಲ್ಲಿಸಿ 45 ದಿನಗಳಾದರೂ ಮಾಹಿತಿ ನೀಡಿಲ್ಲ. ಸಮರ್ಪಕವಾದ ಮಾಹಿತಿಯನ್ನು ನೀಡದೆ ಸರ್ಕಾರಿ ಪದವನ್ನು ತೆಗೆದು ಮಾಹಿತಿ ಕೇಳಿ ಹಾಗೂ ಯಾವ ಉದ್ದೇಶಕ್ಕಾಗಿ ಎಂಬುದನ್ನು ನಮೂದಿಸಿ ಎನ್ನುವ ಮೂಲಕ ಹೋರಾಟಗಾರರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ಸರ್ಕಾರದ ಆದೇಶವಾಗಲಿ ಅಥವಾ ಚುನಾಯಿತ ಆಡಳಿತ ಮಂಡಳಿಯ ನಿರ್ಣಯವಾಗಲಿ ಇಲ್ಲದೆ ಸರ್ಕಾರಿ ನಿವೇಶನವನ್ನು ಖಾಸಗಿ ವ್ಯಕಿಗೆ ನೊಂದಣಿ ಮಾಡಿರುವ ಬಗ್ಗೆ ಹಿರಿಯ ಉಪ ನೊಂದಣಾಧಿಕಾರಿಯವರನ್ನ ಕಾಯ್ದೆಯಡಿ ಮಾಹಿತಿ ಕೇಳಿದರೆ ಸರ್ಕಾರದ ಆದೇಶ ಅಥವಾ ಸ್ಥಳೀಯ ಸಂಸ್ಥೆಯ ನಿರ್ಣಯವಿಲ್ಲದಿದ್ದರೂ ನಿವೇಶನದ ನೊಂದಣಿ ಮಾಡುತ್ತೇವೆ ಅಂತ ಬೇಜವಾಬ್ದಾರಿಯ ಸಬೂಬು ಹೇಳುತ್ತಾರೆ. ಹಾಗಾದರೆ ಮೈಸೂರು ಅರಮನೆಯನ್ನ ನನಗೆ ನೊಂದಣಿ ಮಾಡಿಕೊಡಿ ಅಂತ ಕೇಳಿದ್ದಕ್ಕೆ ಉತ್ತರಿಸಲಾಗದೆ ಸುಮ್ಮನಾದರು. ಇಂತಹ ಭ್ರಷ್ಟಾಚಾರದ ಅಧಿಕಾರಿಗಳು ತಾಲ್ಲೂಕಿನ ಸರ್ಕಾರಿ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರದ ಆಡಳಿತ ಹಾಗೂ ಯೋಜನೆಗಳ ಅನುಷ್ಠಾನ ಪಾರದರ್ಶಕತೆಯಿಂದ ಕೂಡಿರಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಮಾಹಿತಿ ಹಕ್ಕು ಅಧಿನಿಯಮ ಜಾರಿಗೆ ತಂದಿದೆ. ಸಾಮಾನ್ಯ ಜನರಿಗೆ ಆಡಳಿತ ವ್ಯವಸ್ಥೆ ಅರ್ಥವಾಗಲಿ ಎಂಬ ಉದ್ದೇಶದಿಂದ ಜನ್ ಲೋಕಪಾಲ ಮಸೂದೆಗೆ ಹೋರಾಟ ನಡೆಯಿತು. ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗದ ಬಗ್ಗೆ ತಹಶೀಲ್ದಾರರ ಗಮನಕ್ಕೆ ತಂದರೆ ನಮ್ಮ ವ್ಯಾಪ್ತಿಯಲ್ಲಿರುವ ಬಗ್ಗೆ ಮಾಹಿತಿ ಒದಗಿಸೋಣ ಅಂತಾರೆ. ಪೆÇಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಅವರನ್ನು ಇಲಾಖೆಗೆ ಸಂಬಂಧಪಟ್ಟಂತೆ ಮಾಹಿತಿಗೆ ಅರ್ಜಿ ಸಲ್ಲಿಸಿದರೆ, ಮೇಲ್ಮಟ್ಟದ ಅಧಿಕಾರಿಯೊಬ್ಬರ ಸಲಹೆಯಂತೆ ಮಾಹಿತಿ ನೀಡಲು ಸಾದ್ಯವಿಲ್ಲವೆಂಬ ಹಿಂಬರಹ ನೀಡುತ್ತಾರೆ. ಭ್ರಷ್ಟಾಚಾರದ ಹಿನ್ನೆಲೆಯ ಅನ್ಯಾಯದ ವಿರುದ್ಧವಷ್ಟೇ ಮಾಹಿತಿ ಕೇಳುತ್ತಿದ್ದೇವೆಯೇ ಹೊರತು ಯಾವುದೇ1 ದುರುದ್ದೇಶವಿಲ್ಲವೆಂದು ಸ್ಪಷ್ಟಪಡಿಸಿದರು.
ಲೋಕಾಯುಕ್ತ ಮರೆತ ಬಿಎಸ್ ವೈ: ಹಿಂದಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ನಿಗ್ರಹ1 ದಳವನ್ನು ಸಿದ್ದರಾಮಯ್ಯ ಅವರು ಆರಂಭಿಸುತ್ತಿದ್ದಂತೆ ಲೋಕಾಯುಕ್ತವನ್ನು ದುರ್ಬಲಗೊಳಿಸಲು ಎಸಿಬಿ ರಚನೆ ಮಾಡಲಾಗಿದೆ ಎಂಬು ಅಬ್ಬರಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಮೇಲೆ ಲೋಕಾಯುಕ್ತ ಬಲಪಡಿಸಿ ಭ್ರಷ್ಟಾಚಾರ ನಿಯಂತ್ರಿಸುವ ಕುರಿತು ಬಾಯಿಯನ್ನೇ ಬಿಡುತ್ತಿಲ್ಲ. ಮುಖ್ಯಮಂತ್ರಿಗಳೇ ಚಕಾರವೆತ್ತದ್ದಕ್ಕೆ ಅಧಿಕಾರಿಗಳು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇನ್ನಾದರೂ ಅಧಿಕಾರಿಗಳು ಕೋರಿರುವ ಮಾಹಿತಿಯನ್ನು ಕಾಯ್ದೆಯಡಿ ನೀಡದಿದ್ದರೆ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಾಳಿತದ ವಿರುದ್ಧ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಡಾ.ಆಲಗೂಡು ಎಸ್.ಚಂದ್ರಶೇಖರ್ ಎಚ್ಚರಿಸಿದರು.
ಸುದ್ಧಿಗೋಷ್ಟಿಯಲ್ಲಿ ದಸಂಸ ತಾಲ್ಲೂಕು ಸಂಚಾಲಕ ಕೆಂಪಯ್ಯನಹುಂಡಿ ಆರ್.ರಾಜು, ವಿಭಾಗೀಯ ಸಂಚಾಲಕ ಕನ್ನಾಯಕನಹಳ್ಳಿ ಮರಿಸ್ವಾಮಿ, ಸಂಘಟನಾ ಸಂಚಾಲಕ ಕುಮಾರ್, ಟೌನ್ ಸಂಚಾಲಕ ಗಿರೀಶ್, ಮುಖಂಡರಾದ ಕರೋಹಟ್ಟಿ ರಜನಿ,ರಾಜಪ್ಪ, ಚಂದ್ರಪ್ಪ, ಜಯಣ್ಣ, ಕೊಳತ್ತೂರು ಪ್ರಭಾಕರ್, ಪರಶುರಾಮ್, ಶಿವನಂಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು.