ಪಾರಂಪರಿಕ ಸ್ಥಳಗಳಿಂದ ಇತಿಹಾಸ, ಸಂಸ್ಕøತಿ ಉಳಿಯಲು ಸಾಧ್ಯ

ಕಲಬುರಗಿ: ಏ.18:ನಮ್ಮಜಿಲ್ಲೆ ಸೇರಿದಂತೆದೇಶದಲ್ಲಿ ಅನೇಕ ಸುಕ್ಷೇತ್ರಗಳು, ಸ್ಮಾರಕಗಳು, ನೈಸರ್ಗಿಕ ತಾಣಗಳು, ಐತಿಹಾಸಿಕ ಮತ್ತುಆಧ್ಯಾತ್ಮಿಕ ಸ್ಥಳಗಳಿದ್ದು ಅವುಗಳನ್ನು ಅಭಿವೃದ್ಧಿಗೊಳಿಸುವುದು ಅವಶ್ಯಕವಾಗಿದೆ. ಇದರಿಂದ ನಮ್ಮದೇಶದ ಸಂಸ್ಕøತಿ, ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ದೊರೆಯಲು ಸಾಧ್ಯವಾಗುತ್ತದೆ. ಐತಿಹಾಸಿಕ ಸ್ಥಳಗಳ ಬಗ್ಗೆ ಹೆಚ್ಚಿನ ಸಂಶೋಧನೆಜರುಗಬೇಕು. ಭವ್ಯವಾದ ಅನೇಕ ತಾಣಗಳು, ಸ್ಮಾರಕಗಳು, ಸುಕೇತ್ರಗಳು ಇಂದುಅವನತಿಯಅಂಚಿನಲ್ಲಿವೆ. ಇವುಗಳು ನಾಶವಾದರೆ ಮುಂದಿನ ಪೀಳಿಗೆ ಕೇವಲ ಚಿತ್ರದಲ್ಲಿ ನೋಡಲು ಮಾತ್ರ ಸಾಧ್ಯವಿದ್ದು, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಅಗತ್ಯವಾಗಿದೆಎಂದುಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯಶಹಾಬಜಾರ ನಾಕಾ ಸಮೀಪದಲ್ಲಿರುವ ‘ಸ್ಥಂಭರಾಮಲಿಂಗೇಶ್ವರದೇವಸ್ಥಾನದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಏರ್ಪಡಿಸಲಾಗಿದ್ದ’ವಿಶ್ವ ಪಾರಂಪರಿಕ ದಿನಾಚರಣೆ’ಯಕಾರ್ಯಕ್ರಮದಲ್ಲಿಅವರು ಮಾತನಾಡುತ್ತಿದ್ದರು.
ದೇವಸ್ಥಾನದ ಪೂಜ್ಯ ನಾಗೇಶ ಮಹಾರಾಜ್ ಸ್ವಾಮೀಜಿ ಮಾತನಾಡಿ, ಐತಿಹಾಸಿಕ, ಅಪರೂಪದ ವಾಸ್ತುಶಿಲ್ಪ ಹೊಂದಿರುವ, 2400 ವರ್ಷಗಳ ಪುರಾತನ, ‘ಕಲಬುರಗಿಗ್ರಾಮದೇವತೆ’ಎಂದುಹೇಳಲ್ಪಟ್ಟ ನಗರದ ಶಹಾಬಜಾರ ನಾಕಾ ಸಮೀಪವಿರುವ ಸ್ಥಂಭರಾಮಲಿಂಗೇಶ್ವರದೇವಾಲಯ ಹಾಗೂ ಅದರಆವರಣದ ಸ್ಥಳ ಅಭಿವೃದ್ಧಿಗೊಳಿಸಿ, ಅದರ ಬಗ್ಗೆ ವ್ಯಾಪಕ ಪ್ರಚಾರವಾಗುವ ಕೆಲಸ ಜರುಗಬೇಕಾಗಿದೆಎಂದರು.
ಈ ದೇವಸ್ಥಾನದಲ್ಲಿ ಬಹು ಪುರಾತನ ಸ್ಥಾವರಲಿಂಗವಿದೆ. ನಿರ್ಲಕ್ಷ್ಯದಿಂದ ಸುತ್ತಲುಗಿಡ-ಗಂಟೆ ಬೆಳೆದಿತ್ತು. ಪಡ್ಡೆ ಹುಡಗರಕೆಟ್ಟ ಚಟಗಳನ್ನು ಮಾಡುವಅಡ್ಡವಾಗಿತ್ತು. ದೇವಾಲಯದ ಪರಿಸರಕಸದಿಂದತುಂಬಿತ್ತು. ನಾನು ದೇವಸ್ಥಾನದ ಮುಖ್ಯಸ್ಥನಾದ ಮೇಲೆ ಸುತ್ತ-ಮುತ್ತಲಿನ ಸ್ಥಳವನ್ನು ಸ್ವಚ್ಛಗೊಳಿಸಿ, ದೇವಸ್ಥಾನದಆವರಣದ ಸುಚಿತ್ವವವನ್ನುಕಾಪಾಡಿಕೊಂಡು ಬರಲಾಗುತ್ತಿದೆ. ಭಕ್ತರುದೇವಸ್ಥಾನದ ಮಹಿಮೆಯನ್ನುಕಂಡುಆಗಮಿಸುತ್ತಿದ್ದಾರೆ. ಪ್ರತಿ ಸೋಮವಾರ ಸಂಜೆ ದೀಪೋತ್ಸವ, ಶಿವರಾತ್ರಿ ದಿನದಂದುಇಡೀ ದಿನ ವಿಶೇಷ ಪೂಜೆ, ಕಾರ್ಯಕ್ರಮಗಳು ಜರುಗುತ್ತವೆ. ಐತಿಹಾಸಿಕ ದೇವಸ್ಥಾನವಾದಇದರಅಭಿವೃದ್ಧಿಕಾರ್ಯ ಕೈಗೊಳ್ಳಲು ಸಂಬಂಧಿತಜನಪ್ರತಿನಿಧಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರುಕೂಡಾ, ನಿರ್ಲಕ್ಷ್ಯ ವಹಿಸಲಾಗುತ್ತಿದೆಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವೀರಪ್ರಸಾದ ಮಹಾರಾಜ ಮುತ್ಯಾ, ಶಿವಯೋಗೆಪ್ಪಾ ಎಸ್. ಬಿರಾದಾರ, ಅನೀಲಕುಮಾರ, ಮಹಾದೇವ, ನಾಗೋಭಾಚವ್ಹಾಣ, ವಿಜಯಸಿಂಗ ಠಾಕೋರ್, ಧನರಾಜ ಪಿಂಪಳೆ, ಸುಭಾಶ್ಚಂದ್ರಚೌಧರಿ ಸೇರಿದಂತೆ ಮತ್ತಿತರರಿದ್ದರು.