ಪಾರಂಪರಿಕ ವೈದ್ಯಪದ್ದತಿಯಂತೆ ಕಣ್ಣಿನ ಔಷಧಿ ವಿತರಣೆ

ದಾವಣಗೆರೆ. ನ.೨೩; ತಮಿಳುನಾಡಿನ  ಪಾರಂಪರಿಕ ವೈದ್ಯರಾದ ಮುತ್ತು ಕೃಷ್ಣನ್ ಅವರು ತಯಾರಿಸಿದ ಸಿದ್ಧ ಕಣ್ಣಿನ ಔಷಧಿಯನ್ನು ಇಂದು ವಿದ್ಯಾನಗರದ ಶ್ರೀ ಈಶ್ವರ ಪಾರ್ವತಿ ಗಣಪತಿ ದೇವಸ್ಥಾನದಲ್ಲಿ ಉಚಿತವಾಗಿ ಹಾಕಲಾಯಿತು.ಪ್ರತಿ ತಿಂಗಳು 23 ರಂದು ಈ ಔಷಧಿಯನ್ನು ಉಚಿತವಾಗಿ   ಹಾಕಲಾಗುತ್ತದೆ.  ವೃದ್ಧರು ಸೇರಿದಂತೆ ಹಲವರು ಕಣ್ಣಿನ ಔಷಧಿಯನ್ನು ಹಾಕಿಸಿಕೊಂಡರು ಈ ಸಂದರ್ಭದಲ್ಲಿ ವೀರೇಶ್, ಪಾರಂಪರಿಕ ವೈದ್ಯ ಮೋಕ್ಷನಂದ ,ತಿಪ್ಪೇಸ್ವಾಮಿ, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.