ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ,ಮಾ.18:ಕಲಬುರಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ ಪ್ರಾಯೋಜಕತ್ವದಲ್ಲಿ, ಪ್ರವಾಸೋದ್ಯಮ ಇಲಾಖೆ, ಇನ್‍ಟ್ಯಾಕ್ ಅಧ್ಯಾಯ ಹಾಗೂ ದರ್ಶ್ ಆಸ್ಪತ್ರೆ ಇವುಗಳ ಸಂಯುಕ್ತಾಶ್ರಯದಲ್ಲಿ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಕಲಬುರಗಿ ದರ್ಶ ಆಸ್ಪತ್ರೆಯ ಡಾ|| ಮಾರ್ತಾಂಡಪ್ಪ್ಪ ಕುಲಕರ್ಣಿ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಶನಿವಾರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ‘ಪಾರಂಪರಿಕ ತಾಣಗಳು ನಮ್ಮ ದೇಶದ ಸಂಪತ್ತು’ ಆಗಿದ್ದು, ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಯಶ್ವಸಿಗೊಳಿಸಬೇಕು ಎಂದರು.
ನಗರದ ಶರಣಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಈ ಪಾರಂಪರಿಕ ನಡಿಗೆ ಲಾಲಗೇರಿ ಕ್ರಾಸ್ ದಿಂದ ಕೋಟೆಯ ಪ್ರವೇಶ ದ್ವಾರಕ್ಕೆ ಬಂದು ಕೊನೆಗೊಂಡಿತು.
ಈ ಸಂದರ್ಭದಲ್ಲಿ ವಿಷಯ ತಜ್ಞರು, ಇನಟ್ಯಾಕ್ ಸಂಯೋಜಕರು ಹಾಗೂ ಇತಿಹಾಸ ಪ್ರಾಧ್ಯಾಪಕರಾದ ಡಾ. ಶಂಭುಲಿಂಗ.ಎಸ್.ವಾಣಿ ಅವರು ಕಲಬುರಗಿ ಕೋಟೆಯ ಕುರಿತು ಕೋಟೆಯ ಕಂದಕ ಹಾಗೂ ಗುಪ್ತದ್ವಾರದ ಕುರಿತು ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು, ಹಾಗೂ ವಿಷಯಾಸಕ್ತರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಪಾರಂಪರಿಕ ನಡಿಗೆಯ ಮಹತ್ವನ್ನು ಮತ್ತು ಈ ಕಾರ್ಯಕ್ರಮಗಳ ವಿಶೇಷತೆ ಕುರಿತು ಮಾಹಿತಿ ನೀಡಿದರು.
ನಂತರ ಕೋಟೆಯ ಒಳಗೆ ಪ್ರವೇಶ ಮಾಡಿದ ಪಾರಂಪರಿಕ ನಡಿಗೆ ತಂಡಕ್ಕೆ ಕೋಟೆಯ ಮುಖ್ಯ ದ್ವಾರ, ಜಾಮೀಯಾ ಮಸೀದಿ, ಬಾರಾ-ಗಜ್ ತೋಪು, ವಿದೇಶಿ ಮಾರುಕಟ್ಟೆ, ಹಾಗೂ ರಣಮಂಡಲದವರಗೆ ಭಾಗವಹಿಸಿದವರಿಗೆ ಬಹಮಿನಿಯರ ಇತಿಹಾಸ, ಸಂಸ್ಕøತಿ, ಪರಂಪರೆ, ಹಾಗೂ ವಾಸ್ತುಶೈಲಿಯ ಮಹತ್ವದ ಕುರಿತು ಮಾಹಿತಿಯನ್ನು ನೀಡಿದರು,
ಕಾರ್ಯಕ್ರಮದಲ್ಲಿ ಕಲಬುರಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಜು ಮಾತನಾಡುತ್ತಾ “ ಕಲಬುರಗಿ ನಗರವು ಐತಿಹಾಸಿಕ ಮಹತ್ವ ಹೊಂದಿರುವ ನಗರವಾಗಿದ್ದು, ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ಸಾಮಥ್ರ್ಯವಿರುವ ಐತಿಹಾಸಿಕ ಕಟ್ಟಡಗಳು ನಮ್ಮಲ್ಲಿವೆ, ಮುಂಬರುವ ದಿನಗಳಲ್ಲಿ ಇವುಗಳ ಕುರಿತು ಪ್ರವಾಸಿಗರಲ್ಲಿ ಜಾಗ್ರೃತಿ ಮೂಡಿಸುವ ಹಲವಾರು ಕಾರ್ಯಕ್ರಮಗಳು ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೋಟೆಯ ಜಾಮೀಯಾ ಮಸೀದಿಯ ನಯಾಬ ಮುತವಲ್ಲಿ ಯಾದ ರಿಜ್ವಾನ್-ಉರ್-ರೆಹಮಾನ್ ಸಿದ್ದಿಕಿ, ಕಲಬುರಗಿ ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಭೀಮಣ್ಣ ಘನಾತೆ, ಮಲ್ಲಿಕಾರ್ಜುನ ಶೆಟ್ಟಿ, ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಅಧಿಕಾರಿಗಳಾದ ಸಂಜೀವ ಕುಮಾರ, ಇಲಾಖೆ ಸಿಬ್ಬಂದಿಗಳಾದ ಪುರುಗೈ ಲಿಂಗಮೂರ್ತಿ, ಯೋಗೇಶ ಬಿ, ರಾಹುಲ್ ಎಮ್ ದೇಶಪಾಂಡೆ ಹಾಗೂ ಪ್ರವಾಸಿ ಮಾರ್ಗದರ್ಶಿಗಳು, ಪ್ರವಾಸಿ ಮಿತ್ರರು, ಇತಿಹಾಸ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಲಬುರಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಜು ಅವರು ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಲಬುರಗಿ ಕೋಟೆಯ ಸಮಗ್ರ ಮಾಹಿತಿ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಪ್ರವಾಸಿ ಸಮಾಲೋಚಕರಾದ ಸಂದಿಪ್ ಸಿಂಗ್ ಕಾರ್ಯಕ್ರಮ ನಿರೂಪಿಸಿದರು.