ಪಾರಂಪರಿಕ ಕ್ರೀಡೆಗಳಿಂದ ಬೌದ್ಧಿಕ, ದೈಹಿಕ ಬೆಳವಣಿಗೆ ಸಾಧ್ಯ

ಬಾಗಲಕೋಟೆ,ಜೂ4 : ಮಲ್ಲಕಂಬದಂತಹ ಭಾರತಿಯ ಕ್ರೀಡೆಗಳಿಂದ ಮನುಷ್ಯನ ಬೌದ್ಧಿಕ ವಿಕಾಸ ಮತ್ತು ದೈಹಿಕ ಬೇಳಬಣಿಗೆ ಸಾಧ್ಯ ಎಂದು ಬಿ.ವಿ.ವಿ ಸಂಘದ ಆಡಳಿತಾಧಿಕಾರಿ ಡಾ.ವೀಜಯಕುಮಾರ ಕಟಗಿಹಳ್ಳಿಮಠ ಹೇಳಿದರು.

ಅವರು ಬ.ವಿ.ವಿ.ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟೆಯಲ್ಲಿ ಅಯ್. ಕ್ಯೂ. ಎ. ಸಿ ಅಡಿಯಲ್ಲಿ ಕನ್ನಡ ಸಂಘ ಹಾಗೂ ಕನ್ನಡ ವಿಭಾಗ ಆಯೋಜಿಸಿದ ಮಲ್ಲಕಂಬ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು, ಮಲ್ಲಕಂಬ ಒಂದು ಕ್ರೀಡೆ ಎನ್ನುವದಕ್ಕಿಂತ ಜೀವನ ಶೈಲಿ ಆಗಬೇಕು. ಪಾರಂಪರಿಕ ಭಾರತೀಯ ಕ್ರೀಡೆಗಳಿಂದ ಮನುಷ್ಯನ ಬೌದ್ಧಿಕ ವಿಕಾಸ ಮತ್ತು ದೈಹಿಕ ಬೆಳವಣಿಗೆಗೆ ಸಾಧ್ಯವಾಗಲಿವೆ, ಆ ಕಾರಣದಿಂದ ಮಲ್ಲಕಂಬದಂತಹ ಕ್ರೀಡೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಅನಿವಾರ್ಯತೆಯಿದೆ. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಮಲ್ಲಕಂಬ ಶಾಲಾ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಮಟ್ಟದಲ್ಲಿನ ಕ್ರೀಡೆಗಳಲ್ಲಿ ಈ ಕ್ರೀಡೆಯು ಒಂದು ಭಾಗವಾಗಬೇಕು. ಮಲ್ಲಕಂಬ ಕ್ರೀಡೆಯಿಂದ ದೈಹಿಕ, ಮಾನಸಿಕ, ಬೌದ್ಧಿಕ ವಿಕಾಸಕ್ಕೆ ಮತ್ತು ಏಕಾಗ್ರತೆ ಕಾರಣವಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಮನದಟ್ಟು ಮಾಡಿಕೊಳ್ಳಬೇಕಾಗಿದೆ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಡಾ ಪ್ರಕಾಶ್ ಖಾಡೆ ಗ್ರಾಮೀಣ ಕ್ರೀಡೆ ಮಲ್ಲಕಂಬ ಮುಖಾಮುಖಿ ಎಂಬ ವಿಷಯ ಕುರಿತು ಮಾತನಾಡುತ್ತಾ ಪರಿಶುದ್ಧ ಗ್ರಾಮೀಣ ಕ್ರೀಡೆಗಳಾದ ಆಟ್ಯಾ ಪಟ್ಯಾ,ಸರಿಗೆರೆ, ಮರಕೋತಿ ಆಟ, ಗುಂಡ ಗಜ ಆಟ ಆಡುವುದು ಇನ್ನೂ ಮುಂತಾದ ಕ್ರೀಡೆಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸಿ ಕೊಡಬೇಕಾಗಿದೆ ಎಂದರು.
ಇನ್ನೊರ್ವ ಉಪನ್ಯಾಸಕರಾದ ತುಳಸಿಗಿರಿಯ ಶಿಕ್ಷಕರು ಹಾಗೂ ಮಲ್ಲಕಂಬ ಹಿರಿಯ ತರಬೇತಿದಾರರು ಸಿ ಕೆ ಚನಾಳ್ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಜಗನ್ನಾಥ್ ವ್ಹಿ.ಚವ್ಹಾಣ ವಹಿಸಿಕೊಂಡಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರು, ಕನ್ನಡ ಸಂಘದ ಕಾರ್ಯಧ್ಯಕ್ಷರಾದ ಎಂ ನಂಜುಂಡಸ್ವಾಮಿಯವರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಸಂಘದ ಕಾರ್ಯದರ್ಶಿಗಳಾದ ಬಸವರಾಜ ವೀ.ಖೋತ ಅವರು ಅತಿಥಿಗಳನ್ನು ಪರಿಚಯಿಸಿದರು.ವೇದಿಕೆ ಮೇಲೆ ಆಯ್. ಕ್ಯೂ. ಎ. ಸಿ ಸಂಯೋಜಕರಾದ ಶ್ರೀಮತಿ ಗಿರಿಜಾ ನಾವದಗಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ ಎಸ್ ಎಸ್ ಕೋಟ್ಯಾಳ ಅವರು ಉಪಸ್ಥಿತರಿದ್ದರು. ಎಮ್ ಎಚ್. ಜನ್ನಪ್ಪಗೋಳ ವಂದಿಸಿದರು. ಡಾ ಎಂ ಎಂ ಹುದ್ದಾರ, ಶ್ರೀಮತಿ ನಂದಿನಿ ದೊಡ್ಡಮನಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು.