ಬೀದರ್:ಅ.31:ಗ್ಲೋಬಲ್ ಸೈನಿಕ ಅಕಾಡೆಮಿ ಮಕ್ಕಳಿಂದ ಸರ್ದಾರ ವಲ್ಲಬಾಯಿ ಪಟೇಲ್ ಅವರ 148 ನೇ ಜನ್ಮ ದಿನದ ನಿಮಿತ್ಯ ಗ್ಲೋಬಲ್ ಸೈನಿಕ ಅಕಾಡೆಮಿ ವಿದ್ಯಾರ್ಥಿಗಳು ಭಾರತೀಯ ವಾಯುಸೇನೆ ಬೀದರ ಆಯೋಜಿಸಿದ ಏಕತೆಗಾಗಿ ಓಟದಲ್ಲಿ ಭಾಗವಹಿಸಿದರು. ಬೆಳಿಗ್ಗೆ 6 ಗಂಟೆಗೆ ಆರಂಭವಾದ ಏಕತೆಗಾಗಿ ಓಟವು ಬೀದರ ಕೋಟೆಯಿಂದ ಅಗ್ನಿ ಶಾಮಕ ಠಾಣೆ, ಜೀರಾ ಕನ್ವೇಶನ್ ಹಾಲ್, ಗುರುನಾನಕ್ ಗೇಟ್, ಬರೀದಶಾಹಿ ಉದ್ಯಾನ ಮಾರ್ಗವಾಗಿ ವಾಯುಸೇನೆ ಸ್ಟೇಷನ್ ಕ್ರೀಡಾಂಗಣ ವರೆಗೂ 6 ಕಿಲೋ ಮೀಟರ್ ಓಟದಲ್ಲಿ ಉತ್ಸಾಹ ಭರಿತವಾಗಿ ವಿದ್ಯಾರ್ಥಿಗಳು ಓಡಿ ಗುರಿ ಮುಟ್ಟಿದರು.
ನಂತರ ವಾಯುಸೇನೆ ಕ್ರೀಡಾಂಗಣದಲ್ಲಿ ವಾಯು ಸೇನೆ ಸಿಬ್ಬಂದಿಗಳು ಹಾಗೂ ವಿದ್ಯಾಥಿಗಳು ದೇಶದ ರಕ್ಷಣೆ ಮಾಡುತ್ತೇವೆ ಎಂದು ‘ರಾಷ್ಟ್ರೀಯ ಏಕತೆಯ’ ಪ್ರತಿಜ್ಞೆ ಮಾಡಿದರು.
ಭಾರತೀಯ ವಾಯುಸೇನೆ ಬೀದರ ಎ ಓ ಸಿ ಏರ್ ಕಮಾಂಡರ್ ಅಭಿಜಿತ್ ನಿನೆ, ಗ್ಲೋಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೇನ್ಪೂರೆ ಸೇರಿದಂತೆ ಏರ್ ಫೋರ್ಸ ಸ್ಟೇಷನ್ ನ ಎಲ್ಲಾ ಅಧಿಕಾರಿಗಳು ಓಟದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಜ್ಯೋತಿ ರಾಗ, ಪಿ.ಆರ್.ಓ ಕಾರಂಜಿ ಸ್ವಾಮಿ, ಶಿಕ್ಷಕರು ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.