ಪಾರಂಪರಿಕೆ ವೈದ್ಯರ ಒಕ್ಕೂಟದ ಪೂರ್ವಭಾವಿ ಸಭೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಡಿ.29: ನಗರದ ಹೋಟೆಲ್ ರಾಯಲ್ ಪೋರ್ಟ್ ಹೋಟೆಲ್‍ನಲ್ಲಿ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಹಾಗೂ ಸಂಘಗಳನ್ನು ಪಾರಂಪರಿಕ ವೈದ್ಯರ ಒಕ್ಕೂಟ  ಪೂರ್ವಭಾವಿ ಸಭೆಗೆ ಕರೆ ನೀಡಲಾಗಿತ್ತು  ರಾಜ್ಯದ ಹಲವಾರು ವೈದ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಅಧ್ಯಕ್ಷರುಗಳು ಹಾಗೂ ವೈದ್ಯ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ರಾಜ್ಯದ ಎಲ್ಲಾ ಭಾಗದಿಂದ ಆಗಮಿಸಿದ ಎಲ್ಲಾ ಪಾರಂಪರಿಕ ವೈದ್ಯರು ಇವರ ಒಪ್ಪಿಗೆ ಮೇರೆಗೆ ಅಖಿಲ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಹಾಗೂ ಸಂಘಗಳ ಒಕ್ಕೂಟ ಎಂದು ಸರ್ವಾನುಮತದಿಂದ ನಾಮಕರ ಮಾಡಲಾಯಿತು ಮುಖಾಂತರ ಎಲ್ಲಾ ಪಾರಂಪರಿಕ ವೈದ್ಯ ಪರಿಷತ್ತಿನಗಳ ಮುಖ್ಯ ವಾಹಿನಿಯ ಮುಖಾಂತರ ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಅನುವಂಶಿಕ ಅನುಭವಿ ಸಂಘ ಇನ್ನಿತರ ಹಲವಾರು ಪರಿಷತ್ ಹಾಗೂ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು
ನಾಮಕರಣಗೊಂಡ ಅಖಿಲ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತಿನ ಹಾಗೂ ಸಂಘಗಳ ಒಕ್ಕೂಟಕ್ಕೆ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿರುವ ಅನುಭವಿ ಒಕ್ಕೂಟವನ್ನು ಮುನ್ನಡೆಸುವ ಸಾಮಥ್ರ್ಯವುಳ್ಳ ಅಧ್ಯಕ್ಷರ ಆಯ್ಕೆಯನ್ನು ಮಾಡುವುದಾಗಿ  ಸಭೆಯ ಸಾನಿಧ್ಯವನ್ನು ವಹಿಸಿಕೊಂಡಿರುವ ಪೂಜ್ಯಶ್ರೀ ಬಸವ ಪ್ರಸಾದ ಮಹಾಸ್ವಾಮಿಗಳು ಜಗದ್ಗುರು ಶ್ರೀ ಶಿವ ಶಕ್ತಿ ಪೀಠ ಸುಕ್ಷೇತ್ರ ಇರಕಲ್ ಮಠದ ಪೂಜ್ಯರು ಸಭೆಯಲ್ಲಿದ್ದ ಎಲ್ಲ ವೈದ್ಯರಿಗೆ ತಿಳಿಸಿದರು. ಸಭೆಯಲ್ಲಿದ್ದ ಎಲ್ಲ ವೈದ್ಯರು ಸಮನಾಗಿ ಎರಡು ಹೆಸರುಗಳನ್ನು ಸೂಚಿಸಿದಾಗ ಕೊನೆಗೆ ಶ್ರೀಗಳು ಎಲ್ಲಾ ವೈದ್ಯರ ಒಪ್ಪಿಗೆ ಮೇರೆಗೆ ವೈದ್ಯ ಲೋಕೇಶ್ ಟೇಕಲ್ ಮುಂಡರಗಿ ವೈದ್ಯರನ್ನು ಅಧ್ಯಕ್ಷರನ್ನಾಗಿ ವೈದ್ಯ ಆನಂದ್ ಡಿ ಹೇರೂರು ಅವರನ್ನು ಕಾರ್ಯಾಧ್ಯಕ್ಷರನಾಗಿ ವೈದ್ಯರ ಸಹ ಮತದೊಂದಿಗೆ ಆಯ್ಕೆ ಮಾಡುವ ಮೂಲ ಈರ್ವರ ವೈದ್ಯರ ಹೆಸರನ್ನು ಘೋಷಣೆ ಮಾಡಿದರು.
ಮುಂದಿನ ದಿನಗಳಲ್ಲಿ ಒಕ್ಕೂಟದ ಕಮಿಟಿಯನ್ನು ರಚನೆ ಮಾಡಿ ನೋಂದಣಿ ಮಾಡಿದ ನಂತರ ಸರ್ಕಾರದ ಮಾನ್ಯತೆಗಾಗಿ ಹೋರಾಟದ ರೂಪರೇಶೆಗಳನ್ನು ತಯಾರಿಸಲಾಗುವುದು ಎಂದು ಪೂಜ್ಯರು ತಿಳಿಸಿದರು
ಈ ಸಂದರ್ಭದಲ್ಲಿ ವೈದ್ಯ ದ್ಯಾಮಣ್ಣ ನರಕಲದಿನ್ನಿ, ವೈದ್ಯ ರಾಜ್ಯ ಪಂಡಿತ್, ವೈದ್ಯ ಎಚ್ ಡಿ ಪೂಜಾರ್ ಸನಾತನ ಹೆಲ್ತ್ ಕೇರ್ ಸಂಸ್ಥಾಪಕರಾದ ಡಿಜೆ ರವಿಕುಮಾರ್ ವೈದ್ಯ ವೆಂಕಟರಮಣಪ್ಪ ಮಾಜಿ ಜಿಲ್ಲಾಧ್ಯಕ್ಷರು ಯೋಗೀ ಹಾಸನ ಯೋಗಿ ಚಂದ್ರಶೇಖರ್ ಗುರೂಜಿ ಬೆಂಗಳೂರು ವಿಜಯ ಕುಲಕರ್ಣಿ ಕಳಸ ಬಂಡೂರಿನಾಲ ಸಂಸ್ಥಾಪಕ ಅಧ್ಯಕ್ಷರು ಹಾವೇರಿ ಜಿಲ್ಲಾಧ್ಯಕ್ಷ ತಿಮ್ಮಣ್ಣ ಸಾಲಿ ಹಾಗೂ ಚಂದ್ರಶೇಖರ್ ಪಂಡಿತ್ ಬೆಂಗಳೂರು ಸಂಗಪ್ಪ ಹಾವೇರಿ ಎನ್ ವೆಂಕಟರಮಣಪ್ಪ ಮುಳುಬಾಗಿಲು ಶುಭಾಗೌಡ ಸುರೇಂದ್ರ ನಾಯ್ಡು ಡಾಕ್ಟರ ರಾಮ್ ಮೂರ್ತಿ ಚಿತ್ರದುರ್ಗ ಜಿಲ್ಲಾಧ್ಯಕ್ಷರು ಬಿದರಿಕೆರೆ ಅಕ್ಬರ್ ರಾಜಣ್ಣ ಹೊಸಕೋಟೆ ಶಿವಕುಮಾರ್ ಹಾನಗಲ್ ಹಾಗೂ ಮಂಡ್ಯದಿಂದ ಸಿಂಧು ಅಜ್ಜಂಪುರ ಜಗಧೀಶ ವೈದ್ಯ ಕೆ ದಿನೇಶ್ ಚಿತ್ರದುರ್ಗ ವೈದ್ಯ ದಾನನಗೌಡ ವೈದ್ಯ ಕುಮಾರಸ್ವಾಮಿ ಕಸಬಾ ಲಿಂಗಸೂರ್ ವೈದ್ಯ ಶರಣಪ್ಪ ಬಳ್ಳಾರಿ ವೈದ್ಯ ರಾಘವೇಂದ್ರ ಸುಗಂಧಿ ಚಂದ್ರಶೇಖರ್ ಉಳ್ಳಾಗಡ್ಡಿ ಮುಂಡರಗಿ ರಾಜಶೇಖರ್ ಉಪಸ್ಥಿತರಿದ್ದರು.