ಪಾಯದಿಂಡಿ ಯಾತ್ರೆಯಲ್ಲಿ ಪಾಲ್ಗೊಂಡ ರವೀಂದ್ರ ಸ್ವಾಮಿ

ಔರಾದ:ಮಾ.23: ಏಕತಾ ಫೌಂಡೇಶನ್ ನ ಅಧ್ಯಕ್ಷರಾದ ‘ಶ್ರೀ ರವೀಂದ್ರ ಸ್ವಾಮಿ’ಯವರು #ಏಕತಾ #ಜನಾಶೀರ್ವಾದ_ಯಾತ್ರೆ-2023 ನ್ನು ಕೈಗೊಂಡ ಸಮಯದಲ್ಲಿ ‘ಹಂದಿಕೇರಾ’ ಗ್ರಾಮದ ಹತ್ತಿರ ಪಾಯದಿಂಡಿ ಕೈಗೊಂಡಿರುವ ಜನಸಮೂಹ ಸಿಕ್ಕಿತು.

‘ಭಂಡಾರ ಕುಮಟಾ ಹಾಗೂ ಧೋಪರವಾಡಿ’ಯಿಂದ ಸುಮಾರು 500 ಜನರು ಪಂಡರಪುರಕ್ಕೆ ಪಾಯದಿಂಡಿ ಹೊರಟಿದ್ದರು. ಈ ವೇಳೆ ಶ್ರೀ ರವೀಂದ್ರ ಸ್ವಾಮಿಯವರು ದರ್ಶನ ಪಡೆದರು. ಹಾಗೆಯೇ ಹಂದಿಕೇರಾದ ಪ್ರಜಾಪ್ರಭುಗಳನ್ನೂ ಭೇಟಿಯಾದರು.

ಈ ಸಂದರ್ಭದಲ್ಲಿ ನಾರಾಯಣ ಪಾಟೀಲ್, ಗಣಪತರಾವ್ ಪಾಟೀಲ್, ವೆಂಕಟರಾವ್ ಒಡೆಯರ್, ವಿಠಲರಾವ್ ಮಾನೆ, ಪ್ರಭಾಕರರಾಯ್ ಮುಳೆ, ಸಂತೋಷ ಮುಳೆ ಮತ್ತು ಹಲವು ಪ್ರಮುಖರು ಹಾಗೂ ಏಕತಾ ಕಾರ್ಯಕರ್ತರು ಉಪಸ್ಥಿತರಿದ್ದರು.