
.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 17 :- ಬೆಳಿಗ್ಗೆಯಿಂದಲೇ ಪಾನಮತ್ತನಾಗಿ ಸರಿಯಾದ ಉಚ್ಚಾರಣೆ ಮಾಡದೆ ಶೌಚಾಲಯಕ್ಕೆ ಬರುವ ಪ್ರಯಾಣಿಕರೊಂದಿಗೆ ಸರಿಯಾದ ಸೌಜನ್ಯದ ವರ್ತನೆ ಮಾಡದಿರುವ ಶೌಚಾಲಯ ಕೆಲಸಗಾರನಿಂದ ಕೂಡ್ಲಿಗಿ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಬಂದೋಗುವ ಪ್ರಯಾಣಿಕರಲ್ಲಿ ಶೌಚಾಲಯಕ್ಕೆ ಹೋಗುವ ಮಹಿಳೆಯರಂತೂ ಹೆದರಿಕೊಂಡು ಎಲ್ಲೋ ನಿಲ್ದಾಣದ ಮರೆಯಲ್ಲಿ ಶೌಚಾ ಮಾಡುವ ಪರಿಸ್ಥಿತಿಯಾಗಿದೆ ಮಹಿಳಾ ಪ್ರಯಾಣಿಕರು ಘಟಕದ ಅಧಿಕಾರಿಗಳಿಗೆ ಪತ್ರಿಕೆ ಮೂಲಕ ದೂರುತ್ತಿದ್ದಾರೆ.
ಹೌದು ಕಳೆದೊಂದು ವಾರದಿಂದ ಈ ಪರಿಸ್ಥಿತಿ ಕೂಡ್ಲಿಗಿ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಕಂಡು ಬರುತ್ತಿದ್ದು ಪ್ರಯಾಣಿಕರ ಗೋಳನ್ನು ಅಧಿಕಾರಿಗಳು ಕೇಳದೆ ಅವರಿಗೆ ಹೇಳಿದ್ದೇವೆ ಇವರಿಗೆ ಹೇಳಿದ್ದೇವೆ ಎನ್ನುವ ಉತ್ತರ ಮಾತ್ರ ಹೇಳುತ್ತಿದ್ದಾರೆ.
ಕನ್ನಡ ಬಾರದ ಬಸ್ ನಿಲ್ದಾಣದ ಶೌಚಾಲಯದ ಕೆಲಸಗಾರ ಬೆಳಿಗ್ಗೆಯಿಂದಲೇ ಮದ್ಯಪಾನ ಸೇವಿಸಿಕೊಂಡು ನಿಲ್ದಾಣದ ಶೌಚಾಲಯ ಸ್ವಚ್ಛಗೊಳಿಸದೇ ಬರೀ ಬ್ಲೀಚಿಂಗ್ ಪೌಡರ್ ಹಾಕುವುದನ್ನು ಬಿಟ್ಟರೆ ಸ್ವಚ್ಛತೆ ಮರೀಚಿಕೆ ಈ ಗಬ್ಬು ವಾಸನೆಗಿಂತ ಇವನ ಬಾಯಿಂದ ಬರುವ ವಾಸನೆಯೇ ಅದಕ್ಕಿಂತಲೂ ಗಬ್ಬುವಾಸನೆಯಿಂದ ಕೂಡಿರುತ್ತದೆ ಎನ್ನುತ್ತಾರೆ ಶೌಚಾಲಯಕ್ಕೆ ಹೋಗಿಬರುವ ಪ್ರಯಾಣಿಕರು.
ಮಹಿಳಾ ಪ್ರಯಾಣಿಕರ ಜೊತೆ ಅಸಭ್ಯ ವರ್ತನೆ : ಕುಡಿದ ಅಮಲಿನಲ್ಲಿ ಬೇಕಾಬಿಟ್ಟಿಯಾಗಿ ಕುರ್ಚಿಮೇಲೆ ಕುಳಿತುಕೊಂಡು ಶೌಚಕ್ಕೆ ಬರುವ ಮಹಿಳೆಯರ ಹತ್ತಿರ ಹಿಂದಿಯಲ್ಲಿ ಹಣಕ್ಕಾಗಿ ಬಾಯಿಗೆ ಬಂದಂತೆ ಅಸಭ್ಯ ವರ್ತನೆ ಮಾಡುತ್ತಾನೆ ಎನ್ನುವ ದೂರು ಸಹ ಮಹಿಳೆಯರು ತಿಳಿಸುತ್ತಿದ್ದಾರೆ ಅಲ್ಲದೆ ಸಂಜೆ 6 ಅಥಾವ 7ಗಂಟೆಯಾದರೆ ಶೌಚಾಲಯಕ್ಕೆ ಬೀಗ ಜಡಿದುಕೊಂಡು ಪಕ್ಕದಲ್ಲಿರುವ ಮಿನಿ ನಿಲ್ದಾಣದಲ್ಲಿ ಪಾನಮತ್ತಾನಾಗಿ ಮಲಗುತ್ತಿದ್ದು ಸಂಜೆಯಾದರೆ ಬಂದೋಗುವ ಬಸ್ಸುಗಳ ಸಂಖ್ಯೆ ಜಾಸ್ತಿಯಾಗುತ್ತಿರುವಾಗ ಶೌಚಾಲಯಕ್ಕೆ ಹೋಗುವ ಪ್ರಯಾಣಿಕರ ಗೋಳು ಆದರಲ್ಲಿ ಮಹಿಳೆಯರ ಗೋಳು ಹೇಳತೀರದು ಇದ್ದು ಇಲ್ಲದಂತಿರುವ ಶೌಚಾಲಯ ಕಂಡು ಪ್ರಯಾಣಿಕರು ಕೂಡ್ಲಿಗಿ ಘಟಕದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಶೌಚಾಲಯದ ಕೆಲಸಗಾರನಿಗೆ ನಿಲ್ದಾಣದ ಕಂಟ್ರೋಲರ್ ಗಳು ಬೈದಾಡಿ ಸಂಜೆ ಬಾಗಿಲು ತೆರೆಯಲು ಹೇಳಿದರೆ ಬಾಗಿಲು ತೆಗೆದು ಕರೆಂಟ್ ಹಾಕದೆ ಸ್ವಿಚ್ ಇರುವ ರೂಮಿನ ಬಾಗಿಲು ಹಾಕಿಕೊಂಡು ಹೋಗಿ ಎಲ್ಲೋ ಮಲಗುತ್ತಾನೆ ಇತ್ತ ಬಾಗಿಲು ತೆರೆದಿದೆ ಎಂದು ಶೌಚಾಲಯಕ್ಕೆ ಬರುವ ಮಹಿಳಾ ಪ್ರಯಾಣಿಕರು ಕತ್ತಲಾಗಿರುವುದರಿಂದ ಶೌಚಾಲಯದ ಒಳಗೆ ಹೋಗಲು ಹೆದರುತ್ತಿದ್ದಾರೆ ರಾತ್ರಿ ಹೊತ್ತಲ್ಲಿ ಇನ್ಯಾವ ಮಟ್ಟಕ್ಕೆ ಇರುತ್ತದೆ ಎಂಬುದನ್ನು ಇದರ ಮೇಲೆ ಊಹಿಸಿಕೊಳ್ಳಬಹುದಾಗಿದೆ ಇಂತಹ ಮದ್ಯಪಾನ ಸೇವನೆಯ ಕೆಲಸಗಾರರನನ್ನು ತೆಗೆದುಹಾಕುವಂತೆ ಪತ್ರಿಕೆ ಮೂಲಕ ಕೂಡ್ಲಿಗಿ ಸಾರಿಗೆ ಸಂಸ್ಥೆ ಘಟಕಾಧಿಕಾರಿಗೆ ಮನವಿ ದೂರನ್ನು ನೀಡಿದ್ದಾರೆ.
ಕೂಡ್ಲಿಗಿ ಬಸ್ಸಿನ ನಿಲ್ದಾಣದ ಶೌಚಾಲಯದಲ್ಲಿ ಪಾನಮತ್ತಿನಲ್ಲಿರುವ ಕೆಲಸಗಾರನ ಬಗ್ಗೆ ನಿಲ್ದಾಣದ ವಿಚಾರಣಾಧಿಕಾರಿಗಳಿಂದ ತಿಳಿದಿದ್ದು ಶೌಚಾಲಯದ ಸ್ವಚ್ಛತೆ ಅದರ ನಿರ್ವಹಣೆ ಮಾಡುವ ಟೆಂಡರ್ ಮಾಡಿಕೊಂಡವರಿಗೆ ಕರೆ ಮಾಡಿ ಪ್ರಯಾಣಿಕರಿಗೆ ಅನಾನುಕೂಲವಾಗುವ ರೀತಿಯಲ್ಲಿರುವ ಹಾಗೂ ಅಸಭ್ಯ ವರ್ತನೆ ಮಾಡುವ ಶೌಚಾಲಯದ ಕೆಲಸಗಾರನನ್ನು ತೆಗೆದುಹಾಕಿ ಕೂಡ್ಲಿಗಿ ಶೌಚಾಲಯಕ್ಕೆ ಬೇರೆಯವರನ್ನು ನೇಮಿಸುವ ಬಗ್ಗೆ ತಿಳಿಸುತ್ತೇನೆ ಎನ್ನುತ್ತಾರೆ ಕೂಡ್ಲಿಗಿ ಸಾರಿಗೆ ಸಂಸ್ಥೆ ಘಟಕಾಧಿಕಾರಿ ಮರಿಲಿಂಗಪ್ಪ.