ನವದೆಹಲಿ,ಮಾ.28- ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಜೋಡಣೆ ಮಾಡುವ ಗಡುವನ್ನು ಮಾರ್ಚ್ 31 ರಿಂದ ಜೂನ್ 30 ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ.
ಗಡುವು ಮೀರಿದರೂ ಜೋಡಣೆ ಮಾಡದ ಮಂದಿಗೆ ಒಂದು ಸಾವಿರ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.
ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಗಡುವನ್ನು ವಿಸ್ತರಸಿಲಾಗಿದೆ ಎಂದು ಕೇಂದ್ರ ಹಸಕಾಸು ಸಚಿವಾಲಯ ತಿಳಿಸಿದೆ.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ – ಸಿಬಿಡಿಟಿ ತೆರಿಗೆದಾರರಿಗೆ ಇನ್ನೂ ಸ್ವಲ್ಪ ಸಮಯವನ್ನು ಒದಗಿಸಲು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಈ ಹಿಂದೆ, ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಲು ಮಾರ್ಚ್ 31ಕ್ಕೆ ಕೊನೆಯ ದಿನವಾಗಿತ್ತು. ಆದಾಯ ತೆರಿಗೆ ಇಲಾಖೆಯ ಪ್ರಕಾರ, ಹಾಗೆ ಮಾಡದಿದ್ದರೆ ಲಿಂಕ್ ಮಾಡದ ಪ್ಯಾನ್ ನಿಷ್ಕ್ರಿಯಗೊಳ್ಳಲು ಕಾರಣವಾಗುತ್ತದೆ.
ಆಧಾರ್-ಪ್ಯಾನ್ ಜೋಡಣೆ ಮಾಡುವ ಅವಧಿ ಮಾರ್ಚ್ 31, ಮೊದಲು ಉಚಿತವಾಗಿತ್ತು. ಏಪ್ರಿಲ್ 1, 2022 ಏಪ್ರಿಲ್ 1 ರಿಂದ 500 ಶುಲ್ಕವನ್ನು ವಿಧಿಸಲಾಯಿತು ಮತ್ತು 2022 ನಂತರ ಜುಲೈ 1ರಿಂದ ದಂಡದ ಮೊತ್ತವನ್ನು 1,000 ಕ್ಕೆ ಹೆಚ್ಚಿಸಲಾಗಿದೆ.
ಪ್ಯಾನ್-ಆಧಾರ್ ಲಿಂಕ್‌ನಿಂದ ವಿನಾಯಿತಿ ಪಡೆದ ವ್ಯಕ್ತಿಗಳು ಪರಿಣಾಮಗಳಿಗೆ ಜವಾಬ್ದಾರರಾಗಿರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.
51 ಕೋಟಿ ಮಂದಿ ಜೋಡಣೆ
ದೇಶದಲ್ಲಿ ಇದುವರೆಗೆ ಅಂಕಿಅಂಶಗಳ ಪ್ರಕಾರ 51 ಕೋಟಿಗೂ ಹೆಚ್ಚು ಪ್ಯಾನ್‌ಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ಪ್ರಕ್ರಿಯೆಯಲ್ಲಿ ಜೋಡಣೆ ಮಾಡಬಹುದು ಎಂದು ಸಚಿವಾಲಯ ಮಾಹಿತಿ ನೀಡಿದೆ.