ಪಾನಿಪುರಿ ಸೇವಿಸಿ ಅಸ್ವಸ್ಥನಾಗಿದ್ದ ಬಾಲಕನ ಸಾವು

ಸಂಜೆವಾಣಿ ವಾರ್ತೆ

ದಾವಣಗೆರೆ.ಮಾ.೧೮: ಮಲೇಬೆನ್ನುರು ನಲ್ಲಿ ಪಾನಿ ಪುರಿ ಸೇವಿಸಿ 19 ಮಕ್ಕಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕ  ನಗರದ ಬಾಪೂಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.  ಹಜರತ್ ಬಿಲಾಲ್ ಬಿನ್ ಇರ್ಫಾನ್ (6 ವರ್ಷ) ಮೃತ ಬಾಲಕ. ಮಲೇಬೆನ್ನೂರಿನಲ್ಲಿ ಮಾರ್ಚ್ 15ರಂದು ರಂಜಾನ್ ಹಬ್ಬದ ನಿಮಿತ್ತ ಉಪವಾಸ ಕೈಗೊಂಡಿದ್ದ ಮಕ್ಕಳು ಸಂಜೆ ಜಾಮಿಯಾ ಮಸೀದಿ ಬಳಿ ಪಾನಿಪುರಿ ಸವಿದರು.  ಪಾನಿಪುರಿ ತಿಂದವರಲ್ಲಿ 19 ಮಕ್ಕಳು ತೀವ್ರ ಹೊಟ್ಟೆನೋವು, ವಾಂತಿ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದರು. 15 ಮಕ್ಕಳು ಮಲೇಬೆನ್ನುರು ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದಿದ್ದರು ಅದರಲ್ಲಿ ನಾಲ್ವರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದ್ದು .  ಅಸ್ವಸ್ಥ ಮಕ್ಕಳನ್ನು ಕೂಡಲೇ ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಇವರಲ್ಲಿ 6 ವರ್ಷದ ಹಜರತ್ ಬಿಲಾಲ್ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿದ್ದಾರೆ.  ಇನ್ನೂ ಮೂವರು ಮಕ್ಕಳ ಸ್ಥಿತಿ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಈ ಕುರಿತು ಮಲೇಬೆನ್ನುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದೀಗ ಪಾನಿಪುರಿ ಮಾರಾಟ ಮಾಡಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.