ಪಾನಮಸಾಲಗಳಲ್ಲಿ ವಿಷಪೂರಿತ ಕಲಬೆರೆಕೆ ಆರೋಪಿಗಳ ಬಂಧನ: ಆರೋಪಿತರಿಂದ 63,22,200 ರೂ.ಸಾಮಗ್ರಿಗಳ ಜಪ್ತಿ

ಬೀದರ, ಮೇ 26 : ಹುಡುಗಿ ಶಿವಾರದಲ್ಲಿ ಪ್ರತಿಷ್ಠಿತ ಬ್ರಾಂಡನ ಪಾನ ಮಸಾಲಗಳಲ್ಲಿ ವಿಷಪೂರಿತ ಪದ್ದಾರ್ಥಗಳಿಂದ ಕಲಬೆರೆಕೆ ಮಾಡಿ ತಯ್ಯಾರಿಸಿ ಸರಬರಾಜು ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮೇ 24 ರಂದು ದಾಳಿ ಮಾಡಿ 3 ಜನ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಬೀದರ ಪೊಲೀಸ್ ಅಧೀಕ್ಷಕ ಚನ್ನಬಸವಣ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ ಹಾಗೂ ಹುಮನಾಬಾದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಜಪೂತ ಅವರ ಮಾರ್ಗದರ್ಶನದಲ್ಲಿ ಮಹೇಂದ್ರಕುಮಾರ ಪಿ.ಎಸ್.ಐ.(ಕಾಸು) ಚಿಟಗುಪ್ಪಾ, ಶಾಮರಾವ ಎಎಸ್‍ಐ, ಪಾಡುರಂಗ ಸಿಹೆಚ್‍ಸಿ 591, ಪ್ರಾಣೇಶ ಸಿಪಿಸಿ 1397, ಪ್ರೇಮಕುಮಾರ ಸಿಪಿಸಿ 1896, ಸಂಗಣ್ಣಾ ಸಿಪಿಸಿ 1460, ದುಂಡಪ್ಪಾ 1406 ಹಾಗೂ ಮಲ್ಲಿಕಾರ್ಜುನ ಸಿಪಿಸಿ 1896 ಅವರೊಂದಿಗೆ ಈ ದಾಳಿ ಮಾಡಲಾಗಿರುತ್ತದೆ.

ಸದರಿ ಆರೋಪಿತರ ವಶದಿಂದ 11 ಪಾನಮಸಾಲಾ ಪ್ಯಾಕೇಟ ಮಾಡುವ ಯಂತ್ರಗಳು ಅಂದಾಜು ಕಿಮ್ಮತ್ತು 5,50,000 ರೂ., ಐದು ಲಾರಿಗಳು ಅಂದಾಜು ಕಿಮ್ಮತ್ತು 28,00,000 ರೂ., ಪಾನ ಮಸಾಲ ತಯ್ಯಾರಿಸುವ ಕಚ್ಚಾ ಮಟೆರಿಯಲ್ 4890 ಕೆಜಿ ಅಂದಾಜು ಕಿಮ್ಮತ್ತು 7,33,500 ರೂ., ತಂಬಾಕು 504 ಕೆಜಿ ಅಂದಾಜು ಕಿಮ್ಮತ್ತು 25,200 ರೂ., ತೂಕ ಮಾಡುವ ಯಂತ್ರ ಅಂದಾಜು ಕಿಮ್ಮತ್ತು 5000., ಮೂರು ಪಾನ ಮಸಾಲಾ ಪ್ಯಾಕಿಂಗ್ ಮಾಡುವ ಮಶೀನಗಳು ಅಂದಾಜು ಕಿಮ್ಮತ್ತು 15000 ರೂ., 95 ಪಾನ ಮಸಾಲದ ಪ್ಲಾಸ್ಟಿಕ ಬಂಡಲಗಳು ಅಂದಾಜು ಕಿಮ್ಮತ್ತು 28,500 ರೂ., ಗೋವಾ ಪಾನ ಮಸಾಲ 15 ದೊಡ್ಡ ಪಾಕೇಟಗಳು, 08 ಸಣ್ಣ ಪಾಕೇಟಗಳು ಅಂದಾಜು ಕಿಮ್ಮತ್ತು 20,58,000 ರೂ., ಪಾನ ಮಸಾಲ ಪ್ಯಾಕ ಮಾಡುವ ಪದ್ದಾರ್ಥಗಳು ಅಂದಾಜು ಕಿಮ್ಮತ್ತು 57,000 ರೂ., ಒಂದು ಜನರೇಟರ ಅಂದಾಜು ಕಿಮ್ಮತ್ತು 50,000 ರೂ. ಹೀಗೆ ಒಟ್ಟು 63,22,200 ರೂ. ಬೆಲೆಬಾಳುವ ಸಾಮಗ್ರಿಗಳನ್ನು ಜಪ್ತಿ ಪಡಿಸಿಕೊಂಡು, ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.ಈ ಕಾರ್ಯಾಚರಣೆಗೆ ಬೀದರ ಪೊಲೀಸ್ ಅಧೀಕ್ಷಕರು ಅವರು ಶ್ಲಾಘಸಿರುತ್ತಾರೆಂದು ಬೀದರ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.