ಪಾನಮತ್ತ ಯುವತಿ ಮೇಲೆ ಕ್ಯಾಬ್ ನಲ್ಲೇ ರೇಪ್ ತನಿಖೆಯಲ್ಲಿ ಪತ್ತೆ

ಬೆಂಗಳೂರು,ಸೆ.೨೩-ಪಾನಮತ್ತೆ ಮೇಲೆ ಅತ್ಯಾಚಾರ ವೆಸಗಿದ ಕ್ಯಾಬ್ ಚಾಲಕ ದೇವರಾಜ್ ಕೃತ್ಯವೆಸಗಿ ಪರಾರಿಯಾಗುವ ಭರದಲ್ಲಿ ಬಿಟ್ಟು ಹೋಗಿದ್ದ ಮೊಬೈಲ್ ನಿಂದ ಕೆಲವೇ ಗಂಟೆಗಳಲ್ಲಿ ಜೀವನ್ ಭೀಮಾನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿಯು ಕ್ಯಾಬ್ ಹತ್ತಿ ನಿದ್ದೆಗೆ ಜಾರಿಗೆ ಯುವತಿ ಜೊತೆ ತನ್ನ ಮೊಬೈಲ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಆಕೆಯ ಗಮನಕ್ಕೆ ಬಾರದ ಹಿನ್ನಲೆಯಲ್ಲಿ ಆಕೆಯ ಮನೆ ಮುರುಗೇಶ್ ಪಾಳ್ಯ ಸಮಿಪವೇ ಗಾಢ ನಿದ್ದೆಯಲ್ಲಿದ್ದ ಆಕೆಯ ಮೇಲೆ ಕಾರಿನಲ್ಲಿಯೇ ಅತ್ಯಾಚಾರವೆಸಗಿದ್ದಾನೆ.
ಕೃತ್ಯದಿಂದ ಎಚ್ಚರಗೊಂಡ ಯುವತಿ ಜೋರಾಗಿ ಕಿರುಚಿಕೊಂಡಿದ್ದು ಕಂಗಾಲಾದ ಆರೋಪಿ ಕಾರಿನಿಂದ ಹೊರಬಂದಿದ್ದಾನೆ. ಅಲ್ಲದೆ ಯುವತಿಯ ಬಳಿ ಕ್ಷಮೆ ಕೇಳಿದ್ದಾನೆ.
ಚಾಲಕನ ಕೃತ್ಯದಿಂದ ಗಾಬರಿಗೊಂಡ ಯುವತಿ, ತಾನು ಕುಳಿತಿದ್ದ ಸೀಟ್ ನಲ್ಲಿದ್ದ ಮೊಬೈಲ್ ಅನ್ನು ಬ್ಯಾಗ್ ನಲ್ಲಿ ಹಾಕಿಕೊಂಡು ಬಟ್ಟೆ ಸರಿಮಾಡುತ್ತಾ ಕಾರಿನಿಂದ ಇಳಿದು ಮನೆಗೆ ಓಡಿದ್ದಾಳೆ. ಯುವತಿ ಮನೆಯತ್ತ ತೆರಳುತ್ತಿದ್ದಂತೆಯೇ ಆರೋಪಿ ಚಾಲಕ ಕ್ಯಾಬ್ ನೊಂದಿಗೆ ಪರಾರಿಯಾಗಿದ್ದಾನೆ.
ಮೊಬೈಲ್ ಹುಡುಕಿದ:
ಐದು ನಿಮಿಷಗಳ ಬಳಿಕ ಆರೋಪಿ ಮತ್ತೆ ಅದೇ ಸ್ಥಳಕ್ಕೆ ಬಂದು ಮೊಬೈಲ್ ಗಾಗಿ ಎಲ್ಲಾ ಕಡೆ ಹುಡುಕಾಡಿದ್ದಾನೆ. ಆದರೆ ಆತನಿಗೆ ಎಲ್ಲೂ ಮೊಬೈಲ್ ಸಿಗದಿದ್ದರಿಂದ ಅಲ್ಲಿಂದ ವಾಪಸ್ ಆಗಿದ್ದಾನೆ.
ಅರೋಪಿ ದೇವರಾಜ್ ಮೊಬೈಲ್, ಸಂತ್ರಸ್ತೆ ಜೊತೆ ಇದ್ದ ಕಾರಣ ಊಬರ್ ಟ್ರಿಪ್ ಸಹ ಮುಕ್ತಾಯವಾಗಿರಲಿಲ್ಲ.
ಮನೆಗೆ ಬಂದ ಬಳಿಕ ಯುವತಿ ಬೆಳಗ್ಗಿನ ಜಾವ ೧೧೨ ಗೆ ಕರೆಮಾಡಿ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಪೊಲೀಸರು ಯುವತಿ ಮನೆಗೆ ಹೋಗಿ ಮಾಹಿತಿ ಪಡೆದಿದ್ದಾರೆ.

ಕೇಸ್ ದಾಖಲು:
ನಂತರ ಮಹಿಳಾ ಅಧಿಕಾರಿ ಕರೆಸಿ ಠಾಣೆಗೆ ಯುವತಿಯನ್ನು ಕರೆದುಕೊಂಡು ಹೋಗಿ ಬೆಳಿಗ್ಗೆ ೭ ಗಂಟೆಗೆ ಎಫ್ ಐ ಆರ್ ದಾಖಲಿಸಿ ಅರೋಪಿ ಮೊಬೈಲ್ ಮತ್ತು ಕಾರ್ ನಂಬರ್ ಊಬರ್ ರಿಜಿಸ್ಟರ್ ಅನ್ವಯ ಶೋಧ ಕೈಗೊಂಡಿದ್ದಾರೆ.
ಹಲಸೂರು ಎಸಿಪಿ ಕುಮಾರ್ ನೇತೃತ್ವದ ಜೀವನ್ ಭೀಮಾನಗರ ಪೊಲೀಸರ ವಿಶೇಷ ತಂಡವು ಕಾರ್ಯಾಚರಣೆ ಕೈಗೊಂಡು ಅವಲಹಳ್ಳಿಯ ರೂಮ್ ನಲ್ಲಿದ್ದ ಅರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದೆ.

ಬಟ್ಟೆಗಳು ವಶ:
ಆರೋಪಿಯು ಕಾರಿನಲ್ಲಿಯೇ ಅತ್ಯಾಚಾರ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು ಆರೋಪಿ ಹಾಗೂ ಸಂತ್ರಸ್ಥೆಯ ಬಟ್ಟೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಯುವತಿ ಹೇಳಿಕೆ:
ಮನೆ ಹತ್ತಿರ ಬಂದಾಗ ಚಾಲಕ ದೇವರಾಜು ನಿದ್ದೆಯಲ್ಲಿದ್ದ ನನ್ನನ್ನು ಎಬ್ಬಿಸಲು ಮುಂದಾಗಿ ಮೈ ಮೇಲೆ ಬಿದ್ದು ನನ್ನ ಬಟ್ಟೆ ಬಿಚ್ಚಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬುದಾಗಿ ವಿಚಾರಣೆ ವೇಳೆ ಯುವತಿ ತಿಳಿಸಿದ್ದಾರೆ.
ಮೊದಲು ಅವನು ಬಟ್ಟೆ ಬಿಚ್ಚಿ ನಂತರ ನನ್ನ ಬಟ್ಟೆಯನ್ನು ಬಿಚ್ಚಿ ಬಳಿಕ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಿ ದೂರು ನೀಡಿದ್ದು ಇಬ್ಬರ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ. ಅರೋಪಿ ಸಹ ಪೊಲೀಸರು ವಶಕ್ಕೆ ಪಡೆಯುವಾಗ ಅದೇ ಬಟ್ಟೆಯಲ್ಲಿ ಇದ್ದ, ಇತ್ತ ಆಕೆಯೂ ಅದೇ ಬಟ್ಟೆಯಲ್ಲಿ ಇದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಇಂದು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಮತ್ತೆ ಪೊಲೀಸ್ ವಶಕ್ಕೆ ಪಡೆಯಲಿದ್ದಾರೆ ಇಬ್ಬರಿಗೂ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಅತ್ಯಾಚಾರ ನಡೆದಿರುವ ಬಗ್ಗೆ ವೈದ್ಯರು ಮೌಕಿಕವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.