ಪಾದ್ರಗಳ ಆಶೀರ್ವಾದ ಪಡೆದ ಮಂಜುನಾಥ್

ಕೋಲಾರ,ಮೇ,೧:ನಗರದ ವಿವಿಧ ವಾರ್ಡ್‌ಗಳಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೊತ್ತೂರು ಮಂಜುನಾಥ್ ತಮ್ಮ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಭೇಟಿ ನೀಡಿ ಮತ ಯಾಚಿಸಿದರು. ನಗರದ ಹಳೆ ನಿಲ್ದಾಣ ಸಮೀಪದ ಚರ್ಚ್‌ನಲ್ಲಿ ಭಾನುವಾರ ವಿಶೇಷ ಪ್ರಾರ್ಥನೆ ಸಂದರ್ಭದಲ್ಲಿ ಕೊತ್ತೂರು ಮಂಜುನಾಥ್ ಬೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಪಾದ್ರಿಗಳ ಹಾಗೂ ಫಾದರ್ ಬಳಿ ಆಶೀರ್ವಾದ ಪಡೆದರು,
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್. ಅನಿಲ್ ಕುಮಾರ್, ನಸ್ಸೀರ್ ಆಹಮದ್, ಮುಖಂಡರಾದ ಚಂಜಿಮಲೆ ರಮೇಶ್, ನವೀನ್ ಕುಮಾರ್, ವೈ.ಶಿವಕುಮಾರ್, ನಂದಿನಿ ಪ್ರವೀಣ್, ಭರತ್‌ರಾಯ್ ಮುಂತಾದವರು ಇದ್ದರು,