ಪಾದಯಾತ್ರೆ ಮೂಲಕ ಮುತ್ತಿಗೆ ಪ್ರತಿಭಟನೆ ಮಾರೆಪ್ಪ ಭಾಗಿ

ರಾಯಚೂರು,ಮಾ.೦೪- ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜನ ವಿರೋಧಿ ನೀತಿಗಳನ್ನು ಖಂಡಿಸಿ, ಇಂದು ಕೆಪಿಸಿಸಿ ನಡೆಸಿರುವ ಸಿ.ಎಂ ನಿವಾಸಕ್ಕೆ ಮುತ್ತಿಗೆ ಪ್ರತಿಭಟನೆಯಲ್ಲಿ ತಲಕಾಯಿ ಮಾರೆಪ್ಪ ತಮ್ಮ ಅಪಾರ ಬೆಂಬಲಿಗರೊಂದಿಗೆ ಭಾಗವಹಿಸಿದ್ದರು.
ಬೆಂಗಳೂರಿನ ಗೃಹ ಕಛೇರಿ ಕೃಷ್ಣಗೆ ಕಾಂಗ್ರೆಸ್ ಪಕ್ಷದ ರಾಜ್ಯ ವರಿಷ್ಠರು ಪಾದಯಾತ್ರೆ ಮೂಲಕ ಮುತ್ತಿಗೆ ಪ್ರತಿಭಟನೆ ನಡೆಸಿದರು. ಅದರಲ್ಲಿ ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ತಲಕಾಯಿ ಮಾರೆಪ್ಪ ಭಾಗವಹಿಸಿ, ಲೂಟಿಕೋರ ಸರ್ಕಾರ ತೊಲಗಲಿ, ನೈತಿಕತೆ ಇದ್ದರೆ, ಸಿಎಂ ರಾಜಿನಾಮೆ ಕೊಡಲಿ, ಸರ್ಕಾರ ವಜಾಗೊಳಿಸಲಿ ಎಂದು ಘೋಷಣೆಗಳನ್ನು ಹಾಕುತ್ತಾ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ತಲಕಾಯಿ ಮಾರೆಪ್ಪರವರು ಸಿದ್ದರಾಮಯ್ಯ,ಹಾಗೂ ಡಿ.ಕೆ.ಶಿವಕುಮಾರ ಅವರ ಆದೇಶದಂತೆ ಬೆಂಬಲಿಗರ ಜೊತೆಗೆ ಪ್ರತಿಭಟನೆಯಲ್ಲಿ ಭಾಗವಹಿಸಿ,ಸರ್ಕಾರ ಬಡವರ ವಿರೋಧಿಯಾಗಿದೆ.ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟುತ್ತಿವೆ.ಬಡ ಮತ್ತು ಮಧ್ಯಮ ವರ್ಗ ಬದುಕುವುದೇ ಕಷ್ಟಕರವಾಗಿದೆ ಎಂದು ತಮ್ಮ ಆಕ್ರೋಶ ಹೊರ ಹಾಕಿದರು..
ಬಿಜೆಪಿ ಶೇ.೪೦ ರಷ್ಟು ಕಮಿಷನ್ ಸರ್ಕಾರ ಎಂಬುದಕ್ಕೆ ಮಾಡಾಳ ವಿರೂಪಾಕ್ಷಿ ಚನ್ನಗಿರಿ ಬಿಜೆಪಿ ಶಾಸಕರ ಪ್ರಕರಣವೇ ಸಾಕ್ಷಿ.ಅವರು ಮತ್ತು ಆತನ ಪುತ್ರ ಕಂತೆ, ಕಂತೆ ಹಣದ ಮೂಲಕ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ ಎಂದರು.ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜಿನಾಮೆಗೆ, ಒತ್ತಾಯಿಸಿ, ಇಂದು ನಡೆದಿರುವ ಪ್ರತಿಭಟನೆಯಲ್ಲಿ ತಲಕಾಯಿ ಮಾರೆಪ್ಪ ಸಕ್ರಿಯವಾಗಿ ಭಾಗವಹಿಸಿದ್ದಾರೆ.